
ಲಾರಿಗಳ ಅಪಘಾತ
ಚಾಲಕನ ಪಾರು
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೨೫- ಜಿಲ್ಲೆಯ ಕುಕನೂರು ತಾಲೂಕಿನ ತಳಕಲ್ ಬನ್ನಿಕೊಪ್ಪ ಗ್ರಾಮಗಳ ಎರಡು ಲಾರಿಗಳ ನಡುವೆ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ.
ಸೋಮವಾರ ಈ ಘಟನೆ ಜರುಗಿದ್ದುಎನ್ಎಚ್ 60ರಲ್ಲಿ ಅಪಘಾತ ನಡೆದಿದೆ ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿಗೆ ವೇಗವಾಗಿ ಬಂದ ತಮಿಳುನಾಡು ಮೂಲದ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದೆ.
ಚಾಲಕ ಪಾರು: ಅಪಘಾತದಲ್ಲಿ ಲಾರಿ ಡಿಕ್ಕಿ ರಭಸಕ್ಕೆ ಮುಂಭಾಗ ನುಜ್ಜು ನುಜ್ಜಾಗಿದೆ.ಕ್ಯಾಬಿನ್ನಲ್ಲಿ ಸಿಲುಕಿದ್ದ ಚಾಲಕ ಹೊರ ಬಾರದೆ ಪ್ರಾಣಪಾಯಕ್ಕೆ ಸಿಲುಕಿದ್ದ. ತಕ್ಷಣ ಸಹಾಯಕ್ಕೆ ಧಾವಿಸಿದ ಅಗ್ನಿಶಾಮಕ ಅಧಿಕಾರಿಗಳಾದ ಶಿವಕುಮಾರ್ ಬಾಗೇವಾಡಿ, ವಿನಾಯಕ, ತೇಜಸ್ವಿಕುಮಾರ, ಫಕೀರಪ್ಪ, ಅಮರೇಶ್, ಚೇತನ್ ಚಾಲಕನಿಗೆ ಧೈರ್ಯ ತುಂಬಿ, ನೀರು ಕುಡಿಸಿ ಸಮಾಧಾನಿಸಿದರು.
ಟೂಲ್ ಕಿಟ್ ಬಳಸಿ ಒಂದೂವರೆ ಗಂಟೆ ಕಾರ್ಯಾರಣೆ ನಡೆಸಿ ಚಾಲಕ ಗಣೇಶ ಎಂಬಾತನ ಪ್ರಾಣ ರಸಿದ್ದಾರೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕಾಲುಗಳು ಮುರಿದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ ಕುಕನೂರ ಠಾಣೆಯಲ್ಲಿ ದೂರು ದಾಖಲಾಗಿದೆ.