
ರಾಬಕೋವಿ ಹಾಲು ಒಕ್ಕೂಟದಲ್ಲಿ ಹಿಟ್ನಾಳ ದಬ್ರಾರ್ ಆರಂಭ
ಚುನಾವಣೆಯಿಂದ ದೂರ ಉಳಿದ ಮಾಜಿ ಅದ್ಯಕ್ಷ ಭೀಮ ನಾಯ್ಕ
ರಾಬಕೋವಿ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಶಾಸಕ ರಾಘವೇಂದ್ರ ಹಿಟ್ನಾಳ್ ಅವಿರೋಧ ಆಯ್ಕೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 25- ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ( ರಾ ಬ ಕೋ ವಿ ) ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಶುಕ್ರವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶುಕ್ರವಾರ ಕೆಎಂಎಫ್ ಕಚೇರಿಯಲ್ಲಿ ನಡೆದ ಚುನಾವಣೆ ಅಧ್ಯಕ್ಷ ಸ್ಥಾನಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರು ಬಳ್ಳಾರಿ ಅಸಿಸ್ಟೆಂಟ್ ಕಮಿಷನರ್ ಹಾಗೂ ಚುನಾವಣೆ ಅಧಿಕಾರಿಗಳು ಪ್ರಮೋದ್ ಅವರು ಪ್ರಕಟಿಸಿದ್ದಾರೆ.
ಇನ್ನು ಕೆಎಂಎಫ್ ಒಕ್ಕೂಟದ ಉಪಾಧ್ಯಕ್ಷ ಸ್ಥಾನಗಳಿಗೆ ಗಂಗಾವತಿಯ ಎನ್ ಸತ್ಯನಾರಾಯಣ ಅವರು ಮಾತ್ರವೇ ನಾವು ಪತ್ರಸಲ್ಲಿಸಿದ್ದ ಕಾರಣ ಅವರು ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ಹಿಂದಿನ ಒಕ್ಕೂಟದ ಅಧ್ಯಕ್ಷ ಹಗರಿಬೊಮ್ಮನಹಳ್ಳಿಯ ಭೀಮ ನಾಯ್ಕ ಅವರು ಚುನಾವಣೆಗಳಿಗೆ ದೂರ ಉಳಿದಿದ್ದಾರೆ.
ಒಕ್ಕೂಟದ 12 ನಿರ್ದೇಶಕ ಸ್ಥಾನಗಳಲ್ಲಿ ಹಿಟ್ನಾ 7 ಮತ್ತು ಭೀಮನಾಯ್ಕ್ ಅವರು 5 ನಿರ್ದೇಶಕರ ಬಲ ಹೊಂದಿದ್ದರು. ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಕಚೇರಿಯ ಎದುರು ಜಮಾಯಿಸಿದ ನೂರಾರು ಅಭಿಮಾನಿಗಳು ಮತ್ತು ಬೆಂಬಲಿಗರು ಪಟಾಕಿ ಸಿಡಿಸಿ ಕೊಣದು ಕುಪ್ಪಳಿಸಿದರು.
ಈ ಸಂದರ್ಭದಲ್ಲಿ, ಒಕ್ಕೂಟದ ನಿರ್ದೇಶಕರಾದ ಕಮಲಮ್ಮ ಗಾವರಾಳ, ಸತ್ಯನಾರಾಯಣ, ಕೃಷ್ಣಾರೆಡ್ಡಿ, ಭೀಮನಗೌಡ, ಪ್ರವೀಣ್ ಕುಮಾರ್, ಸೀತಾರಾಮ ಲಕ್ಷ್ಮಿ, ಮಂಜುನಾಥ್ ನಡೆಸೇನಿ ಗಳ ಜತೆಗೆ, ಬಳ್ಳಾರಿಯ ಶಾಸಕರು, ಮತ್ತು ಕೊಪ್ಪಳ ಮಾಜಿ ಶಾಸಕರು ಬಸವರಾಜ್ ಹಿಟ್ನಾಳ್, ಕೊಪ್ಪಳ ಸಂಸದ, ರಾಜಶೇಖರ್ ಹಿಟ್ನಾಳ್ ಮಾಜಿ ಸಂಸದ ಸಂಗಣ್ಣ ಕರಡಿ, ಕಳಕಪ್ಪ ಕಂಬಳಿ, ಅರವಿಂದ ಮಂದಲಮನಿ, ಮಹೇಶ್ ಗ ವರಾಳ, ಗಗನ್ ನೋಟಗಾರ, ಅಹಮದ್ ಪಟೇಲ್, ಧನಂಜಯ್, ದೊಡ್ಡಪ್ಪ ದೇಸಾಯಿ ಸೇರಿದಂತೆ ಒಕ್ಕೂಟದ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.