
ರಾಷ್ಟ್ರೀಯ ಸೇವಾ ಯೋಜನೆಗೆ ಶಾಸಕ ಬಿ ಎಂ ನಾಗರಾಜ ಚಾಲನೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,7- ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ . ಇ . ಎಸ್ ಬಿ ಇ ರಾಮಯ್ಯ ಮಹಿಳಾ ಪದವಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಗರದ 18ನೇ ವಾರ್ಡಿನ ಡ್ರೈವರ್ ಕಾಲೋನಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಎನ್ ಎಸ್ ಎಸ್ ವಿಶೇಷ ಶಿಬಿರದ ಉದ್ಘಾಟನೆಯನ್ನು ಶಾಸಕ ಬಿ .ಎಂ . ನಾಗರಾಜ ಅವರು ಚಾಲನೆ ನೀಡಿ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯ ಸಾರ್ವಜನಿಕರಲ್ಲಿ ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಭೀಮ ಲಿಂಗಪ್ಪ ರಾಷ್ಟ್ರೀಯ ಸಾಕ್ಷರತಾ ಅಬ್ದುಲ್ ನಬಿ ನಗರಸಭಾ ಸದಸ್ಯರಾದ ಕಾಯಿಪಲ್ಲೆ ಆರ್ ನಾಗರಾಜ ಬಿ ವೆಂಕಟೇಶ ಮಾಜಿ ಸದಸ್ಯ ಮಲ್ಲಿಕಾರ್ಜುನ ಗೊರವರ ಶ್ರೀನಿವಾಸ್ ಕೋಟಿ ರೆಡ್ಡಿ ಶಿಕ್ಷಣ ಇಲಾಖೆಯ ಬಿ ಆರ್ ಸಿ ಕಾಳಿಂಗಪ್ಪ ಸಿ ಆರ್ ಪಿ ಮಾರುತಿ ಶಾಲೆಯ ಮುಖ್ಯ ಗುರುಗಳಾದ ಶಿವಗಂಗಮ್ಮ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು