
ವಯೋ ನಿವೃತ್ತಿ, ಬಿಳ್ಕೊಡುಗೆ ಮತ್ತು ಅಭಿನಂದನ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 1- ನಗರದ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ ಐದನೇ ವಿಭಾಗ ಬಡ್ತಿ ಮುಖ್ಯ ಗುರುಗಳಾದ ಶೌಕತ್ ಅಲಿ ಬಾಗವಾನ್ ಇವರ ನಿವೃತ್ತಿ ಹೊಂದಿದ ಪ್ರಯುಕ್ತ ನಗರದ 6ನೇ ವಾರ್ಡ್ ಉರ್ದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅವರಣದಲ್ಲಿ ಬೀಳ್ಕೊಡುಗೆ ಮತ್ತು ಅಭಿನಂದನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಾರ್ವಜನಿಕ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಗುರ್ಪ್ಪ ಹಾಗೂ ಕ್ಷೇತ್ರ ಶಿಕ್ಷಣ ಸಮನ್ವಯಾ ಅಧಿಕಾರಿ ತಮ್ಮನ ಗೌಡ ಪಾಟೀಲ್ ಅವರು ಪಾಲ್ಗೊಂಡು ಶಿಕ್ಷಣ ಇಲಾಖೆಯಲ್ಲಿ ಸತತ 28 ವರ್ಷಗಳ ಕಾಲ ಶಿಕ್ಷಕರಾಗಿ ಮತ್ತು ಮುಖ್ಯ ಗುರುಗಳಾಗಿ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸುವುದರ ಜೊತೆಗೆ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡು ವಯೋ ನಿವೃತ್ತಿ ಹೊಂದಿದ ಶೌಕತ್ ಅಲಿ ಬಾಗವಾನ್ ಅವರ ನಿವೃತ್ತಿ ಜೀವನವು ಸುಖಕರವಾಗಿರಲಿ ಎಂದು ಹಾರೈಸಿ ಹೂ ಮಾಲೆ ಶಾಲು ನೊಂದಿಗೆ ನೆನಪಿನ ಕಾಣಿಕೆ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉರ್ದು ಐದನೇ ವಿಭಾಗದ ಶಿಕ್ಷಕರಾದ ಬಿ ತಿಮ್ಮನಗೌಡ ಉರ್ದು ಶಾಲಾ ಮುಖ್ಯ ಗುರುಗಳಾದ ಸೈಯದ್ ನಿಜಾಮುದ್ದೀನ್ ಶಿಕ್ಷಣ ಇಲಾಖೆಯ ನಿವೃತ್ತ ಶಿಕ್ಷಣ ಸಂಯೋಜಕರಾದ ಹಾಗೂ ಮುಖ್ಯ ಗುರುಗಳಾದ ಬಸವರಾಜಯ್ಯ ರಾಷ್ಟ್ರೀಯ ಸಾಕ್ಷರತಾ ಶಿಕ್ಷಣ ಪ್ರೇಮಿ ಹಾಜಿ ಅಬ್ದುಲ್ ನಬಿ ಹಂಡಿ ಹಾಜಿ ಹುಸೇನ್ ಬಾಷಾ ಹನುಮಂತಪ್ಪ ನಿವೃತ್ತ ಮುಖ್ಯ ಗುರುಗಳು ಮಹಮ್ಮದ್ ಅಲಿ ಬಾಗವಾನ್ ಫಕ್ರುದ್ದೀನ್ ತಾಲೂಕು ಮಟ್ಟದ ಎಲ್ಲಾ ಉರ್ದು ಶಾಲೆಗಳ ಮುಖ್ಯ ಗುರುಗಳು ಮತ್ತಿತರ ಗಣ್ಯರು ಶೌಕತ್ ಅಲಿ ಅವರ ಸೇವೆಯನ್ನು ಮತ್ತು ಅವರ ಗುಣಗಾನ ವನ್ನು ಮಾಡಿ ದಂಪತಿಗಳಿಗೆ ಹೃತ್ಪೂರ್ವಕವಾಗಿ ಬಿಳ್ಕೊಡೆಗೆ ಅಭಿನಂದನೆ ಹೂಮಾಲೆ ಶಾಲುಗಳೊಂದಿಗೆ ಗೌರವಿಸಿ ಸನ್ಮಾನಿಸಿದರು.