
- ವ್ಯವಸಾಯ ಪಂಪ್ ಸೆಟ್ ಬಳಕೆಗೆ 7 ತಾಸು ವಿದ್ಯುತ್ ನೀಡಲು ಒತ್ತಾಯ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ ,_25 – ವ್ಯವಸಾಯ ಪಂಪ್ ಸೆಟ್ ಗಳ ಬಳಕೆಗೆ ದಿನದಲ್ಲಿ ಕನಿಷ್ಠ 7ತಾಸು, ನಿರಂತರವಾಗಿ ವಿದ್ಯುತ್ ಸರಬರಾಜು ಮಾಡಬೇಕೆಂದು, ಕರ್ನಾಟಕ ರಾಜ್ಯ ರೈತ ಸಂಘ, ಜಿಲ್ಲಾ ಅಧ್ಯಕ್ಷ, ಸಂಗನಕಲ್ಲು ಕೃಷ್ಣಪ್ಪ ನೇತೃತ್ವದಲ್ಲಿ ಇಂದು ಜೆಸ್ಕಾಂ ಗ್ರಾಮೀಣ ವಿಭಾಗದ ಅಸಿಸ್ಟೆಂಟ್ ಇಂಜಿನಿಯರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಕೃಷ್ಣಪ್ಪನವರು ಮಾತನಾಡುತ್ತಾ ಕಳೆದ 2020 – 21ನೇ ಸಾಲಿನಲ್ಲಿ ಹಿಂದಿನ ಸರ್ಕಾರವು ಬೇಸಾಯದ ಚಟುವಟಿಗಳಿಗೆ ಹೇಳು ತಾಸು ವಿದ್ಯುತ್ ಪೂರೈಸುತ್ತಿತ್ತು, ಆದರೆ ಹೊಸ ಸರ್ಕಾರ 5 ತಾಸು ಮಾತ್ರ, ಅದು ಕೂಡ ನಿಯಮಿತವಿಲ್ಲದೆ,
ಹೊತ್ತು ಗೊತ್ತು ಇಲ್ಲದೆ ವಿದ್ಯುತ್ ಸರಬರಾಜು ಮಾಡಲಾಗುತ್ತದೆ ಎಂದರು. ಇದರಿಂದ ಈ ಭಾಗದ ರೈತರು ಹಾಕಿದ ಬೆಳೆಗಳಿಗೆ ಪಂಪ್ ಸೆಟ್ ವಿನಿಯೋಗಿಸಿ ನೀರು ಹರಿಸಲು ಬಹಳ ಕಷ್ಟಕರವಾಗಿದೆ ಎಂದರು. ಒಂದು ಕಡೆ ಜಿಲ್ಲೆಯ ಎಲ್ಲಿ ಮಳೆಯ ಅಭಾವದಿಂದ ಸಂಕಷ್ಟಗಳು ಅನುಭವಿಸುತ್ತಿದ್ದರೆ, ಮತ್ತೊಂದು ಕಡೆ ಜೆಸ್ಕಾಂ ವಿಭಾಗ ವಿದ್ಯುತ್ ಸರಬರಾಜಿನಲ್ಲಿ ನಡೆಸುತ್ತಿರುವ ವಿಧಾನ, ಗಾಯದ ಹುಣ್ಣಿನ ಮೇಲೆ ಬರೆ ಎರಚಿದಂತಾಗಿದೆ ಎಂದರು.
ಈ ಭಾಗದ ಪ್ರಜಾ ಪ್ರತಿನಿಧಿಗಳು ರಾಜ್ಯ ಸರ್ಕಾರಕ್ಕೆ ಸಮಸ್ಯೆಯನ್ನು ವಿವರಿಸಿ, ವ್ಯವಸಾಯ ಕ್ಷೇತ್ರಕ್ಕೆ ಪ್ರತಿದಿನ ನಿರಂತರವಾಗಿ ಕನಿಷ್ಠ ಏಳು ತಾಸು ವಿದ್ಯುತ್ ಸರಬರಾಜು ಮಾಡಬೇಕೆಂದು ಒತ್ತಾಯಿಸಿದರು. ಮುಂದಿನ ದಿನಗಳಲ್ಲಾದರೂ ಸರ್ಕಾರವು ಮತ್ತು ಜಸ್ಕಾಂ ಸಾಕೆ ರೈತರನ್ನು ಕಡೆಗಣಿಸಿ ತಮ್ಮ ಮನ ಬಂದಂತೆ ವಿದ್ಯುತ್ ಸರಬರಾಜು ಮಾಡಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಈ ಸಂದರ್ಭವಾಗಿ ಅವರು ಎಚ್ಚರಿಸಿದರು. ಕಾರ್ಯಕ್ರಮದಲ್ಲಿ ರೈತ ಮುಖಂಡರು ರೈತ ಸಂಘದ ಸಂಘಟನಾ ಕಾರ್ಯದರ್ಶಿ ತಿಮ್ಮಪ್ಪ, ತಾಲೂಕ ಅಧ್ಯಕ್ಷರು ಎರ್ರಿಸ್ವಾಮಿ, ಮತ್ತು ರೈತ ಮುಖಂಡರಾದ ನಾಗೇಂದ್ರ , ಮಾರೇಣ್ಣಾ ಸೇರಿದಂತೆ ಹಲವಾರು ರೈತರು ಪಾಲ್ಗೊಂಡಿದ್ದರು.