66

ಕರ್ನಾಟಕ ದಲಿತ ಸಂಘರ್ಷ ಸಮಿತಿ

ರಾಜ್ಯ ಮಹಿಳಾ ಅಧ್ಯಕ್ಷರಾಗಿ ಎಂ.ಶಾಂತ ಅವರು ಆಯ್ಕೆ

ಕರುನಾಡ  ಬೆಳಗು ಸುದ್ದಿ

ಬಳ್ಳಾರಿ,ಮಾ.01 – ಬಳ್ಳಾರಿ ನಗರದ ಒಂದನೇ ವಾರ್ಡಿನ ತಾಳೂರು ಮುಖ್ಯ ರಸ್ತೆಯ ರಾಮನಗರದ ನಿವಾಸಿಯಾದ ಶ್ರೀಮತಿ ಎಂ.ಶಾಂತ ಅವರನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ವಿಮೋಚನಾವಾದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ರಾಜ್ಯಾಧ್ಯಕ್ಷರಾದ ಆರ್.ಗುರುಮೂರ್ತಿ ಅವರು ಆಯ್ಕೆ ಮಾಡಿದ್ದಾರೆ.

ನೂತನ ರಾಜ್ಯಾಧ್ಯಕ್ಷರಾದ ಶ್ರೀಮತಿ ಎಂ.ಶಾಂತ ಇವರು ಮುಂದೆ ಸಂಘದ ಸಂಘಟನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂಘದ ತತ್ವ ಸಿದ್ದಾಂತ ಹಾಗೂ ಧ್ಯೇಯ ಧೋರಣೆಯಲ್ಲಿ ವಿಶ್ವಾಸವನ್ನು ಇಟ್ಟುಕೊಂಡು ಸಂಘದ ಮುಖಂಡರುಗಳೊಂದಿಗೆ ಸತತವಾಗಿ ಸಂಪರ್ಕವನ್ನು ಇಟ್ಟುಕೊಂಡು ಸಂಘವನ್ನು ಮುನ್ನಡೆಸಬೇಕೆಂದು ತಿಳಿಸಿ ಆದೇಶ ಪತ್ರವನ್ನು ವಿತರಿಸಿದರು.

ಪ್ರಸ್ತುತ ರಾಜ್ಯ ಮಹಿಳಾ ಘಟಕ ಅಧ್ಯಕ್ಷರಾದ ಎಂ.ಶಾಂತ ಅವರು ಬಳ್ಳಾರಿ ನಗರದಲ್ಲಿ ಜನಿಸಿ ವಿವಿಧ ಸಂಘಟನೆಗಳಲ್ಲಿ ಸೇರಿಕೊಂಡು ಹೋರಾಟಗಳಲ್ಲಿ ಕಾರ್ಯಕ್ರಮಗಳಲ್ಲಿ ಮತ್ತು ಸಮಾಜ ಸೇವೆಯಲ್ಲಿ ಪಾಲ್ಗೊಂಡು ಜನರ ಜೊತೆ ಬೆರೆತು ಪ್ರೀತಿಯನ್ನು ಗಳಿಸಿ ಸೇವೆಯನ್ನು ಸಲ್ಲಿಸಿದ್ದಾರೆ. ಈ ಹಿಂದೆ ಇವರು ಶಾರದಾಂಭ ಮಹಿಳಾ ನೆರಾವರಿ ಸಮಿತಿ ಜಿಲ್ಲಾ ಅಧ್ಯಕ್ಷರಾಗಿದ್ದಾರೆ. ಅಲ್ಲದೆ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದಲ್ಲಿ ಬಳ್ಳಾರಿ ನಗರ ಅಧ್ಯಕ್ಷರಾಗಿ ಹೋರಾಟಗಳನ್ನು, ಸಮಾಜ ಸೇವೆಯನ್ನು ಮಾಡಿದ್ದಾರೆ, ಮಾದಿಗ ದಂಡೋರ (ಮಂದ ಕೃಷ್ಣ ಮಾದಿಗ) ಸಂಘಟನೆಯಲ್ಲಿ ಬಳ್ಳಾರಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ವೆಂಕಟೇಶ್ ಬಣದಲ್ಲಿ) ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಹುದ್ದೆಯನ್ನು ನಿರ್ವಹಿಸಿ ಕೆಲವು ದಿನಗಳ ನಂತರ ರಾಜ್ಯ ಉಪಾಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.

ಈ ಬಾರಿ ಕರ್ನಾಟಕ ರಾಜ್ಯದ ದಲಿತ ಸಂಘರ್ಷ ಸಮಿತಿಯಲ್ಲಿ ಮಹಿಳಾ ಘಟಕದ ಅಧ್ಯಕ್ಷರಾಗಿ ಎಂ.ಶಾಂತ ಅವರು ಆಯ್ಕೆಯಾಗಿದ್ದು. ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಸಂಘಟನೆಯನ್ನು ಕಟ್ಟುವ ಮೂಲಕ ಪ್ರತಿ ಹಳ್ಳಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವಿಮೋಚನವಾದ ಸಂಘಟನೆಯು ಹಬ್ಬಲಿ ಎಂದು ಅಲ್ಲದೆ ಮಹಿಳೆಯರಿಗೆ ಆಗುವ ಅನ್ಯಾಯ ದೌರ್ಜನ್ಯ ಮತ್ತು ಅನ್ಯಾಯದ ವಿರುದ್ಧ ಧ್ವನಿಯೆತ್ತಲಿ ಮತ್ತು ಯಾವುದೇ ಸಮಾಜದಲ್ಲಿ ಇರುವಂತ ಜನತೆಗೆ ಸರಕಾರದ ಸೌಲಭ್ಯಗಳನ್ನು ತಲುಪಿಸುವಲ್ಲಿ ಕೂಡ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ರಾಜ್ಯದ್ಯಕ್ಷರಾದ ಆರ್.ಗುರುಮೂರ್ತಿಯವರು ರಾಜ್ಯಾಧ್ಯಕ್ಷರಾದ ಎಂ.ಶಾಂತ ಅವರಿಗೆ ತಿಳಿಸಿ ಅಯ್ಕೆ ಮಾಡಿದ್ದಾರೆ.

ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಎಂ.ಶಾಂತ ಅವರು ಸಂಘದ ಸಿದ್ಧಾಂತಗಳಿಗೆ ಬದ್ಧರಾಗಿ ಕೆಲಸ ಮಾಡಿಕೊಂಡು ಹೋಗುತ್ತೇನೆ ರಾಜ್ಯದ ಒಂದು ಜವಾಬ್ದಾರಿಯನ್ನು ಕೊಟ್ಟ ಗುರುಮೂರ್ತಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಪತ್ರಿಕೆ ಮಾಧ್ಯಮದ ಮೂಲಕ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!