
ರಾಜ್ಯದ ಸಂಸ್ಕೃತಿ ಹಾಗೂ ಕಲೆ ಬಿಂಬಿಸುವ ನಿಟ್ಟಿನಲ್ಲಿ ಅದ್ದೂರಿ ಹಂಪಿ ಉತ್ಸವ : ಸಚಿವ ತಂಗಡಗಿ ಶಿವರಾಜ್
ಕರುನಾಡ ಬೆಳಗು ಸುದ್ದಿ
ವಿಜಯನಗರ,3- ರಾಜ್ಯದ ಸಂಸ್ಕೃತಿ ಹಾಗೂ ಕಲೆ ಬಿಂಬಿಸುವ ನಿಟ್ಟಿನಲ್ಲಿ ಅದ್ದೂರಿಯಾಗಿ ಹಂಪಿ ಉತ್ಸವ ಆಯೋಜಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ತಂಗಡಗಿ ಶಿವರಾಜ್ ಸಂಗಪ್ಪ ಅವರು ಹೇಳಿದರು.
ಅಖಂಡ ಭಾರತ ಹಾಗೂ ಅಖಂಡ ಕರ್ನಾಟಕ ಹಾಗೇಯೇ ಉಳಿಯಬೇಕು. ಕನಕಗಿರಿ ಉತ್ಸವ ಆಯೋಜಿಸುವ ನಿಟ್ಟಿನಲ್ಲಿ ನಾಳೆ ಪೂರ್ವಭಾವಿ ಸಭೆ ಕರೆಯಲಾಗಿದೆ. ಸಭೆ ಆಯೋಜನೆ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ಸರ್ಕಾರರದಿಂದಲೇ ಆನೆಗುಂದಿ ಉತ್ಸವ ಸಹ ಆಚರಿಸಲಾಗುವುದು ಎಂದು ಸಚಿವ ತಂಗಡಗಿ ಶಿವರಾಜ್ ಸಂಗಪ್ಪ ಪ್ರರ್ತಕರ್ತರ ಪ್ರಶ್ನೆಗೆ ಉತ್ತರಿಸಿದರು.