
ಶ್ರೀ ಹನುಮಂತದೇವರ ಕಾರ್ತೀಕ ಮಹೋತ್ಸವ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 31- ತಾಲೂಕಿನ ವಜ್ರಬಂಡಿ ಗ್ರಾಮದ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಶ್ರೀ ಹನುಮಂತದೇವರ ದೇವಾಲಯದಲ್ಲಿ ಕಾರ್ತೀಕ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ ದೇವಾಲಯದಲ್ಲಿ ನಿರ್ಮಾಲ್ಯ ವಿಸರ್ಜನೆ, ವಿಶೇಷ ಪೂಜೆ, ಅಲಂಕಾರ, ಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳು ನಡೆದವು. ನಂತರ ಶ್ರೀ ವಾಯುಸ್ತುತಿಃ ಪುನಶ್ಚರಣ, ಶ್ರೀ ರಾಘವೇಂದ್ರ ಸ್ವಾಮಿ ಅಷ್ಟೋತ್ತರ ಪಾರಾಯಣ ಮಾಡಲಾಯಿತು. ನಂತರ ಶ್ರೀ ಹನುಮಂತ ದೇವರಿಗೆ ವಿಶೇಷ ಪೂಜೆ, ಪಂಚಾಮೃತಭಿಷೇಕ, ಅಲಂಕಾರ, ಮಹಾಮಂಗಳಾರತಿ, ಮಹಾನೈವೇದ್ಯ ಸೇರಿದಂತೆ ವಿವಿಧ ಪೂಜೆಗಳು ವಿಜೃಂಭಣೆಯಿಂದ ನಡೆದವು. ಈ ಸಂಧರ್ಭದಲ್ಲಿ ಮಹಿಳಾ ಭಜನಾ ಮಂಡಳಿ ಸದಸ್ಯರಿಂದ ಶ್ರೀ ವಿಜಯದಾಸರ ಸುಳಾದಿ ಮಂತ್ರ ಪಟಿಸಿ ಭಕ್ತಿ ಸಮಾರ್ಪಿಸಿದರು. ಈ ಸಂದರ್ಭದಲ್ಲಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಳಖೇಡದ ಶ್ರೀ ತಿರುಪತಿ ಆಚಾರ್ ಅವರಿಂದ ವಿಶೇಷ ಉಪನ್ಯಾಸ ನಡೆಯಿತು.
ಈ ಸಂರ್ಭದಲ್ಲಿ ಶ್ರೀ ಮಾರುತಿ ದೇವಸ್ಥಾನ ಸಮಿತಿಯ ರಾಮರಾವ್ ದೇಸಾಯಿ, ಭೀಮರಾವ್ ದೇಸಾಯಿ, ಪವನ್ ಕುಮಾರ್ ಕನ್ಯಾರ್ ಮಾಡವು, ನಾರಾಯಣ ಆಚಾರ್ ಜೋಶಿ, ಬಂಡೇರಾವ್ ದೇಸಾಯಿ, ರಾಘವೇಂದ್ರ ದೇಸಾಯಿ, ಸುಧೀoದ್ರ ಆಚಾರ ಜೋಶಿ, ಕಿರಣ್ ಕುಮಾರ್ ಸಾಲಭಾವಿ, ಅನಂತರಾವ್ ದೇಸಾಯಿ, ಪ್ರಾಣೇಶ್ ದೇಸಾಯಿ, ಗುರುರಾಜ್ ಅಡವಿಭಾವಿ, ಅನಿಲ್ ಕುಮಾರ್ ದೇಸಾಯಿ, ಅಡವಾಚಾರ ಜೋಶಿ, ಕೃಷ್ಣ ಬೇಣಕಲ್ಸೇರಿದಂತೆ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಂಜೆ ಡಿಪೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಮಹಿಳೆಯರು, ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತಿ ಸಮರ್ಪಿಸಿದರು. ಬೆಳಿಗ್ಗೆ ಗ್ರಾಮದ ವತಿಯಿಂದ ಸುಮಂಗಲೆಯರು, ಮಕ್ಕಳಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ಸಂಜೆ ಶ್ರೀ ಹನುಮಂತ ದೇವರ ಪಲ್ಲಕ್ಕಿ ಉತ್ಸವ, ಉಚ್ಚಾಯ ವಿಜೃಂಭಣೆಯಿಂದ ನೆರವೇರಿತು.