
ರಾಮೋತ್ಸವ ವಿವಿಧಡೆ ವಿಶೇಷ ಧಾರ್ಮಿಕ ಕಾರ್ಯ ಪ್ರಸಾದ ಅನ್ನ ದಾಸೋಹ ಮಾಜಿ ಶಾಸಕ ಸೋಮಲಿಂಗಪ್ಪ ಭಾಗಿ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,23- ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಮುಖಂಡರು ಮಾಜಿ ಶಾಸಕ ಎಂಎಸ್ ಸೋಮಲಿಂಗಪ್ಪ ಅವರು ಅಯೋಧ್ಯೆ ರಾಮ ಜನ್ಮ ಭೂಮಿಯಲ್ಲಿ ರಾಮಮಂದಿರ ಪ್ರತಿಷ್ಠಾಪನೆ ಗೊಳ್ಳುತ್ತಿರುವುದು 11 ದಿನ ಪ್ರಧಾನಿ ನರೇಂದ್ರ ಮೋದಿಯವರು ಉಪವಾಸ ವ್ರತ ಮಾಡಿದ್ದು ನಮ್ಮ ನಿಮ್ಮೆಲ್ಲರ ಸೌಭಾಗ್ಯ ಎಂದು ಸೋಮಲಿಂಗಪ್ಪ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದು ಸುಪ್ರೀಂ ಕೋರ್ಟ್ ತೀರ್ಪು ನ್ಯಾಯ ನೀಡಿದ ಹಿನ್ನೆಲೆ ಶ್ರೀರಾಮನ ಮಂದಿರ ನಿರ್ಮಾಣವಾಗುತ್ತಿದೆ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು ಸಿರುಗುಪ್ಪ ನಗರದ ಪ್ಯಾಟೆ ಆಂಜನೇಯ ಸ್ವಾಮಿ ಅಭಯಾಂಜನೇಯ ಹುಚ್ಚಿ ರಪ್ಪ ತಾತ ಮಠ ಅಮೃತೇಶ್ವರ ದೇವಸ್ಥಾನ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ರಾಮನಾಮ ಸ್ಮರಣೆ ಭಜನೆ ಕಾರ್ಯಕ್ರಮ ನಡೆಸಿದರು ನೇತಾಜಿ ವ್ಯಾಯಾಮ ಶಾಲಾ ಮೈದಾನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಆರ್ ಎಸ್ ಎಸ್ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಹಯೋಗದಲ್ಲಿ ಅಯೋಧ್ಯೆಯಲ್ಲಿ ನಡೆದ ಶ್ರೀರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯ ನೇರ ಪ್ರಸಾರದ ವೀಕ್ಷಣೆಗೆ ಸೇವಾ ಕಾರ್ಯಕರ್ತರು ವ್ಯವಸ್ಥೆ ಮಾಡಿದ್ದರು ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮ ವೀಕ್ಷಿಸುತ್ತಿರುವುದು ಕಂಡುಬಂತು ಮಾಜಿ ಶಾಸಕ ಬಿಜೆಪಿಯ ಪ್ರಮುಖರಾದ ತಮ್ಮ ಆಪ್ತ ರೊಂದಿಗೆ ಸಿರುಗುಪ್ಪ ತಾಲೂಕಿನ ಬಾಗೇವಾಡಿ ಬಳಿ ನಂದಿಪುರ ಕ್ಯಾಂಪ್ ಶ್ರೀ ರಾಮಾಲಯದಲ್ಲಿ ಶ್ರೀರಾಮ ಪಟ್ಟಾಭಿಷೇಕ ವೈಭವದ ಧಾರ್ಮಿಕ ಕಾರ್ಯಕ್ರಮಗಳು ನಡೆದವು ಸಿರುಗುಪ್ಪದಲ್ಲಿ ಅಲ್ಲಲ್ಲಿ ಕೇಸರಿ ಧ್ವಜ ಇದ್ದವು ಕಂಡು ಬಂತು ವಿವಿಧಡೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ನ ದಾಸೋಹ ಪ್ರಸಾದ ವಿತರಿಸಲಾಯಿತು.