IMG-20240120-WA0015

*ವಸ್ತುವಿನ ಗುಣಮಟ್ಟ ಮತ್ತು ಗ್ರಾಹಕರ ಅಭಿರುಚಿಗೆ ತಕ್ಕಂತೆ KSDL ಉತ್ಪಾದನೆಯಲ್ಲಿ ತೊಡಗಿದೆ: ಸಿಎಂ ಸಿದ್ದರಾಮಯ್ಯ*

*ಸಚಿವ ಎಂ.ಬಿ.ಪಾಟೀಲ್ ಅವರು KSDL ನ ಘನತೆ ಹೆಚ್ಚಿಸಿ ಲಾಭದಾಯಕ ಪ್ರಗತಿ ಕಾಣಿಸಿದ್ದಾರೆ: ಸಿ.ಎಂ.ಮೆಚ್ಚುಗೆ*

ಬೆಂಗಳೂರು  20 – ವಸ್ತುವಿನ ಗುಣಮಟ್ಟ ಹೆಚ್ಚಿಸುವ ಮತ್ತು ಗ್ರಾಹಕರ ಅಭಿರುಚಿಗೆ ತಕ್ಕಂತೆ KSDL ಉತ್ಪಾದನೆಯಲ್ಲಿ ತೊಡಗಿ ಲಾಭದಾಯಕವಾಗಿ ಪ್ರಗತಿ ಕಂಡಿದೆ
ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.

ಕರ್ನಾಟಕ ಮತ್ತು ಮಾರ್ಜಕ ನಿಯಮಿತದ 21ನೂತನ ವೈವಿದ್ಯಮಯ ಉತ್ಪನ್ನಗಳನ್ನು ಲೋಕಾರ್ಪಣೆ ಗೊಳಿಸಿದರು.

ಸ್ಪರ್ಧಾತ್ಮಕ ಯುಗದಲ್ಲಿ ಖಾಸಗಿ ಸಂಸ್ಥೆಗಳ ಜತೆ ಪೈಪೋಟಿ ಮಾಡುವಂತಹ ಗುಣಮಟ್ಟವನ್ನು ನಾವು ಕಾಪಾಡಿ ಕೊಳ್ಳಬೇಕು. ಇದರಲ್ಲಿ KSDL ಯಶಸ್ಸು ಗಳಿಸಿದೆ. ಸಚಿವ ಎಂ.ಬಿ.ಪಾಟೀಲ್ ಅವರು KSDL ನ ಘನತೆ ಹೆಚ್ಚಿಸಿ ಲಾಭದಾಯಕ ಪ್ರಗತಿ ಕಾಣಿಸಿದ್ದಾರೆ ಎಂದು ಸಿ.ಎಂ ಮೆಚ್ಚುಗೆ ಸೂಚಿಸಿದರು.

ಸರ್ಕಾರಿ ಸಂಸ್ಥೆ ಮತ್ತು ಸರ್ಕಾರಿ ಕಾರ್ಖಾನೆ ಎಂದರೆ ಯಾರೂ ಮೂಗು ಮುರಿಯದಂತಹ ರೀತಿಯಲ್ಲಿ ಪ್ರಗತಿ ಕಾಣಿಸಿ ಮಾದರಿಯಾಗಿ KSDL ಬೆಳವಣಿಗೆ ಕಂಡಿರುವುದಕ್ಕೆ ಎಲ್ಲರಿಗೂ ಮುಖ್ಯಮಂತ್ರಿಗಳು ಅಭಿನಂದಿಸಿದರು.

KSDL ಸಂಸ್ಥೆಯ ಉತ್ಪನ್ನಗಳನ್ನು ನಕಲು ಮಾಡುವವರ ಮೇಲೆ ತೀವ್ರ ನಿಗಾ ವಹಿಸುವಂತೆ ಇದೇ ಸಂದರ್ಭದಲ್ಲಿ ಸಿಎಂ ಸೂಚಿಸಿದರು.

ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್, KSDL ನ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಪ್ರಶಾಂತ್, KSDL consultant ರಜನೀಕಾಂತ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!