IMG-20240326-WA0022

ಲೋಕಸಭಾ ಚುನಾವಣಾ ಮತದಾನ ಜಾಗೃತಿ ಜಾಥ ಕಡ್ಡಾಯವಾಗಿ ಮತದಾನ ಮಾಡಿ ಡಾ.ಬಿ.ಈರಣ್ಣ

ಕರುನಾಡ ಬೆಳಗು ಸುದ್ದಿ 

ಸಿರುಗುಪ್ಪ,26- ನಗರದ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಬಳ್ಳಾರಿ ತಾಲೂಕ ಆರೋಗ್ಯ ಅಧಿಕಾರಿಗಳ ಕಚೇರಿ ಸಿರುಗುಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣಾ2024 ರ ಕುರಿತು ಮತದಾರರಲ್ಲಿ ಶಿಕ್ಷಣ ಮತ್ತು ಜಾಗೃತಿ ಅಂಗವಾಗಿ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮತದಾನ-ನಮ್ಮ ಹಕ್ಕು, ಯಾವ ಭಯವಿಲ್ಲದೆ-ಮತದಾನ ಮಾಡೋಣ, 18 ವರ್ಷ ಮೇಲ್ಪಟ್ಟವರು- ಕಡ್ಡಾಯವಾಗಿ ಮತದಾನ ಮಾಡಿ, ಘೋಷಣೆಗಳೊಂದಿಗೆ ಅಧಿಕಾರಿ ಮತ್ತು ಸಿಬ್ಬಂದಿ ಸಮೂಹವು ನಗರದ ಗಾಂಧಿ ವೃತದವರೆಗೆ ಸಾಗಿ ಜಾಗೃತಿ ಮೂಡಿಸಲಾಯಿತು.

ಮಾನ್ಯ ತಾಲೂಕ ಆರೋಗ್ಯ ಅಧಿಕಾರಿಗಳಾದ ಡಾಕ್ಟರ್ ಬಿ ಈರಣ್ಣರವರು ಮಾತನಾಡಿ ಅಂಬೇಡ್ಕರ್ ರವರು ಪ್ರತಿಯೊಬ್ಬರಿಗೆ ಜಾತಿ ಮತಗಳ ಮೇಲು ಕೀಳುಗಳ ಬಡವ ಬಲ್ಲಿದರ ಭೇದವಿಲ್ಲದೆ, ಮತದಾನ ಮಾಡುವ ಹಕ್ಕನ್ನು ಒದಗಿಸಿ ಕೊಟ್ಟರು.

ಅಮೂಲ್ಯವಾದ ಮತದಾನದಿಂದ ಒಳ್ಳೆಯ ನಾಯಕರನ್ನು ಆಯ್ಕೆ ಮಾಡೋಣ ಎಂದು ಕರೆ ಕೊಟ್ಟರು.

ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಲಿಂಗಾ ರಾಜರೆಡ್ಡಿ ಅವರು ಮಾತನಾಡಿ ಯಾವುದೇ ಕಾರಣಕ್ಕೂ ಮತದಾನ ಮಾಡದೆ ಇರಕೂಡದು, ಪ್ರತಿಯೊಬ್ಬರು ಮತ ಚಲಾಯಿಸುವಂತೆ ಜಾಗೃತಿ ಮೂಡಿಸೋಣ ಜನರ ಮನವೋಲಿಸೋಣ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಖಾಸಿಂ ಸಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಡಾ. ಈ ನಿಂಗಪ್ಪ, ಡಾಕ್ಟರ್ ಆನಂದ ದಿವಾಟರ್ ಮತ್ತು ಬಿಪಿಎಂ ಬಿ ಎಚ್ ಈ ಓ ಎಸ್ ಟಿ ಎಲ್ ಎಸ್, ಫಾರ್ಮಸಿ ಆಫೀಸರ್, ಲ್ಯಾಬ್ ಟೆಕ್ನಿಷಿಯನ್ಸ್, ಸ್ಟ್ಯಾಫ್ ನರ್ಸ್ , ಆಶಾ ಮೆಂಟರ್ ಹಾಗೂ ಗ್ರೂಪ್ ಡಿ ಮತ್ತು ಆಶಾ ಸಮೂಹ ಜಾಥದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!