
ರ‍್ಯಾಂಕ ವಿದ್ಯಾರ್ಥೀ ರೆವಂತಗೆ ಬಿಓರಿದ ಗೌರವ ಸರ್ಮಪಣೆ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 26- ರಾಜ್ಯಕ್ಕೆ ಐದನೇ ರ‍್ಯಾಂಕ ಪಡೆದ ಮಹಾನ್ ಕಿಡ್ಸ್ ಶಾಲೆಯ ವಿದ್ಯಾರ್ಥಿ ಪಿ. ರೇವಂತ್‌ಕುಮಾರಗೆ ಕ್ಷೇತ್ರ ಶಿಕ್ಷಣಾಧಿಕಾರಿ(ಬಿಓ) ವೆಂಕಟೇಶ್ ಹಾಗೂ ಶಿಕ್ಷಣ ಸಂಯೋಜಕ ರಾಘವೇಂದ್ರ ಗೌರವಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ(ಬಿಓ) ವೆಂಕಟೇಶ್ ಮಾತನಾಡಿ ಮಹಾನ್ ಕಿಡ್ಸ್ ಶಾಲೆಯ ಶಿಕ್ಷಣವನ್ನು ಪರಿಶೀಲಿಸಲಾಗಿ ಉತ್ತಮ ರೀತಿಯಲ್ಲಿ ಶಿಕ್ಷಣ ನೀಡಲಾಗುತ್ತಿದ್ದು, ಈ ಶಾಲೆಯ ವಿದ್ಯಾರ್ಥಿಗಳ ಪ್ರತಿಭೆಗೆ ರಾಜ್ಯಮಟ್ಟದಲ್ಲಿ ಐದನೆ ರ‍್ಯಾಂಕ ಪಡೆಯುವದರ ಮೂಲಕ ಮಹಾನ ಕಿಡ್ಸ ಶಾಲೆ ತನ್ನದೇಯಾದ ಛಾಪುಮೂಡಿಸಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ನೇತ್ರಾಜ್ ಗುರುವಿನಮಠ, ಮುಖ್ಯೋಪಾಧ್ಯಾಯಣಿ ಶ್ರೀಮತಿ ಸವಿತಾ ಹಾಗೂ ಪೂರ್ಣಿಮಾ ರಾಘವೇಂದ್ರ ಕುಲಕರ್ಣಿ, ಪ್ರಸಾದ್, ಸಿದ್ದೇಶ್, ವೀರಯ್ಯ, ಶ್ರೀದೇವಿ ಉಪಸ್ಥೀತರಿದ್ದರು.