WhatsApp Image 2024-06-21 at 5.57.40 PM

ಪ್ರತಿನಿತ್ಯ ಯೋಗ ಮಾಡುವದರಿಂದ ಉತ್ತಮ

ಆರೋಗ್ಯ ಲಭಿಸುವುದು : ಹನಮಂತಗೌಡ ಪೊಲೀಸ್ ಪಾಟೀಲ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 21- ಪ್ರತಿಯೂಬ್ಬರು ಪ್ರತಿನಿತ್ಯ ಯೋಗಭ್ಯಾಸ ಮಾಡುವರಿಂದ ಉತ್ತಮ ಆರೋಗ್ಯ ಲಭಿಸುವುದು ಜೀವನದಲ್ಲಿ ಎಲ್ಲವನ್ನು ಗಳಿಸಬಹುದು. ಆದರೆ, ಉತ್ತಮ ಆರೋಗ್ಯ ಗಳಿಸಬೇಕಾದರೆ ಯೋಗ ಮಾಡುವುದು ಅಗತ್ಯ ಎಂದು ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕರಾದ ಹನಮಂತಗೌಡ ಪೊಲೀಸ್ ಪಾಟೀಲ ಸಲಹೆ ನೀಡಿದರು. ತಾಲೂಕಿನ ವಜ್ರಬಂಡಿ ಗ್ರಾಮ ಪಂಚಾಯತಿಯ ಅಮೃತ ಸರೋವರ ದಡದ ಮೇಲೆ 10 ನೇಯ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕೆರೆ ದಡದ ಮೇಲೆ ಯೋಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿನಿತ್ಯ ಯೋಗಭ್ಯಾಸ ರೂಢಿ ಮಾಡಿಕೊಂಡರೆ ಯಾವುದೇ ರೋಗಗಳು ಬರುವುದಿಲ್ಲ. ಎಂದು ಹೇಳಿದರು

ನಂತರ ಪಿಡಿಓ ಹನುಮಂತರಾಯ ಯಂಕಂಚಿ ಅವರು ಮಾತನಾಡಿ ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಶೈಲಿ ಅಭ್ಯಾಸ ಮಾಡಿಕೊಳ್ಳಬೇಕು. ಪ್ರತಿದಿನ ಬೆಳಿಗ್ಗೆ ಯೋಗ ಮಾಡಬೇಕು, ಇದರಿಂದ ಆರೋಗ್ಯವಾಗಿರಲು ಸಹಕಾರಿಯಾಗುತ್ತದೆ ಎಂದು ಯೋಗದ ಮಹತ್ವ ತಿಳಿಸಿದರು.

ಯೋಗ ಮಾಡಿದರೆ ರೋಗಗಳು ದೂರವಾಗುವವು. ಹಲವು ರೋಗಗಳಿಗೆ ಯೋಗ ಒಂದೇ ಮದ್ದು. ಪ್ರತಿದಿನ ಯೋಗ ಮಾಡಿ ಆಯುಷ್ಯ ಹೆಚ್ಚಿಸಿಕೊಳ್ಳಬಹುದು ಹೇಳಿದರು.

ಈ ಸಂದರ್ಭದಲ್ಲಿ ಅಮೃತ ಸರೋವರ ದಡದ ಮೇಲೆ ಶಾಲಾ ಶಿಕ್ಷಕರು, ಮಕ್ಕಳು, ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ, ಸಾರ್ವಜನಿಕರಿಗೆ ವಜ್ರಬಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಕರಾದ ನಿಂಗಪ್ಪ ಹುಚ್ಚಪ್ಪನವರ ಯೋಗ ಮಾಡುವ ವಿಧಾನಗಳನ್ನು ತಿಳಿಸುವ ಪ್ರಾಣಾಯಾಮ, ಸೂರ್ಯ ನಮಸ್ಕಾರ, ವಜ್ರಾಸನ, ವಕ್ರಾಸನ, ಶವಾಸನ, ಜ್ಞಾನ, ವಕ್ರಾಸನ ಮುಂತಾದ ಯೋಗದ ವಿಧಗಳನ್ನು ಮಾಡಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಚಂದವ್ವ ರಾಮಣ್ಣ ಲಮಾಣಿ, ಸದಸ್ಯರಾದ ಕನಕಪ್ಪ ಭೀಮಪ್ಪ ಉಪ್ಪಾರ, ಶರಣಪ್ಪ ತಳವಾರ, ತಿರುಪತಿ ರಾಠೋಡ, ಪಿಡಿಒರಾದ ಹನಮಂತರಾಯ ಯಂಕಂಚಿ, ತಾ.ಪಂ ತಾಂತ್ರಿಕ ಸಂಯೋಜಕರಾದ ಸಂತೋಷ ನಂದಾಪುರ, ಐಇಸಿ ಸಂಯೋಜಕರಾದ ಶರಣಪ್ಪ ಹಾಳಕೇರಿ, ಡಿಇಒರಾದ ನೀಲಪ್ಪ,ಕೆ ಗ್ರಾ.ಪಂ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಸಾರ್ವಜನಿಕರು ಮತ್ತು ಇತರರು ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!