
ರೈಲ್ವೆ ನಿಲ್ದಾಣದಲ್ಲಿ ಮಹಿಳೆ ಕಾಣೆ : ಪ್ರಕರಣ ದಾಖಲು
ಕರುನಾಡ ಬೆಳಗು ಸುದ್ದಿ
ವಿಜಯನಗರ, 20- ಸುಲ್ತಾನಪುರದ ವಂಧನಾ ಕರೋಶಿಯಾ ಎಂಬುವರು ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಏಪ್ರೀಲ್ 15ರಂದು ಕಾಣೆಯಾದ ಬಗ್ಗೆ ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯ ಮೊ.ಸಂ:11/2024 ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ವಂಧನಾ ಕರೋಶಿಯಾ ಅವರ ವಯಸ್ಸು 27, ಎತ್ತರ 5.4, ಕಪ್ಪು ಬಣ್ಣದ ಕೂದಲು, ಬಿಳಿ ಮೈಬಣ್ಣ, ದುಂಡನೆಯ ಮೂಖ, ಸಾಧಾರಣ ಮೈಕಟ್ಟು ಹೊಂದಿದ್ದು ಪಿಂಕ್ ಸೀರೆ ಕೆಂಪು ಬಣ್ಣದ ಬ್ಲೌಜ್ ಧರಿಸಿದ್ದು ಹಿಂದಿ ಭಾಷೆ ಮಾತನಾಡುತ್ತಾರೆ.
ಈ ಮಹಿಳೆಯ ಬಗ್ಗೆ ಮಾಹಿತಿ ಕಂಡುಬAದಲ್ಲಿ ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆ ದೂ:08392-276063 ಮೊ:9480802131, ಗೆ ಮಾಹಿತಿ ನೀಡುವಂತೆ ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಂಧನಾ ಅವರು ಬಳ್ಳಾರಿ ರೈಲು ಗಾಡಿ ಸಂಖ್ಯೆ:12649 ಯಶವಂತಪುರ-ಹಜರತ್ ನಿಜಾಮುದ್ದಿನ್ ಸಂಪರ್ಕ್ ಕ್ರಾಂತಿ ಎಕ್ಸಪ್ರೆಸ್ ರೈಲು ಮೂಲಕ ಹೋಗಲು ಜನರಲ್ ಟಿಕೇಟ್ ಪಡೆದು ಬಳ್ಳಾರಿ ರೈಲ್ವೆ ನಿಲ್ದಾಣದ ಪ್ಲಾಟ ಪಾರ್ಮ್ ನಂಬರ್ 2ರ ಮೇಲೆ ಬಂದು ರೈಲು ಗಾಡಿ ಕಾಯುತ್ತ ಕುಳಿತು ನಂತರ ರೈಲು ಗಾಡಿಯು ಬೆಳಗಿನ 2.05 ಗಂಟೆಗೆ ಪ್ಲಾಟ ಪಾರ್ಮ ನಂಬರ್ 3ಗೆ ಬಂದಾಗ ಹಿಂದಿನ ಜನರಲ್ ಭೋಗಿಯನ್ನು ಹತ್ತಲು ಹೋದಾಗ ಜನರಲ್ ಬೋಗಿಗಳು ಗದ್ದಲ ಇದ್ದು ಒಳಗಡೆ ಹತ್ತಲು ಜಾಗವಿಲ್ಲದೇ ಇರುವುದರಿಂದ ಈ ರೈಲುಗಾಡಿಗೆ ಹೋಗಿರುವುದಿಲ್ಲ. ಬಳಿಕ ಬಳ್ಳಾರಿ ಕ್ಯಾಂಟಿನ್ ಹತ್ತಿರ ಹೊಸಪೇಟೆ ಎಂಡ್ ಕಡೆಗೆ ಪಿರ್ಯಾದಿದಾರರು ಮತ್ತು ಅವನ ಹೆಂಡತಿ ಮಲಗಿ ಬೆಳಗ್ಗೆ 6.45ಕ್ಕೆ ಎಚ್ಚರಗೊಂಡು ನೋಡಿದಾಗ ಪಕ್ಕದಲ್ಲಿ ಮಲಗಿದ್ದ ಹೆಂಡತಿ ವಂದನಾ ಕಂಡುಬರಲಿಲ್ಲ.
ಹೆಂಡತಿ ಕಾಣೆಯಾದ ಬಗ್ಗೆ ಎಲ್ಲಾ ಕಡೆ ವಿಚಾರಿಸಿ ಎಲ್ಲೂ ಸಿಕ್ಕಿರುವುದಿಲ್ಲ ಎಂದು ವಂದಾನ ಅವರ ಪತಿಯು ಏಪ್ರಿಲ್ 18 ರಂದು ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿರುತ್ತಾರೆ.