
ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲಾ : ಹೇಮಲತಾ ನಾಯಕ ಆರೋಪ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 02- ಹೆಣ್ಣುಮಕ್ಕಳು ಸುರಕ್ಷತೆ ಇಲ್ಲಾ ರಾಜ್ಯ ಸರ್ಕಾ ಸಂಪೂರ್ಣ ವಿಫಲ ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯುತ್ತಿಲ್ಲಾ ಎಂದು ವಿಧಾನ ಪರಿಷತ್ ಸದಸ್ಯ ಹೇಮಲತಾ ನಾಯಕ ಹೇಳಿದರು.
ಅವರು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದರು.
ಭ್ರೂಣ ಹತ್ತೆಗೆ ರಾಜ್ಯ ಸರ್ಕಾರ ಗಭ್ರ ಪಾತ ಮಾಡುವವರಿಗೆ ರಕ್ಷಣೆ ನೀಡುತ್ತಿದೆ , ಸಚಿವ ದಿನೇಶ ಗುಂಡುರಾವ ಅವರು ಅವರನ್ನು ರಕ್ಷಸುತ್ತಿದೆ. ರಾಜ್ಯದಲ್ಲಿ ಹೇಣ್ಣು ಭ್ರೂಣ ಹತ್ತೆ : ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಎಲ್ಲರೂ ತಲೆ ತಗ್ಗಿಸುವ ಪ್ರಕರಣವಾಗಿದ್ದು ಇದರಲ್ಲಿ ಆಡಳಿತ ವ್ಯವಸ್ಥೆಯ ವೈಪಲ್ಯವೂ ಎದ್ದು ಕಾಣುತ್ತಿದೆ. ಇಂತಹ ದುಷ್ಕೃತ್ಯದಲ್ಲಿ ತೊಡಗಿರುವವರಿಗೆ ಮರಣದಂಡನೆಯಂತಹ ಶಿಕ್ಷೆಯನ್ನು ವಿಧಿಸಬೇಕು, ಹೆಣ್ಣು ಭ್ರೂಣಹತ್ಯೆ ಮಹಾ ಪಾಪ, ಪ್ರಕೃತಿದತ್ತವಾಗಿ ದೊರೆಯುವ ಸಂತಾನ ಜನಿಸುವ ಮ ಗಂಡು ಅಥವಾ ಹೆಣ್ಣು ಎಂದು ತಿಳಿಯುವ ಪಾಪಕಾರ್ಯಕ್ಕೆ ಇಳಿದು ಬಿಟ್ಟಿದ್ದಾರೆ ಎಂದು ಆರೋಪಿಸಿದರು.
ರಾಜ್ಯಾದ್ಯಂತ ಸುಮಾರು 4 ಸಾವಿರ ನಕಲಿ ವೈದ್ಯರು ಇದ್ದಾರೆ. ಭ್ರೂಣಹತ್ಯೆ ಪ್ರಕರಣಗಳು ಹಳ್ಳ ಹಿಡಿಯುವತ್ತ ಸಾಗಿವೆ. ಮೈಸೂರು. ಮಂಡ್ಯ, ದುರಾಸೆಗೆ ವೈದ್ಯರ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಹೊಸಕೋಟೆ, ಬಾಗಲಕೋಟೆ, ಬಿಜಾಪುರ, ಬೆಂಗಳೂರು ಜಿಲ್ಲೆಗಳಲ್ಲಿ ನಡೆದ ಭ್ರೂಣ ಹತ್ಯೆ ಕೇಸ್‌ಗಳ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲು ಪ್ರಕರಣಗಳನ್ನು ವಹಿಸಿದರೂ ಯಾವುದೇ ಪ್ರಗತಿ ಕಂಡಿಲ್ಲ. ಮಂತ್ರಿಗಳು, ಶಾಸಕರು, ಸಂಸದರು ಸೇರಿದಂತೆ ಅನೇಕ ಪ್ರಭಾವಿಗಳ ವೈದ್ಯರ ಬೆನ್ನೆಲುಬಾಗಿ ನಿಂತಿದ್ದಾರೆ.
ಎರಡು ವರ್ಷದಲ್ಲಿ 900ಕ್ಕೂ ಹೆಚ್ಚು ಹೆಣ್ಣುಭ್ರೂಣ ಕೊಂದು ಹಾಕಿದ್ದಾರೆ. ಗರ್ಭಪಾತಕ್ಕೆ 50ಸಾವಿರ ದಿಂದ 1 ಲಕ್ಷ ರೂಗಳ ಹಣ ವಸೂಲಿ ಮಾಡಿ ಹಣಕ್ಕಾಗಿಯೇ ಮಾನವಿಯತೆ ನವಜಾತು ಶಿಶುಗಳನ್ನು ಜೀವಂತ ಕೊಲ್ಲುವ ದಂಧೆಗೆ ಇಳಿದಿರುವುದು ಆಶ್ಚರ್ಯಕರ ಸಂಗತಿಯಾಗಿದೆ. ರಾಜ್ಯದ ಹತ್ಯೆ ಯತೇಚ್ಯವಾಗಿ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಇಲ್ಲದಂತಾಗಿದೆ. ಭ್ರೂಣ ಲಿಂಗ ಪತ್ತೆ ತಡೆಗೆ ಸಂಬ ಕಠಿಣ ಕಾನೂನನ್ನು ಜಾರಿಗೊಳಿಸಬೇಕು.
ಈ ರಿತೀಯ ಕಾನೂನು ಬಾಹಿರ ಪದ್ಧತಿಗಳು ಸಮಾಜಕ್ಕೆ ಹಾಗೂ ವೃತ್ತಿಗೆ ಹಾನಿಕರ, ಭ್ರೂಣ ಲಿಂಗ ಪತ್ತೆ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಕೂಲಂಕಷವ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇಕು. ಹೆಣ್ಣು ಭ್ರೂಣ ಹತ್ಯೆ ತಡೆಗೆ ಕಾನೂನು ಕ್ರಮಗಳ ಜತೆ ಜಾಗೃತಿ ಮೂಡಿಸುವ ಕೆಲಸವೂ ಆಗಬೇಕು. ಹೆಣ್ಣು ಗಂಡು ಸಮಾನ ಎಂದು ಸಾರಿ, ಮಹಿಳೆಯರನ್ನು ಗೌರವಿಸ ರಾಜ್ಯದಲ್ಲಿ ನಡೆಯುತ್ತಿರುವ ಭ್ರೂಣ ಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಲೆ ಇದೆ. ರಾಜ್ಯದು ಆಸ್ಪತ್ರೆಗಳು ಪರವಾನಿಗೆ ಇಲ್ಲದೆ ಚಾಲ್ತಿಯಲ್ಲಿವೆ ಅದರ ವಿರುದ್ಧ ಕ್ರಮ ಕೈಗೋಳ್ಳ ಬೇಕು ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ನವೀನ ಗುಳಗಣ್ಣ ನವರ, ರಾಜು ಬಾಕಳೆ , ಅಮೀತ ಕಂಪ್ಲೀಕರ ಇತರರು.