
ಅಳವಂಡಿ-ಬೆಟಗೇರಿ ನಿರಾವರಿ ಅನುಷ್ಠಾನ ಹೋರಾಟ ಸಮೀತಿ
ರೈತರ ಭೂಸ್ವಾಧೀನ ಹಣ ಬಿಡುಗೆಡೆಗೆ ಆಗ್ರಹಿಸಿ ಅ, ೨೬ರಿಂದ ಅನಿರ್ಧಿಷ್ಟಾವಧಿ ಧರಣಿ
ಕೊಪ್ಪಳ , ೨೪-. ತಾಲೂಕಿನ ಅಳವಂಡಿ ಸೇರಿದಂತೆ ೯ ಹಳ್ಳಿಗಳ ತುಂಗಭದ್ರ ನದಿಯ ಹಿನ್ನಿರಿನಿಂದ ನೀರಾವರಿ ಕಲ್ಪಿಸಲು ೧೩೧ ಎಕರೆಯನ್ನು ಜಮೀನು ಮಾಲೀಕರಿಂದ ಭೂ ಸ್ವಾದಿನ ಭೂಸ್ವಾಧೀನ ಹಣ ಬಿಡುಗೆಡೆಗೆ ಆಗ್ರಹಿಸಿ ಇದೇ ಅ, ೨೬ರಿಂದ ಅಳವಂಡಿಯ ನಾಡಕಛೇರಿಯ ಆವರಣದಲ್ಲಿ ರೈತರಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ಅಳವಂಡಿ – ಬೆಟಗೇರಿ ಏತ ನಿರಾವರಿ ಅನುಷ್ಠಾನ ಹೋರಾಟ ಸಮೀತಿ ಅಧ್ಯಕ್ಷ ಶರಣಪ್ಪ ಜಡಿ ಹೇಳಿದರು.
ಅವರು ಮಂಗಳವಾರದAದು ಕೊಪ್ಪಳ ಮೀಡಿಯಾ ಕ್ಲಬ್ನಲ್ಲಿ ಜರುಗಿದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದರು. ಕಳೆದ ನಾಲ್ಕಾರು ವರ್ಷಗಳಿಂದ ರೈತರ ಭೂಸ್ವಾದೀನ ಹಣ ಸರ್ಕಾರದಿಂದ ಮಂಜೂರಾಗಿದ್ದರು ಕಛೇರಿಗೆ ಅಲೆದಾಡಿಸಿದ್ದು ಪರಿಹಾರ ನೀಡುತ್ತಿಲ್ಲಾ .
ಅಧೀಕಾರಿಗಳು ಜಮೀನು ಭೂ ಸ್ವಾಧೀನ ಕಾಯ್ದೆ ೨೦೧೩ರ ಕಲಂನ್ನು ಉಲ್ಲಂಘನೆ ಮಾಡಿರುವುದು ಕಂಡುಬರುತ್ತದೆ, ಅಳವಂಡಿ ಭಾಗದ ರೈತರಿಗೆ ಪರಿಹಾರ ಹಣ ನೀಡುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸರಿಯಾದ ಕಾರ್ಯ ನಿರ್ವಹಿಸದೆ ಕಾಲಹರಣಮಾಡಿ ರೈತರನ್ನು ಪದೆ ಪದೆ ಕಛೇರಿಗೆ ಅಲೆಯುವಂತೆ ಮಾಡಿದ್ದಾರೆ.
ತಾಲೂಕಿನ ಅಳವಂಡಿ, ಕವಲೂರು, ಮೈನಳ್ಳಿ, ಜಿನಸಳ್ಳಿ, ಹಿರಿಂಜೋಳ, ಸಂದ್ರಾಳ ನರಸೀಪುರ, ಹಾಗೂ ಕುಕನೂರು ತಾಲೂಕಿನ ತಳಕಲ್ಲ ಮಲಾಮರ ಮಗಳ ೬೦೦೦ ಎಕರೆ ಜಮೀನುಗಳಿಗೆ ತುಂಗಭದ್ರ ನದಿಯ ಹಿನ್ನಿರಿನಿಂದ ನೀರಾವರಿ ಕಲ್ಪಿಸಲು ೧೩೧ ಎಕರೆಯನ್ನು ಜಮೀನು ಮಾಲೀಕರಿಂದ ಭೂ ಸ್ವಾದಿನ ಪಡೆಯು ೨೦೧೧ರಲ್ಲಿಯೇ ಈ ಯೋಜನೆ ಆರಂಭಿಸಲಾಯಿತು. ೨೦೧೮ರಲ್ಲಿ ರೈತರಿಂದ ಭೂಮಿ ಕಣ್ಣಾ ಪಡೆದು ಅಳವಂಡಿ, ಬೇಟಗೇರಿ ಏತ ನೀರಾವರಿ ಯೋಜನೆಯಲ್ಲಿ ಕಾಲುವೆ, ಉಪಕಾಲುವೆ ನಿರ್ಮಾಣದ ಸಲುವಾಗಿ ಭೂ ಸ್ವಾಧೀನ ಮಾಡಿ ಕಾಮಗಾರಿ ಪೂರ್ಣಗೊಳಿಸಲಾಗಿದೆ ಹತ್ತು ವರ್ಷಕಳೆದರು ರಯತರಿಗೆ ಸರ್ಕಾರ ಪರಿಹಾರ ಹಣ ನೀಡಿಲ್ಲಾ .
ರೈತರ ಜಮೀನು ಪಡೆದು ಕಾಲುವೆ ನಿರ್ಮಿಸಿ ನೂರಾರು ಕೋಟಿ ಹಣ ಪಡೆದರೆ ಹೊರತು ರೈತರಿಗೆ ಪರಿಪ ನೀಡಲು ಮತ್ತು ಜಮೀನುಗಳಿಗೆ ನೀರಾವರಿ ಕಲ್ಪಿಸಲು ಯಾರು ಸಹಕರಿಸದಿರುವದು ರೈತರಿಗೆ ಮಾಡಿದ ಅನ್ಯಾಯವಾಗಿದೆ, ರೈತರಿಗೆ ನೀರಾವರಿ ಮಾಡುತ್ತೇವೆ ನಿಮ್ಮ ಜೀವನ ಸುಧಾರಿಸುತ್ತೇವೆ ಎಂದು ಭಾಷಣ ಮಾಡಲಿಕ್ಕೆ ಸೀಮಿತವಾಗಿದೆ. ಸರ್ಕಾರ ಪರಿಹಾರ ನೀಡುವವರೆಗೂ ನಿರಂತರ ಪ್ರತಿಭಟನೆ ನಡೆಸುವಿದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಹೊರಾಟ ಸಮೀತಿಯ ಜಗನಾಥ ರೆಡ್ಡಿ, ಬಸವರೆಡ್ಡಿ ಮೂಲಿಮನಿ, ವೀರಣ್ಣ ಶೇಟ್ಟರ್ ಇತರರು ಇದ್ದರು.