
ಭಾಣಾಪುರ ರೈಲ್ವೆ ಗೇಟಿನಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆ
ಕರುನಾಡ ಬೆಳಗು ಸುದ್ದಿ
ಕುಕನೂರ,11- ಭಾಣಾಪುರ ರೈಲ್ವೆ ಗೇಟಿನಿಂದ ಸಾರ್ವಜನಿಕರ ಸಂಚಾಕರಕೆ ತೊಂದರೆಯಾಗುತ್ತಿದೆ.
ತಾಲೂಕಿನ ಭಾಣಾಪುರ ಗ್ರಾಮದಲ್ಲಿ ಗುರುವಾರ ಸುಮಾರು 11:30 ಕ್ಕೆ ರೈಲು ಬರುವ ವಿಷಯಕೆ ರೈಲ್ವೆ ಗೇಟ್ ಹಾಕಲಾಗಿತು. ಸುಮಾರು 12 ಗಂಟೆಗೆ ರೈಲ್ವೆ ಹೋದ ಬಳಿಕ ರೈಲ್ವೆ ಗೇಟ್ ತೆಗೆಯಲು ಹೋದಾಗ ರೈಲ್ವೆ ಗೇಟ್ ಸ್ವಲ್ಪ ಮೇಲೆ ಹೋಗಿ ಮತ್ತೆ ಕೆಳಗೆ ಬರುವುದನ್ನು ಕಂಡ ಸಾರ್ವಜನಿಕರು ಭಯಭೀತರಾದರು.
ರೈಲ್ವೆ ಗೇಟ್ ಮೇಲೆ ಕೆಳಕ್ಕೆ ಬರುವುದನ್ನು ನೋಡಿ ಸಾರ್ವಜನಿಕರು ತಾವೇ ರೈಲ್ವೆ ಗೇಟ್ ಅನ್ನು ಎತ್ತಿ ಹಿಡಿದುಕೊಂಡು ಉಳಿದ ಸಾರ್ವಜನಿಕರು ಹೋಗುವವರೆಗೂ ರೈಲ್ವೆ ಗೇಟ್ ಅನ್ನು ಹಿಡಿದುಕೊಂಡು ನಿಂತಿದ್ದು ದೃಶ್ಯ ಕಂಡುಬಂದಿತು.