
ರೈತರ ಗ್ರಾಮೀಣ ಬ್ಯಾಂಕ್ ಸಾಲದ ಸಮಸ್ಯೆಗಳ ಪರಸ್ಕಾರಕ್ಕೆ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು
ಕರುನಾಡ ಬೆಳಗುಸುದ್ದಿ
ಬಳ್ಳಾರಿ,30- ಬೇಸಾಯ ಮಾಡಲು ಕರ್ನಾಟಕ ಗ್ರಾಮೀಣ ಬ್ಯಾಂಕ್ನಿಂದ ಪಡೆದ ರೈತರ ಸಮಸ್ಯೆ ಪರಿಷ್ಕರಿಸಲು ಸರ್ಕಾರ ಮಧ್ಯಸ್ಥಿಕೆ ವಹಿಸಬೇಕೆಂದು, ಇಂದು ರಾಜ್ಯ ರೈತ ಸಂಘ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾ ಸಹಾಯಾಧಿಕಾರಿ ಮಹಮ್ಮದ್ ಜುಬೇರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭವಾಗಿ ರೈತ ಮುಖಂಡರಾದ, ಮಾಧವ್ ರೆಡ್ಡಿ ಮಾತನಾಡುತ್ತಾ, ಕಳೆದ ನಾಲ್ಕೈದು ವರ್ಷಗಳಿಂದ ಜಿಲ್ಲೆಯಲ್ಲಿ ರೈತರು ಹಾಕಿದ ಬೆಳೆಗಳು ನಷ್ಟಕ್ಕೀಡಾಗಿವೆ ಎಂದು. ಮಳೆರಾಯ ಕೂಡ ಕೈಕೊಟ್ಟು ಇರುವ ಕಾರಣದಿಂದ, ತೀವ್ರ ನಷ್ಟವನ್ನು ಎದುರಿಸಿ ದ್ದಾರೆ ಎಂದು ತಿಳಿಸಿದರು.
ರಾಷ್ಟ್ರೀಯ ಬ್ಯಾಂಕುಗಳು ಸೌಜನ್ಯದಿಂದ ರೈತರ ಸಾಲಗಳ ಪರಿಷ್ಕಾರಕ್ಕೆ ಮತ್ತು ಹೊಸ ಸಾಲಗಳನ್ನು ಕೊಡುವುದಕ್ಕೆ ಮುಂದಾಗುತ್ತಿದ್ದರೆ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಮಾತ್ರಮೊಂಡಿ ತನದಿಂದ ವ್ಯವಹರಿಸುತ್ತಿದ್ದಾರೆ ಎಂದು ಅಗ್ರಹಿಸಿದರು. ರೈತ ಸಂಘದ ನೇತೃತ್ವದಲ್ಲಿ ಹಲವಾರು ದಿನಗಳು ಕರ್ನಾಟಕ ಗ್ರಾಮೀಣ ಬ್ಯಾಂಕ್, ಪ್ರಧಾನ ಕಚೇರಿ ಎದುರುಗಡೆ ಅಹೋ ರಾತ್ರಿಯ ಧರಣಿ ನಡೆಸಿದರು ಕೂಡ ಏನು ಪ್ರಯೋಜನವಾಗಲಿಲ್ಲ ಎಂದರು.
ನೋಟಿಸುಗಳ ಮೇಲೆ ನೋಟಿಷಿಗಳು ಕೊಡುತ್ತಾರೆ ರೈತರಿಗೆ ಕಿರಿಕಿರಿ ನೀಡುತ್ತಿದ್ದಾರೆ ಎಂದರು. ಕೃಷಿ ಚಟುವಟಿಕೆಗಳಿಗಾಗಿ ಈಗಾಗಲೇ ಸಾಲ ಮಾಡಿ ಕೈ ಸುಟ್ಟುಕೊಂಡ ರೈತರಿಗೆ, ನೋಟಿಸ್ ಗಳು ಜಪ್ತಿ ಹೆಸರಿನಲ್ಲಿ ಬೆದರಿಕೆಗಳು ಹಾಕಿ ಸಾಲ ವಸೂಲಾತಿಗೆ ಬ್ಯಾಂಕ್ ಅಧಿಕಾರಿಗಳು ಮುಂದಾಗುತ್ತಿದ್ದಾರೆ ಎಂದರು. ಇನ್ನಾದರೂ ರಾಜ್ಯ ಸರ್ಕಾರ ಈ ವಿಷಯದ ಮೇಲೆ ಮಧ್ಯಸ್ಥಿಕೆ ವಹಿಸಿ, ರೈತರ ಸಾಲ ಮನ್ನಾ ಮಾಡುವುದರ ಜೊತೆಗೆ, ನೂತನ ಸಾಲಗಳನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭವಾಗಿ ಕಾರ್ಯಕ್ರಮದಲ್ಲಿ ಅಡ್ವಕೇಟ್ ಜಾಗನೂರು ಮಲ್ಲಿಕಾರ್ಜುನ ರೆಡ್ಡಿ ಜತೆಗೆ ಹಲವಾರು ಗ್ರಾಮಗಳಿಗೆ ಸೇರಿದ ರೈತರು ಪಾಲ್ಗೊಂಡಿದ್ದರು.