
ವಚನಗಳ ಮೂಲಕ ಸಮಾಜವದಲ್ಲಿ ಬದಲಾವಣೆ ತರಲು ಸಾದ್ಯ
ಚಿದಂಬರ ಮಠದ ಎಚ್ಚರಪ್ಪಜ್ಜ ಶಾಸ್ತ್ರಿ ಅಭಿಮತ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 30 – ಶರಣರು ತಮ್ಮ ವಚನಗಳ ಮೂಲಕ ಸಮಾಜವನ್ನು ಬದಲಾವಣೆ ತರಲು ಸಾಧ್ಯವಿದೆ 12ನೇ ಶತಮಾನ ಎಂಬುದು ಬಹಳ ಮಹತ್ವದಿಂದ ಕೊಡಿದೆ ಸಮಾಜದಲ್ಲಿ ಬಹುದೊಡ್ಡ ಬದಲಾವಣೆಯ ಹೊಸ ಚಿಂತನೆ ರೂಪುಗೊಂಡ ಕಾಲ ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಸೇರಿದಂತೆ ಹಲವು ಅನಿಷ್ಟ ಪದ್ಧತಿಗಳು ಆಚರಣೆಯಲ್ಲಿದ್ದ ಈ ಕಾಲದಲ್ಲಿ ವಚನಕಾರರು ತಮ್ಮ ಸರಳ ವಚನಗಳ ಮೂಲಕ ಸಮಾಜದಲ್ಲಿ ಬದಲಾವಣೆಯನ್ನು ತರಲು ಪ್ರಯತ್ನಿಸಿದ್ದರು ಎಂದು ಅಳವಂಡಿಯ ಚಿದಂಬರ ಮಠದ ಎಚ್ಚರಪ್ಪಜ್ಜ ಶ್ಯಾಸ್ತ್ರಿ ಹೇಳಿದರು.
ತಾಲೂಕಿನ ಮಕ್ಕಳ್ಳಿ ಗ್ರಾಮದಲ್ಲಿ ಮಾಸಿಕ ಶಿವಾನುಭವ ಗೋಷ್ಠಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಶರಣರು ಜಾತಿಯ ಹಂಗಿಲ್ಲದೆ ಎಲ್ಲಾ ವರ್ಗದ ವಚನಕಾರರು ವಚನಗಳ ಮೂಲಕ ತಮ್ಮ ಹೊಸ ಚಿಂತನೆಗಳನ್ನು ಕಟ್ಟಿಕೊಡುತ್ತಿದ್ದರು. ಜನರಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸವನ್ನ ಮಾಡುತ್ತಿದ್ದರು ಇಂದು ಪ್ರಾಣಿಗಿ ಪಕ್ಷೀಗಳಿದ್ದಷ್ಟು ಅರಿವೂ ಮಾನವರಾದ ನಮಗೆ ಅರಿವೂ ಇಲ್ಲದಂತಾಗೀರುವದು ನೊವೀನ ಸಂಗತಿ ಎಂದರು
ಹನ್ನೆರಡನೇಯ ಶತಮಾನದ ಬಹುದೊಡ್ಡ ಸಮಾಜ ಚಿಂತಕರು ಮತ್ತು ಸುಧಾರಕರು ಬಸವಣ್ಣನವರು. ಬಸವಣ್ಣನವರ ಸಾರಥ್ಯದಲ್ಲಿ ನಡೆದ ಸುಧಾರಣೆಯ ಪ್ರಯತ್ನ ಒಂದು ಸಾಮಾಜಿಕ ಚಳವಳಿಯಾಗಿ ರೂಪುಗೊಂಡಿತ್ತು. ಇವರ ತತ್ವ, ಆದರ್ಶಗಳು, ಚಿಂತನೆಗಳು ಇಂದಿಗೂ ಪ್ರಸ್ತುತ ಶಿವಾನಂದ ಅಪ್ಪನವರು ಅಪ್ಪಣ ಬಸವಾದಿ ಶರಣರ ತತ್ವಾದರ್ಶಗಳನ್ನ ಮೈಗೂಡೀಸಿಕೊಂಡು ಬಂದವರು ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಮಕ್ಕಳ್ಳಿಯ ಶಿವಾನಂದ ಮಠದ ಮಠಾದೀಶರು ಶಿವಾನು ಭವ ಗೋಷ್ಠಿ ಕಾರ್ಯಕ್ರಮ ಹಮ್ಮಿಕೊಂಡು ಸಮಾಜ ಸುಧಾರಣೆಗೆ ಮುನ್ನಡಿ ಇಟ್ಟಿರುವದು ಸಂತಷದ ವಿಷಯ ಇಂತಹ ಕಾರ್ಯಕ್ರದಲ್ಲಿ ಭಾಗವಹಿಸಿ ಮನಸ್ಸು ಸ್ವಚ್ಛಗೊಳಿಸಿಕೊಳ್ಳಬೇಕು ಶರಣ ಮಾರ್ಗದಲ್ಲಿ ಸಾಗಬೇಕು ಎಂದು ಹೇಳಿದರು.
ಮಕ್ಕಳ್ಳಿಯ ಶಿವಾನಂದ ಸ್ವಾಮಿಜಿ ಮಾತನಾಡಿ ಪ್ರತಿಯೊಬ್ಬರಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ಸಮಾನತೆಯ ತತ್ವ ಸಾರಿದ ಭಕ್ತಿಭಂಡಾರಿ, ಸಾಮಾಜಿಕ ಕ್ರಾಂತಿಯ ಹರಿಕಾರ, ಅಂಧ ಶ್ರದ್ಧೆಗಳ ವಿರುದ್ಧ ಧ್ವನಿ ಎತ್ತಿದ ಮಾರ್ಗದರ್ಶಕರು ಶರಣರ ವಚನಗಳ ಮೂಲಕ ಜೀವನಾದರ್ಶಗಳನ್ನು ಬೋಧಿಸಿದ ಮಹಾನ್ ಚಿಂತಕ ಬಸವಣ್ಣನವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಾಗಬೇಕಾಗಿದೆ , ಸಿದ್ದಾರೂಢರು.ಶಿವಾನಂದ ಅಪ್ಪನವರು ಅನೇಕ ಶರಣರು ಸಂತರು ಹಾಕಿಕೊಟ್ಟ ದಾರಿಯಲ್ಲಿ ಸಾಗಿದರೆ ಜೀವನ ಸುಖಮಯ ಸಮಾಜವನ್ನ ನಿರ್ಮಿಸಲು ಸಾದ್ಯವಾಗುತ್ತದೆ ಪ್ರತಿ ಹುಣ್ಣೀಮೆಯ ದಿವಸ ಸಂಜೆ ವೇಳೆ ಶಿವಾನುಭವ ಗೋಷ್ಠಿ ನಡೆಯುತ್ತದೆ ಗೋಷ್ಠಿಯಲ್ಲಿ ಭಾಗವಹಿಸಿ ಎಂದು ಭಕ್ತರಿಗೆ ಕರೆ ನೀಡಿದರು.ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತರಿಗೆ ರುದ್ರಪ್ಪ ನಡುಲಮನಿ ಅನ್ನ ಸಂತರ್ಪಣೆ ಮಾಡಿದರು.
ಈಕಾರ್ಯಕ್ರಮದಲ್ಲಿ ,ಶರಣಯ್ಯ ಚಿತ್ರಗಿಮಠ, ಗವಿಸಿದ್ದಯ್ಯ ಹಿರೇಮಠ ತುಕರಾಂ ನಾವಡೆ ,ಶರಣಪ್ಪ ಮೇಟಿ, ನೀಲನಗೌಡ ಹೊಸಮನಿ ,ಪಾಲಾಕ್ಷಪ್ಪ ಪತ್ತಾರ,ಫಕೀರಗೌಡ ಮಾಲಿ ಪಾಟೀಲ್,ಯಂಕಣ್ಣ ಚಿಂಚಲ,ಮುದಕಪ್ಪ ತಳವಾರ ಮಠದ ಕಾರ್ಯದರ್ಶಿ ದುರಗಪ್ಪ ಮಕ್ಕಳ್ಳಿ .ಪತ್ರಕರ್ತ ಶ್ರೀಕಾಂತಗೌಡ ಮಾಲಿ ಪಾಟೀಲ್ ಸೇರಿದಂತೆ ಮತ್ತು ಇತರರು ಭಾಗವಹಿಸಿದ್ದರು