4gvt2

ರಾಜಶೇಖರ ಹಿಟ್ನಾಳ 1 ಲಕ್ಷ ಮತಗಳ ಅಂತರದಿಂದ ಗೆಲುವು

ಕರುನಾಡ ಬೆಳಗು ಸುದ್ದಿ

ಗಂಗಾವತಿ, 5- ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೇಸ ಅಭ್ಯರ್ಥಿ ರಾಜಶೇಖರ ಹಿಟ್ನಾಳರವರು ೧ಲಕ್ಷ ಮತಗಳ ಅಂತದಿAದ ಗೆಲುವುದು ಖಚಿತ ವಾಗಿದೆ ಎಂದು ವಿಧಾನ ಪರಿಷತ ಮಾಜಿ ಸದಸ್ಯ,ರಾಜ್ಯ ಕಾಂಗ್ರೇಸ ಉಪಾಧ್ಯಕ್ಷ ಹೆಚ್.ಆರ್. ಶ್ರೀನಾಥ ಹೇಳಿದರು.

ಅವರು ನಗರದಲ್ಲಿ ಅವರ ನಿವಾಸದಲ್ಲಿ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗ್ಯಾರಂಟಿ ಯೋಜನೆಗಳು ಅಭ್ಯರ್ಥಿ ಗೆಲುವಿಗೆ ಶ್ರೀರಕ್ಷೆಯಾಗಲಿವೆ. ನಮ್ಮಲ್ಲಿ ಭಿನ್ನಾಭಿಪ್ರಾಯವಿದ್ದರೂ ಅವುಗಳನ್ನು ಬದಿಗೋತ್ತಿ ಕಾಂಗ್ರೇಸ ಅಭ್ಯರ್ಥಿ ಗೆಲುವು ಒಂದೇ ಮುಖ್ಯವಾಗಿದೆ. ಈಗಾಗಲೇ ರಾಜ್ಯದಲ್ಲಿ ೨೮ಸ್ಥಾನಗಳಲ್ಲಿ ಕಾಂಗ್ರೇಸ ಪಕ್ಷ ೧೫ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲುವುದು ಖಚಿತವಾಗಿದೆ ಎಂದರು.

ಈ ಸಂದರ್ಭದಲ್ಲಿ ರಾಜಶೇಖರ ಮುಸ್ಟೂರು, ಪ್ರೂಟ್ ಬಾಬಾ(ಇಸ್ಮಾಯಿಲ್) ಸಲಿಂ ಭಗವಾನ್, ಭಕ್ಷಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!