
ರಾಮ ಮಂದಿರ ಉದ್ಘಾಟನೆಗೆ ಮಾಂಸ ಮತ್ತು ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 18- ಇದೇ ತಿಂಗಳು 22 ರಂದು ಅಯೋಧ್ಯೆಯಲ್ಲಿ ಬಾಲರಾಮ, ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡಿಯಲಿದ್ದು, ಆ ದಿನದಂದು ರಾಮಮಂದಿರ ಉದ್ಘಾಟನೆ ಯಾಗಲಿದ್ದು ಇಡೀ ದೇಶವೇ ಸಡಗರ ಸಂಭ್ರಮದಿಂದ, ರಾಮ ಜಪವನ್ನು ಮಾಡುತ್ತದೆ ರಾಮ ಅಹಿಂಸಾ ಪ್ರತಿಪಾದಕನಾಗಿದ್ದು ಮಂದಿರ ಉದ್ಘಾಟನೆ ದಿನದಂದು ಮಧ್ಯ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಬೇಕೆಂದು,ಜಿಲ್ಲಾಧಿಕಾರಿ ಗಳಿಗೆ ಜಯ ರ‍್ನಾಟಕ ರಕ್ಷಣಾ ವೇದಿಕೆ, ಸಂಸ್ಥಾಪಕರು ಮತ್ತು ರಾಜ್ಯಾಧ್ಯಕ್ಷರಾದ ಶಾಮ್ ಸುಂದರ್, ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು, ಈ ಸಂರ‍್ಭದಲ್ಲಿ ಪದಾಧಿಕಾರಿಗಳಾದ ಉರುಕುಂದ, ಎನ್, ಎರಿಸ್ವಾಮಿ, ದೇವಾ, ಮಂಜುನಾಥ್, ಸುನೀತಾ, ವೆಂಕಟೇಶ ಸುಧಾಕರ್, ಧನುಜಯ್, ಗೋಪಿ, ರಾಜೇಶ್ ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು