
ಕೊಪ್ಪಳ ಲೋಕಸಭಾ ಸಾರ್ವತ್ರಿಕ ಚುನಾವಣೆ ಶಾಂತಿ ಉತ್ಸಾಹದಿಂದ ಮತದಾನ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 7- ಕೊಪ್ಪಳ ಲೋಕಸಭಾ ಸಾರ್ವತ್ರಿಕ ಚುನಾವಣೆ ಶಾಂತಿ ಉತ್ಸಾಹದಿಂದ ಪ್ರಜಾಪ್ರಭುತ್ವ ಹಬ್ಬದಲ್ಲಿ ಮಂಗಳವಾರ ಶಾಂತಿ ಉತ್ಸಾಹದಿಂದ ಕಾಂಗ್ರೆಸ್ ಪಕ್ಷದ ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರು ಸಿರುಗುಪ್ಪದಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಮಾಜಿ ಶಾಸಕ ಟಿಎಂ ಚಂದ್ರಶೇಖರಯ್ಯ ಅವರು ಮತಗಟ್ಟೆಗೆ ತೆರಳಿ ತಮ್ಮ ಮತದಾನವನ್ನು ಮಾಡಿದರು ತೆಕ್ಕಲಕೋಟೆಯಲ್ಲಿ ಮಾಜಿ ಶಾಸಕ ಎಂಎಸ್ ಸೋಮಲಿಂಗಪ್ಪ ಅವರು ತಮ್ಮ ಮತದಾನವನ್ನು ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು.
ಜನಪರ ಚಿಂತಕರು ಜಮೀನ್ದಾರರು ಸೈಯದ್ ಮೋಹಿದ್ದೀನ್ ಖಾದ್ರಿ ಗೊರವರ ಶ್ರೀನಿವಾಸ್ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಅತಿ ಹೆಚ್ಚು ಮತದಾರರನ್ನು ಹೊಂದಿದ ಮತಗಟ್ಟೆ ಸಂಖ್ಯೆ 72 ಸಿರುಗುಪ್ಪ ನಗರದ ಎರಡನೇ ವಾರ್ಡ್ ವಾದಿರಾಜ ನಗರ ಸೌದಾಗರ್ ಕೊಪ್ಪಳ ಮಸೀದಿ ಬಳಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಪ್ರೌಢಶಾಲಾ ಮತಗಟ್ಟೆಯಲ್ಲಿ ರಾಷ್ಟ್ರೀಯ ವಯಸ್ಕರ ಶಿಕ್ಷಣ ಸೆಂಟ್ರಲ್ ಕೌನ್ಸಿಲ್ ಸದಸ್ಯ ಸಮಾಜ ಸುಧಾರಕ ಹಾಜಿ ಅಬ್ದುಲ್ ನಬಿ, ಹಾಜಿ ಹಂಡಿ ಹುಸೇನ್ ಭಾಷಾ, ಹಾಜಿ ಹಂಡಿ ಹುಸೇನ್ ಸಾಬ್, ಹಂಡಿ ಹಾಶಿಮ್, ಚಿಟಗಿ ಹುಸೇನ್ ಬಿ ಅಫ್ಜಲ್ ಹುಸೇನ್, ಹಾಜಿ ಚೌದ್ರಿ ಖಾಜಾ ಸಾಬ್ ಮಂಗಳವಾರ ಬೆಳಿಗ್ಗೆ ಯಿಂದಲೇ ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಿದರು.
ಇತರರಿಗೆ ಮಾದರಿಯಾದರು ನಗರದ ವಿವಿಧ ಮತಗಟ್ಟೆಯತ್ತ ಮತದಾನ ಮಾಡಲು ಸಾರ್ವಜನಿಕರು ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು ವಿವಿಧ ರಾಜಕೀಯ ಪಕ್ಷದ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ನಾಡಿನ ಮಠಾಧೀಶರು ಗಣ್ಯ ವ್ಯಕ್ತಿಗಳು ತಮ್ಮ ಹಕ್ಕನ್ನು ಶಾಂತ ರೀತಿ ಉತ್ಸಾಹದಿಂದ ಮತದಾನ ಮಾಡಿದರು.
ಸಿರುಗುಪ್ಪ ತಾಲೂಕಿನ ಹಳೆಕೋಟೆ ತೆಕ್ಕಲಕೋಟೆ ಸಿರಿಗೇರಿ ಮತ್ತು ಬೆಂಗಳೂರಿನಿಂದ ಮತದಾನ ಮಾಡಲು ಬಂದ ದಂಪತಿಗಳು ಕಡ್ಡಾಯವಾಗಿ ಸಿರುಗುಪ್ಪದಲ್ಲಿ ಮತ ಚಲಾಯಿಸಿದರು.