WhatsApp Image 2024-05-25 at 5.00.11 PM

ರಾಷ್ಟ್ರೀಯ ಡೆಂಗು ದಿನ ಸಾಂಕ್ರಾಮಿಕ ಆರೋಗ್ಯ ಬಗ್ಗೆ ಕಾರ್ಯಗಾರ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 25- ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ , ಜಿಲ್ಲಾ ಮಲೇರಿಯ ನಿಯಂತ್ರಣ ಅಧಿಕಾರಿಗಳ ಕಚೇರಿ ಮತ್ತು ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ಘಟಕ ಬಳ್ಳಾರಿ, ತಾಲೂಕು ಪಂಚಾಯಿತಿ ಸಿರುಗುಪ್ಪ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಿರುಗುಪ್ಪ ಇವರ ಸಂಯುಕ್ತಾಶ್ರಯದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ರಾಷ್ಟ್ರೀಯ ಡೆಂಗ್ಯು ದಿನ ಮತ್ತು ಸಾಂಕ್ರಾಮಿಕ ರೋಗಗಳು ಕುರಿತಂತೆ ಅಡ್ವೊಕಸಿ ಕಾರ್ಯಗಾರ ಏರ್ಪಡಿಸಲಾಗಿತ್ತು.

ಸಮುದಾಯದೊಂದಿಗೆ ಸೇರಿ ಡೆಂಗ್ಯೂ ಜ್ವರವನ್ನು ಮತ್ತು ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸೋಣ ಘೋಷವಾಕ್ಯದಂತೆ ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಪಾತ್ರ, ಸಹಕಾರ ಮತ್ತು ಸಮನ್ವಯ ಹಾಗೂ ಸಮುದಾಯವನ್ನು ತೊಡಗಿಸಿಕೊಳ್ಳುವುದು ಅತ್ಯಗತ್ಯವಾಗಿದೆಯೆಂದು ತಾಲೂಕು ಆರೋಗ್ಯ ಅಧಿಕಾರಿ ಡಾಕ್ಟರ್ ಈರಣ್ಣರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಅಡ್ವೊಕಸಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪವನ್ ಕುಮಾರ್ ದಂಡಪ್ಪನವರು ಆರೋಗ್ಯ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆಗಳು ಅಭಿವೃದ್ಧಿ ಸಮಾಜದ ಅವಿಭಾಜ್ಯ ಅಂಗಗಳು.

ಮಳೆಗಾಲದ ಸಂದರ್ಭದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಿಕೆ, ಮುಂಜಾಗ್ರತಾ ಹಾಗೂ ರಕ್ಷಣಾ ಕ್ರಮಗಳನ್ನು ಕೈಗೊಳ್ಳುತ್ತಾ ಸಮುದಾಯದಲ್ಲಿ ರೋಗಗಳು ಹರಡದಂತೆ ಎಚ್ಚರ ವಹಿಸಿ, ಆರೋಗ್ಯ ಇಲಾಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.

ಮಲೇರಿಯಾ ವಿಭಾಗದ ಸಲಹೆಗಾರ ಪ್ರತಾಪ್ ರವರು ಸೊಳ್ಳೆಗಳಿಂದ ಹರಡುವ ಮಾರಕ ರೋಗಗಳಾದ ಮಲೇರಿಯಾ ಡೆಂಗ್ಯೂ ಚಿಕುನ್ ಗುನ್ಯಾ ಮೆದುಳು ಜ್ವರ ಆನೇಕಾಲ್ ರೋಗ ಹರಡುವ ಸೊಳ್ಳೆಗಳ ವಿಧಾನ, ಜೀವನ ಚಕ್ರ, ಸಂತಾನೋತ್ಪತ್ತಿ ತಾಣಗಳನ್ನು ಕುರಿತಂತೆ ಮಾಹಿತಿ ನೀಡಿದರು ಸಮುದಾಯದಲ್ಲಿ ಇಂತಹ ಜ್ವರ ಪ್ರಕರಣಗಳು ಕಂಡುಬಂದ ಕೂಡಲೇ ಸ್ವಚ್ಛತಾ ಕಾರ್ಯ, ಘನ ತ್ಯಾಜ್ಯ ವಸ್ತುಗಳ ವಿಲೇವಾರಿ, ತಿಪ್ಪೆ ಗುಂಡಿಗಳನ್ನು ಊರಿನಿಂದ ದೂರ ಮಾಡುವಿಕೆ ಸಾರ್ವಜನಿಕ ಶೌಚಾಲಯಗಳ ಹತ್ತಿರ, ಕೊಳಾಯಿ ನೀರಿನ ಹತ್ತಿರ, ಟ್ಯಾಂಕ್ ಗಳ ಹತ್ತಿರ ನೀರು ನಿಲ್ಲದಂತೆ ನೋಡಿಕೊಳ್ಳುವ ಬಗ್ಗೆ ಪಂಚಾಯಿತಿ ಕಾರ್ಯವನ್ನು ಪ್ರಾಜೆಕ್ಟರ್ ಮೂಲಕ ತಿಳಿಸಿಕೊಟ್ಟರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಖಾಸಿಂ ರವರು ಮಳೆ ಬಂದ ಸಂದರ್ಭದಲ್ಲಿ ಹೊಸ ನೀರು ಹರಿದು ಬರುತ್ತದೆ, ಕಲುಷಿತಗೊಳ್ಳುವ ನೀರಿನಿಂದ ಹಾಗೂ ಆಹಾರದಿಂದ ಸಮಾಜದಲ್ಲಿ ವಾಂತಿ ಭೇದಿ ಕರುಳು ಬೇನೆ, ವಿಷಮ ಶೀತ ಜ್ವರ ಮತ್ತು ಕಾಲರ ರೋಗ ಮುಂಜಾಗ್ರತಾ ಕ್ರಮಗಳನ್ನು ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ತಾಲೂಕಿನ ಅಸಿಸ್ಟಂಟ್ ಡೈರೆಕ್ಟರ್ ಪಲ್ಯದ ಬಸವರಾಜ್, ಕಾರ್ಯಕ್ರಮ ವ್ಯವಸ್ಥಾಪಕ ಪ್ರಹಲ್ಲಾದ್ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಭೀಮರಾಜ್ ಮಲೇರಿಯ ಮೇಲ್ವಿಚಾರಕ ಶ್ರೀನಿವಾಸ್, ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಚೆನ್ನಬಸವನಗೌಡ ರಾಷ್ಟ್ರೀಯ ಸಾಕ್ಷರತಾ ಅಬ್ದುಲ್ ನಬಿ ಹಾಗೂ ಎಲ್ಲಾ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!