
ರೈತರಿಗೆ ಬರ ಪರಿಹಾರ ಬೆಳೆವಿಮೆಗೆ ಆಗ್ರಹ
ರಾಜ್ಯ ರೈತ ಸಂಘ ಖಂಡಿಸಿ ತಹಶೀಲ್ದಾರರಿಗೆ ಮನವಿ ಪತ್ರ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ 24 – ತಾಲೂಕಿನಲ್ಲಿ ಬಿಕರ ಬರಗಾಲ ವಾಗಿ ನಮ್ಮ ರೈತರು ಸಂಕಷ್ಟದಲ್ಲಿದ್ದಾರೆ ಅದಕೋಸ್ಕರ ಬರ ಪರಿಹಾರ ಮತ್ತು ರೈತರು ತುಂಬಿದ ಬೆಳೆವಿಮೆಯ ಹಣವನ್ನು ಶ್ರೀಘ್ರದಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲು ಸರಕಾರ ಮುಂದಾಗಬೇಕು ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಅಂದಪ್ಪ ಕೋಳೂರ ಆಗ್ರಹಿಸಿದರು.
ಅವರು ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ಮನವಿ ಪತ್ರ ಸಲ್ಲಿಸಿ ಮಾತನಾಡಿ ಬರ ಪರಿಹಾರ ಬಂದು ಒಂದು ತಿಂಗಳ ಕಳೆದರೂ ಅಧಿಕಾರಿಗಳ ನಿರ್ಲಕ್ಷದಿಂದ ಇದುವರಿಗೂ ರೈತರಿಗೆ ಬರ ಪರಿಹಾರ ಹಾಕಿಲ್ಲ ಶೀಘ್ರದಲ್ಲಿ ರೈತರ ಖಾತೆಗೆ ಬರ ಪರಿಹಾರ ಹಣ ಹಾಕಬೇಕು ಜೊತೆಗೆ ರೈತರು ತುಂಬಿದ ಬೆಳೆವಿಮೆ ಒಬ್ಬರಿಗೆ ಬಂದರೆ ಇನ್ನೊಬ್ಬರಿಗೆ ಬಂದಿರುವುದಿಲ್ಲ ಯಾರಿಗೆ ಬೆಳೆವಿಮೆ ಬಂದಿರುವುದಿಲ್ಲ ಸರ್ಕಾರ ಪರಿಶೀಲಿಸಿ ಕೂಡಲೇ ನಮ್ಮಜಿಲ್ಲೆಯ ರೈತರಿಗೆ ಬೆಳೆವಿಮೆ ಹಣವನ್ನು ರೈತರ ಖಾತೆಗೆ ಜಮ್ಮಾ ಮಾಡಬೇಕೆಂದು ಒತ್ತಾಯಿಸಿದರು.
ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ ಇವರ ನೇತೃತ್ವದಲ್ಲಿ ಖಂಡಿಸಿ ಅನೇಕ ರೈತರ ಸಂಘಟನೆಗಳ ಒಟ್ಟಾಗಿ ಸೇರಿ ಈ ವರ್ಷ ನಮ್ಮ ತಾಲೂಕು ಬಿಕರ ಬರಗಾಲವಿದ್ದ ಕಾರಣ ಸರಕಾರವು ರೈತರಿಗೆ ಬರಗಾಲದ ಪರಿಹಾರದ ಹಣವನ್ನು ಶೀಘ್ರ ವಾಗಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳಾದ ರಮೇಶ್ ಎತ್ತಿನಮನಿ. ಶಾಶ್ವತ್ ಚಿತ್ತವಾಡಗಿ.ಬಸವರಾಜ ವಚ್ಚಲಕುಂಟಿ. ಗಣಪ್ಪ ಎತ್ತಿನಮನಿ. ಬಾಲಪ್ಪ ಮೇಟಿ.ವಿಜಯಕುಮಾರ. ಮಲ್ಲಪ್ಪ.ಯಲ್ಲಪ್ಪ ಹನುಮಪ್ಪ ಸಂಗಪ್ಪ ಮತ್ತು ಇತರರು ಭಾಗವಹಿಸಿದರು.