
ವಿ ಎಸ್ ಕೆ ವಿಶ್ವವಿದ್ಯಾಲಯ ಬಿಎ 3ನೇ ಸೆಮಿಸ್ಟರ್ ಸಮಾಜಶಾಸ್ತ್ರ ಪರೀಕ್ಷೆಗೆ ಒಂದನೇ ಸೆಮಿಸ್ಟರ್ ಪ್ರಶ್ನೆ ಪತ್ರಿಕೆ – AIDSO ಖಂಡನೆ ಹಾಗೂ ಕ್ರಮಕ್ಕೆ ಆಗ್ರಹ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 16- ವಿಜಯನಗರ ಶ್ರೀಕೃಷ್ಣದೇವರಾಯ ವಿ ವಿ ವ್ಯಾಪ್ತಿಯ ಬರುವ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮಂಗಳವಾರ ನಿಗದಿಯಾಗಿದ್ದ ಬಿಎ 3ನೇ ಸೆಮಿಸ್ಟರ್ ನ ಸಮಾಜಶಾಸ್ತ್ರ ಪರೀಕ್ಷೆಯನ್ನು ಬರೆಯಲು ಕುಳಿತರೆ, ವಿಶ್ವವಿದ್ಯಾಲಯದ ನಿರ್ಲಕ್ಷದಿಂದ 3ನೇ ಸೆಮಿಸ್ಟರ್ ನ ವಿದ್ಯಾರ್ಥಿಗಳಿಗೆ 1ನೇ ಸೆಮಿಸ್ಟರ್ ಪ್ರಶ್ನೆಪತ್ರಿಕೆಗಳನ್ನು ಕೊಡಲಾಗಿತ್ತು.
ವಿದ್ಯಾರ್ಥಿಗಳಿಗೆ ಆತಂಕ, ಗೊಂದಲ ಸೃಷ್ಟಿಯಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಉಂಟಾಗಿದೆ. ಇದು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ ಆಡುತ್ತಿರುವ ದೋರಣೆ ಎಂದು ಎಐಡಿಎಸ್ಓ ಖಂಡಿಸುತ್ತದೆ.
ಈಗಾಗಲೇ ಎಲ್ಲಾ ವಿಶ್ವವಿದ್ಯಾಲಯಗಳು ಮೂರನೇ ಸೆಮಿಸ್ಟರ್ ನ ಪರೀಕ್ಷೆಗಳನ್ನು ಮುಗಿಸಿ 4ನೇ ಸೆಮಿಸ್ಟರ್ ತರಗತಿಗಳನ್ನು ಪ್ರಾರಂಭಿಸಿವೆ, ಆದರೆ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಸೆಮಿಸ್ಟರ್ ಪರೀಕ್ಷೆಗಳನ್ನು ತುಂಬಾ ತಡವಾಗಿ ನಡೆಸುತ್ತಿದ್ದು, ಅದರಲ್ಲೂ ಈ ರೀತಿ ನಿರ್ಲಕ್ಷ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದರೆ.
ಪರೀಕ್ಷೆ ಯಾವಾಗ ಮುಗಿಯುತ್ತಾವೋ ತರಗತಿಗಳು ಯಾವಾಗ ಪ್ರಾರಂಭವಾಗುತ್ತವೂ ಎಂದು ವಿದ್ಯಾರ್ಥಿಗಳು ಯೋಚಿಸುತ್ತಿದ್ದಾರೆ. ಈಗಿರುವಾಗ ವಿಶ್ವವಿದ್ಯಾಲಯದ ಈ ರೀತಿಯ ನಿರ್ಲಕ್ಷದಿಂದ ವಿದ್ಯಾರ್ಥಿಗಳಿಗೆ ಇನ್ನಷ್ಟು ತೊಂದರೆ ಉಂಟಾಗಿದೆ.
ಅದರಿಂದ ವಿಶ್ವವಿದ್ಯಾಲಯದ ಈ ರೀತಿಯ ನಿರ್ಲಕ್ಷವನ್ನು ಎಐಡಿಎಸ್ಓ ಉಗ್ರವಾಗಿ ಖಂಡಿಸುತ್ತಾ ಇನ್ನು ಮುಂದೆ ಈ ರೀತಿ ಯಾಗದಂತೆ ಕ್ರಮ ಕೈಗೊಳ್ಳಬೇಕೆಂದು AIDSO ಅಗ್ರಹಿಸುತ್ತದೆ.