
ವಣಗೇರಿಯಲ್ಲಿ ಸಂಭ್ರಮದ
ಶ್ರೀ ಚಿದಂಬರ ಜಯಂತ್ಯೋತ್ಸವ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 03- ಭಕ್ತರ ಮನೋಭಿಲಾಶೆ ಗಳನ್ನು ಈಡೇರಿಸುವ ಶ್ರೀ ಚಿದಂಬರನು ಮಹಾ ದೇವನ ಅವರತಾರವೇಂದು ವೇ. ಮೂ ಶೇಷಾಚಲ ಜೋಶಿ ಹೇಳಿದರು.
ಅವರು ಜಿಲ್ಲೆಯ ವಣಗೇರಿ ಗ್ರಾಮದಲ್ಲಿ ದೀಕ್ಷಿತ ಕುಟುಂಬ ಹಾಗೂ ಬ್ರಾಹ್ಮಣ ಸಮಾಜದಿಂದ ಹಮ್ಮಿಕೊಂಡಿದ ಶ್ರೀ ಶಿವ ಚಿದಂಬರ ಜಯಂತಿ ಕಾರ್ಯಕ್ರಮದ ನೇತ್ರತ್ವ ವಹಿಸಿ ಮಾತನಾಡುತ್ತಿದ್ದರು.
ಭಕ್ತರ ಉದ್ಧಾರಕ್ಕಾಗಿ ಭಗವಂತ ಮಹಾದೇವ ಚಿದಂಬರ ಅವತಾರದಲ್ಲಿ ಭೂಮಿಯಲ್ಲಿ ಅವತರಿಸಿ ಸವಿರಾರು ಪವಾಡಗಳನ್ನು ಮಾಡಿದ್ದಾರೆ.
ಮನುಷ್ಯನ ಮನೋಭಿಲಾಷೆಗಳನ್ನು ಬೇಡಿಕೊಳ್ಳದೆ ಅರಿತು ನೀಡುವ ಮಹಾ ಕರುಣಾಮಿ ಭಕ್ತರ ಪಾಲಿನ ಕಾಮದೇನು ಚಿದಂಬರ ನಾಗಿದ್ದಾನೆ.
ನಾಡಿನ ಉದ್ದಗಲಕ್ಕೂ ಅನೇಕ ಪವಾಡಗಳನ್ನು ಮಾಡಿ ಇಂದಿಗೂ ಪವಾಡಗಳನ್ನು ಭಕ್ತರಿಗಾಗಿ ಮಾಡುತ್ತಾ ಭೂಮಿಯ ಮೇಲೆ ನೆಲೆಸಿದ್ದಾನೆ ಎಂದರು.
ಶ್ರೀ ಚಿದಂಭರ ಜಯಂತಿ ಅಂಗವಾಗಿ ಕಳೆದ ಮೂರು ದಿನಗಳಿಂದ ವಿವಿಧ ದಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಜಯಂತಿ ಅಂಗವಾಗಿ ಶನಿವಾರ ಅಹೋರಾತ್ರಿ ಸಂಗೀತ ಕಾರ್ಯಕ್ರಮ. ಭಜನೆ ಹಾಗೂ ಪ್ರವಚನ ಕಾರ್ಯಕ್ರಮಗಳು ಜರುಗಿದವು. ಬೆಳಿಗ್ಗೆ ಶ್ರೀ ಚಿದಂಬರ ನಿಗೆ ತೋಟ್ಟಿಲೂ ಸೇವೆ. ಅಭಿಷೇಕ .ವಿಶೇಷ ಅಲಂಕಾರ ಜರುಗಿತು.