
ರೈತರ ದಿನಾಚರಣೆ ಅಂಗವಾಗಿ ಇದೇ 27ರಂದು ರೈತರ ಸಮಾವೇಶ
ರೈತ ಸಂಘ ಸಿದ್ಧತೆ : ರಾಜ್ಯ ಅಧ್ಯಕ್ಷರಾದ ವಾಸುದೇವ ಮೇಟಿ
ಕರುನಾಡ ಬೆಳಗು ಸುದ್ದಿ
ಹೊಸಪೇಟೆ , ೧೮- ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಅಧ್ಯಕ್ಷರಾದ ವಾಸುದೇವ ಮೇಟಿ ಇವರ ನೇತೃತ್ವದಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ರೈತ ದಿನಾಚರಣೆ ಪ್ರಯುಕ್ತ ಪತ್ರಿಕಾಗೋಷ್ಠಿ ನಡೆಸಿ ಪೋಸ್ಟರ್ ಬಿಡುಗಡೆ ಮಾಡಿದರು.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ರೈತರ ದಿನಾಚರಣೆ ಅಂಗವಾಗಿ ಡಿಸೆಂಬರ್ 27ರಂದು 5,000 ಜನಗಳ ಬೃಹತ್ ಮೆರವಣಿಗೆ ಮತ್ತು ಸಮಾವೇಶ ನಡೆಸಲು ರೈತ ಸಂಘ ಸಿದ್ಧತೆ ನಡೆಸಿದ ಹಿನ್ನೆಲೆಯಲ್ಲಿ, ರಾಜ್ಯಾಧ್ಯಕ್ಷ ವಾಸುದೇವ ಅವರು ಮಾತನಾಡುತ್ತಾ ರಾಜ್ಯದ 28 ಜಿಲ್ಲೆಗಳ ಗ್ರಾಮೀಣ ಭಾಗದಿಂದ ರೈತರು ಕಾರ್ಮಿಕರು, ನಾಗರಿಕರು ವಿವಿಧ ಸಂಘಟನೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು 27ರಂದು ನಡೆಯುವ ಈ ಬೃಹತ್ ಸಮಾವೇಶಕ್ಕೆ ಬರಲಿದ್ದಾರೆ ಎಂದು ಹೇಳಿದರು.
ಈ ಹಿಂದೆ ರಾಜ್ಯ ಸರ್ಕಾರ 210 ತಾಲೂಕುಗಳನ್ನು ಬರಪೀಡಿತ. ಪ್ರದೇಶಗಳೆಂದು ಘೋಷಣೆ ಮಾಡಿದ್ದಾರೆ ಆದರೆ ಕೆಲವು ಭಾಗಗಳ ರೈತರ ಖಾತೆಗೆ ಹಣವೇ ಜಮಾ ಆಗಿಲ್ಲ ಅದು ಕೂಡ ಕೆಲವು ಜಿಲ್ಲೆಗಳಿಗೆ 2000ರಂತೆ ಕೊಟ್ಟಿದ್ದಾರೆ ಇದು ಕೆಲವು ಜಿಲ್ಲೆಗಳಿಗೆ ಮುಟ್ಟೇ ಇಲ್ಲ, ರೈತರಿಗೆ ನೀಡುವ ಈ ಹಣ ಬಹಳ ಕಡಿಮೆ,
ಒಂದು ಹೆಕ್ಟರ್ ಗೆ ಕೇಂದ್ರದ ನೀತಿಯ ಪ್ರಕಾರ 35,000 ಕೊಡುವ ಕೇಂದ್ರದ ನಿರ್ದೇಶನದಂತೆ ಹಣ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ನಮ್ಮ ಸಂಘ ಒತ್ತಾಯಿಸುತ್ತದೆ ಎಂದರು.
ಬೆಳಗಾಂನಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಗೆ ತೆಗೆದುಕೊಳ್ಳದಿರುವುದು ಬೇಸರದ ಸಂಗತಿಯಾಗಿದೆ ಮತ್ತು ಬರಗಾಲ ಎಂದರೆ ಮೇವು ಬ್ಯಾಂಕುಗಳನ್ನು ತೆಗೆಯಬೇಕು ಇಲ್ಲಿಯವರೆಗೆ ಎಲ್ಲಿಯೂ ತೆಗೆದಿಲ್ಲ, ರಾಜ್ಯದಲ್ಲಿ ಯಾವುದೇ ತಹಸಿಲ್ದಾರ್ ಆಗಿರಲಿ ಜಿಲ್ಲಾಧಿಕಾರಿಗಳಾಗಲಿ ಕಾರ್ಯ ಪ್ರವೃತ್ತಿಯಾಗಿಲ್ಲ ಈಗಾಗಲೇ ನೀಡಿರುವ ಗ್ಯಾರಂಟಿಗಳನ್ನ ನಾವು ಸ್ವಾಗತಿಸುತ್ತೇವೆ ಆದರೆ ಈ ದೇಶದ ಬೆನ್ನೆಲುಬು ಎನಿಸಿಕೊಂಡಿರುವ ರೈತ ಸಂಕಷ್ಟದಲ್ಲಿದ್ದಾನೆ ಎಂದು ಮನಗಂಡು ರೈತರ ಪರವಾಗಿ ಕೆಲಸ ಮಾಡ ಬೇಕಾಗಿದೆ, ಅನ್ನದಾತ ರೈತರಿಗೆ ಬೆಳೆ ಬೆಳೆಯಲು ಸರಿಯಾದ ಪರಿಕಾರಗಳನ್ನು ನೀಡಬೇಕು ಎಂದು ಹೇಳಿದರು .
ಜಿಲ್ಲೆಯ ಅಧ್ಯಕ್ಷರಾದ ಸಿ ವಿ ಗಾಳೆಪ್ಪ ಮಾತನಾಡಿ ರಾಜ್ಯದಲ್ಲಿ ಸರ್ಕಾರ ಎಲ್ಲಾ ಮಹನೀಯರ ದಿನಾಚರಣೆಗಳನ್ನು ಆಚರಿಸುತ್ತಾರೆ ಆದರೆ ರೈತರ ದಿನಾಚರಣೆಯನ್ನು ಇಲ್ಲಿಯವರೆಗೆ ಆಚರಿಸುವುದಿಲ್ಲ ಈ ನಿಟ್ಟಿನಲ್ಲಿ 31ನೇ ಜಿಲ್ಲೆಯಾಗಿ ಹೊರಹೊಮ್ಮಿರುವ ವಿಜಯನಗರದಲ್ಲಿ ಮೊಟ್ಟ ಮೊದಲ ಬಾರಿಗೆ ರೈತರ ದಿನಾಚರಣೆಯ ಅಂಗವಾಗಿ ಬೃಹತ್ ಸಮಾವೇಶವನ್ನು ಹಮ್ಮಿ ಕೊಂಡಿದ್ದೇವೆ ಕೂಡಲೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರೈತರ ದಿನಾಚರಣೆಯನ್ನು ಸರ್ಕಾರದಿಂದ ಆಚರಿಸಲು ಘೋಷಣೆ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ.
ಇನ್ನು ಈ ಭಾಗದಲ್ಲಿ ಶುಗರ್ ಫ್ಯಾಕ್ಟರಿ ಹಾಕಲು ಶಾಸಕ ಎಚ್ ಆರ್ ಗವಿಯಪ್ಪ ಇವರು ತಮಗೆ ಅನುಕೂಲವಿರುವ ರೈತ ಸಂಘದವರನ್ನು ಕರೆದುಕೊಂಡು ಹೋಗಿ ಜಾಗವನ್ನು ವೀಕ್ಷಣೆ ಮಾಡಿದ್ದಾರೆ ಹೊರತು ನಮ್ಮನ್ನು ಕರೆದಿಲ್ಲ. ಕರೆಯದಿದ್ದರೂ ಪರವಾಗಿಲ್ಲ ಸುಳ್ಳು ಹೇಳದೆ ಕೂಡಲೆ ಶುಗರ್ ಫ್ಯಾಕ್ಟರಿ ಹಾಕಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳುತ್ತೇವೆ. ರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸದಿದ್ದಲ್ಲಿ ವಿಜಯನಗರ ಜಿಲ್ಲೆಯನ್ನು ಬಂದ್ ಮೂಲಕ ಸರ್ಕಾರಕ್ಕೆ ಹೆಚ್ಚರಿಕೆ ನೀಡುತ್ತೇವೆ. ಇಲ್ಲಿ ರೈತ ಸಂಘದ ಒಟ್ಟು ಐದು ಬಣಗಳಿದ್ದು ನಮ್ಮ ಸಂಘ ರೈತರ ಸಂಕಷ್ಟಗಳಿಗೆ ಯಾವುದೇ ಸಮಯದಲ್ಲಾದರೂ ಸ್ಪಂದಿಸದಲಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಎಂ ಪ್ರಕಾಶ್, ಬಿ ಸರಳ ಕಾವ್ಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರು, ನಾಗಯ್ಯ, ವೆಂಕೋಬಣ್ಣ, ಸಂಗಣ್ಣ ಬಾಗವಾಡಿ,ಕೊಟ್ರೇಶ, ಕೆ ಹನುಮಂತ, ಜಂಬೂರು ಮರಳಿಸಿದ್ದಪ್ಪ, ಕುಸುಮ ಅಸಾದಿ ರಾಜ್ಯ ಸಂಘಟನಾ ಕಾರ್ಯದರ್ಶಿ ,ಶಾರದಾ ಪಿ ಮ್ಯಾಗಳಮನಿ, ತಾಲೂಕು ಉಪಾಧ್ಯಕ್ಷರು . ಕಾವ್ಯ ಹಿರೇಕೆರೂರು ತಾಲೂಕು ಅಧ್ಯಕ್ಷರು. ಭೀಮಪ್ಪ ಡೆಲ್ಲಿ ರಾಜ ಪ್ರಧಾನ ಕಾರ್ಯದರ್ಶಿ ಕೊಟ್ರೇಶ್ ಕೂಡ್ಲಿಗಿ ತಾಲೂಕ ಅಧ್ಯಕ್ಷರು ಇತರರಿದ್ದರು.