
ರಾಜ್ಯಾದ್ಯಂತ ಶಾಲಾ ಪ್ರಾರಂಭೋತ್ಸವ : ಮಕ್ಕಳನ್ನು ಸ್ವಾಗತ ಮಾಡಿದ ಶಿಕ್ಷಕರು ಸದಸ್ಯರು
ಕರುನಾಡ ಬೆಳಗು ಸುದ್ದಿ
ಮರಿಯಮ್ಮನಹಳ್ಳಿ, 31- ರಾಜ್ಯಾದ್ಯಂತ ಶಾಲಾ ಪ್ರಾರಂಭೋತ್ಸವ ಅಂಗವಾಗಿ ಅಧಿಕೃತವಾಗಿ ಶಾಲಾಮಕ್ಕಳನ್ನು ಇಂದು ಬರಮಾಡಿಕೊಳ್ಳಲಾಯಿತು.
ಪಟ್ಟಣದ ಎ.ಕೆ.ಕಾಲೋನಿಯ 15ನೇ ವಾರ್ಡಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಬ್ಬದ ವಾತಾವರಣ ಕಂಡುಬಂದಿತು ಶಾಲಾ ಪ್ರಾರಂಭೋತ್ಸವ ದಿನದಂದು ಮಕ್ಕಳನ್ನು ಮುಖ್ಯ ಗುರುಗಳಾದ ಸಿ. ವೆಂಕಟೇಶ್, ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಹೆಚ್. ನಾಗರಾಜ ,15ನೇ ವಾರ್ಡಿನ ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಎಸ್.ಡಿ.ಎಂ.ಸಿ.ಸದಸ್ಯರಾದ ಮರಡಿ ಸುರೇಶ 2ನೇ ವಾರ್ಡಿನ ಸದಸ್ಯರಾದ ಪರುಶುರಾಮ ಸಂಕೇತಿಕವಾಗಿ ಸ್ವಾಗತ ಮಾಡಿಕೊಂಡರು. ಶಾಲೆಯಲ್ಲಿ 150ಮಕ್ಕಳಿದ್ದು ಮೊದಲನೇ ದಿನವೇ 80ಮಕ್ಕಳು ಹಾಜರಿದ್ದಿದ್ದು ಕಂಡುಬಂದಿತು. ಇದೇ ಸಂಧರ್ಭದಲ್ಲಿ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಶಿಕ್ಷಕರಾದ ಸಿ. ರಂಗಪ್ಪ, ಕಸ್ತೂರಿ ಸೋಮಪ್ಪ ಇತರರಿದ್ದರು.