
ಕೊಲೆ ಆರೋಪಿಗಳೊಂದಿಗೆ ಪೊಲೀಸ್ ತನಿಖಾಧಿಕಾರಿ ಶಾಮೀಲು – ಆರೋಪ
ನಿಸಾಹಯಕರಾಗಿ ಕಣ್ಣಿರಿಟ್ಟ ತಂದೆ
ಕೊಪ್ಪಳ, 07- 2023ರ ಡಿಸೆಂಬರ್ 4ರ ಸಂಜೆ ಕುಕನೂರು ತಾಲೂಕಿನ ವಟಪರವಿಯಲ್ಲಿ ಸಹೋದರ ಪ್ರಭುರಾಜ ಕೊಳಜಿಯ ಕೊಲೆಯಾಗಿದ್ದು, ಪ್ರಕರಣ ದಾಖಲಿಸಲಾಗಿದೆ. ಕೊಲೆ ಪ್ರಕರಣದ ತನಿಖಾಧಿಕಾರಿ ಯಲಬುರ್ಗಾ ವೃತ್ತ ನಿರೀಕ್ಷಕ ಮೌನೇಶ್ ಪಾಟೀಲ ಕೊಲೆ ಆರೋಪಿಗಳೊಂದಿಗೆ ಶಾಮೀಲಾಗಿದ್ದು ಪ್ರಕರಣವನ್ನು ಬೇರೊಂದು ದಿಕ್ಕಿಗೆ ತಿರುಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೂಡಲೇ ಇವರನ್ನು ಬದಲಾಯಿಸಿ ಈ ಕೊಲೆ ಪ್ರಕರಣವನ್ನು ದಕ್ಷ ಪೊಲೀಸ್ ಅಧಿಕಾರಿಗೆ ನೀಡುವಂತೆ ಕುಟುಂಬಸ್ಥರು ಆಗ್ರಹಿಸಿದರು.
ಗುರುವಾರ ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹನುಮಂತಪ್ಪ ಕೊಳಜಿ, ಸಹೋದರ ಪ್ರಭುರಾಜನ ಕೊಲೆಯಾಗಿ ಮೂರು ತಿಂಗಳು ಗತಿಸಿದರೂ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ತನಿಖಾಧಿಕಾರಿ ಮೌನೇಶ್ ಪಾಟೀಲ ನಿರ್ಲಕ್ಷ್ಯ ವಹಿಸಿದ್ದಾರೆ. ಕೊಲೆಯ ಸಂಶಯಾಸ್ಪದ ವ್ಯಕ್ತಿಗಳೊಂದಿಗೆ ತನಿಖಾಧಿಕಾರಿ ಹೊಂದಿರುವ ಒಡನಾಟ ಗಮನಿಸಿದರೆ ಆರೋಪಿಗಳೊಂದಿಗೆ ಅವರು ಶಾಮೀಲಾಗಿರುವ ಶಂಕೆ ಇದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡಲೇ ಇವರನ್ನು ಬದಲಾಯಿಸಿ, ಬೇರೊಬ್ಬ ತನಿಖಾಧಿಕಾರಿ ನೇಮಿಸಬೇಕು ಎಂದು ಒತ್ತಾಯಿಸಿದರು.
ಸಹೋದರನ ಪತ್ನಿಯೇ ಕೊಲೆ ಮಾಡಿರುವ ಸಂಶಯವಿದ್ದು, ಅವರ ಮೊಬೈಲ್ ಕರೆ ಪರಿಶೀಲಿಸುವಂತೆ, ಅವರನ್ನು ವಿಚಾರಣೆಗೊಳಪಡಿಸುವಂತೆ ಮನವಿ ಮಾಡಿದರೂ ಮೌನೇಶ್ ಪಾಟೀಲ ಅವರು ಈ ವಿಷಯವಾಗಿ ನಮ್ಮನ್ನೇ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ತನಿಖೆಯ ದಿಕ್ಕು ತಪ್ಪಿಸುವ ರೀತಿಯಲ್ಲಿ ತಾವು ಹೇಳಿದಂತೆ ಪತ್ರ ಬರೆಯಲು ಹೇಳುತ್ತಿದ್ದು, ಇದಕ್ಕೆ ನಾವು ಒಪ್ಪಿಲ್ಲ ಎಂದು ವಿವರಿಸಿದ್ದರು. ಮಗನನ್ನು ಕಳೆದು ಕೊಂಡ ತಂದೆ ಗಳಗಳನೆ ಅತ್ತು ಮಗನ ಸಾವಿಗೆ ನ್ಯಾಯ ಅಇಗುತ್ತಿಲ್ಲವೇಂದು ಕಣ್ಣಿರಿಟ್ಟರು.
ಈ ಸಂದರ್ಭದಲ್ಲಿ ಶಿವಪ್ಪ ಕೊಳಜಿ, ಸುರೇಶ ಘೋಸಿ, ಶರಣಪ್ಪ ರ‌್ಯಾವಣಕಿ, ಅಯ್ಯನಗೌಡ ಕೆಂಚಮ್ಮನವರ್ ಇತರರು ಇದ್ದರು.