
ರಸ್ತೆ ತಡೆ ಮಾಡಿ ಪ್ರತಿಭಟನೆ
ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೦೪- ವಕೀಲರ ಮೇಲೆ ಹಲ್ಲೆ ಖಂಡಿಸಿ ಹಾಗೂ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ಕೊಪ್ಪಳ ಬಾರ್ ಅಸೋಸಿಯೇಷನ್ ವತಿಯಿಂದ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದರು.
ಸೋಮವಾರದಂದು ಕೊಪ್ಪಳದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಚಿಕ್ಕಮಂಗಳೂರಿನ ಪ್ರೀತಮ್ ಅವರ ಮೇಲೆ ಪೋಲಿಸರ ಅಮಾನವೀಯವಾಗಿದ್ದು ಹಲ್ಲೆ ನಡೆಸಿದ್ದು ಆ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು ತಪ್ಪಿತಸ್ಥರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೋಳ್ಳಲು ಆಗ್ರಹಿಸಿದ್ದಾರೆ.
ನಾವುಗಲು ಅನೇಕ ಪ್ರಜೆಗಳ ಮಾನ, ಆಸ್ತಿ,ಜೀವಗಳನ್ನು ರಕ್ಷಣೆ ಮಾಡುವ ಕೆಲಸದಲ್ಲಿ ತೊಡಗಿದ್ದೇವೆ ನಮ್ಮ ರಕ್ಷಣೆ ಮಾಡಿಕೊಳ್ಳಲೂ ವಿಫಲವಾಗಿದ್ದು , ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತರುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎ,ವಿ ಕಣವಿ. ಕಾರ್ಯದರ್ಶಿ ಬಿ,ವಿ ಸಜ್ಜನ್. ಉಪಾಧ್ಯಕ್ಷರಾದ ದಿವಾಕರ ಬಾಗಲಕೋಟೆ, ಮುಖಂಡರಾದ ಎಲ್ ಹೆಚ್ ಹಿರೇಗೌಡರ್, .ಸಿ ಎಂ, ಪೋಲಿಸ ಪಾಟೀಲ್ .ವಿ,ಎಂ ಭೂಸನೂರಮಠ. ಆರ್,ಬಿ ಪಾನಘಂಟಿ. ಸಂಧ್ಯಾ ಮಾದಿಬನೂರ. ಆಸೀಪ್ ಅಲಿ , ಹನುಮಂತರಾವ ದೇಶಪಾಡೆ, ಹನುಮಂತರಾವ ಕೆಂಪಳಿ, ಗುರುರಾಜ ಜೋಶಿ ಸೇರಿದಂತೆ ಅನೇಕರು ಇದ್ದರು.