6a55d615-aab3-46be-a9d4-91189890a433

“ದಿ ಕಿಡ್ಸ್ ಕ್ಲಬ್”ನೂತನ ಶಾಲೆ ಉದ್ಘಾಟನೆ

ಶಿಕ್ಷಣವು  ಹೋರಾಡುವ ಸಾಮರ್ಥ್ಯವನ್ನು ನೀಡುತ್ತದೆ 

ಮೊಹಮ್ಮದ್ ಇಮಾಮ್ ನಿಯಾಜಿ

ಕರುನಾಡ ಬೆಳಗು ಸುದ್ದಿ

ಹೊಸಪೇಟೆ .16 –  ಶಿಕ್ಷಣವು ಜಗತ್ತನ್ನು ಬದಲಾಯಿಸುವ ಪ್ರಮುಖ ಅಸ್ತ್ರವಾಗಿದೆ. ಅದು ವ್ಯಕ್ತಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಅವನನ್ನು ಜ್ಞಾನವುಳ್ಳ ನಾಗರಿಕನನ್ನಾಗಿ ರೂಪಿಸಿ, ವ್ಯಕ್ತಿಯನ್ನು ಸ್ವಾವಲಂಬಿ ಬದುಕು ನಿರ್ಮಿಸಿ ಕೊಳ್ಳುವಲ್ಲಿ ನೆರವಾಗುತ್ತದೆ ಎಂದು ಹೊಸಪೇಟೆ ವಿಜಯನಗರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಹೆಚ್. ಎನ್. ಎಫ್. ಮೊಹಮ್ಮದ್ ಇಮಾಮ್ ನಿಯಾಜಿರವರು ಹೇಳಿದರು.

ಅವರು ಶುಕ್ರವಾರ ನಗರದ ಸಂಕ್ಲಾಪುರ ಗ್ರಾಮದಲ್ಲಿನ “ದಿ ಕಿಡ್ಸ್ ಕ್ಲಬ್”ನೂತನ ಶಾಲೆಯನ್ನು ಉದ್ಘಾಟಿಸಿ ಮತನಾಡಿ ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣ ಪಡೆಯುವ ಹಕ್ಕಿದೆ. ಶಿಕ್ಷಣವು ಪ್ರಕೃತಿಯ ರಹಸ್ಯವನ್ನು ಬಿಚ್ಚಿಡಲು ಸಹಾಯ ಮಾಡುತ್ತದೆ. ಇದು ನಮ್ಮ ಸಮಾಜದ ಕೆಲಸವನ್ನು ಅರ್ಥಮಾಡಿಕೊಳ್ಳಲು ಮತ್ತು ಸುಧಾರಿಸಲು ನಮಗೆ ಅನುವು ಮಾಡಿಕೊಡುತ್ತದೆ.

ಇದು ಉತ್ತಮ ಜೀವನಕ್ಕಾಗಿ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ. ಶಿಕ್ಷಣವು ಸಮಾಜದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊರತರುತ್ತದೆ. ಎಮಸು ಹೇಳುತ್ತಾ , ಸಾಮಾಜಿಕ ಅನಿಷ್ಟತೆಗಳನ್ನು ನಿಗ್ರಹಿಸಲು ವಿದ್ಯೆ ಸಹಾಯ ಮಾಡುತ್ತದೆ ಮತ್ತು ಇಡೀ ಸಮಾಜ ಮತ್ತು ರಾಷ್ಟçÀ್ಟ್ರದ ಅಭಿವೃದ್ಧಿಗೆ ಅದು ಕೊಡುಗೆ ನೀಡುತ್ತದೆ ಎಂದು ಶಿಕ್ಷಣದ ಮಹತ್ವದ ಕುರಿತು ಮಾತನಾಡಿದರು.

ಶಾಲೆ ನಗರದ ಮದ್ಯ ಭಾಗಗಳಲ್ಲಿ ಇರುವುದರಿಂದ ಮಕ್ಕಳಿಗೆ ದೂರ ದೂರ ಓಡಾಡುವ ತೊಂದರೆಗಳು ತಪ್ಪುತ್ತದೆ, ಇದು ಪೋಷಕರಿಗೆ ಮಾನಸಿಕ ಒತ್ತಡ ಕಡಿಮೆ ಯಾಗಲಿದೆ ಎಂದರು.
ಶಿಕ್ಷಣವು ಜ್ಞಾನ, ಕೌಶಲ್ಯ, ತಂತ್ರ, ಮಾಹಿತಿಯನ್ನು ಒದಗಿಸುವ ಮಹತ್ವದ ಸಾಧನವಾಗಿದೆ ಮತ್ತು ಜನರು ತಮ್ಮ ಕುಟುಂಬ, ಸಮಾಜ ಮತ್ತು ರಾಷ್ಟçÀ್ಟ್ರದ ಕಡೆಗೆ ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳನ್ನು ತಿಳಿದುಕೊಳ್ಳಲು ಸಹಾಯ ಮಾಡಿಕೊಡುತ್ತದೆ. ಇದರಿಂದಾಗಿ ನಮ್ಮ ಸುತ್ತಲಿನ ಪ್ರಪಂಚವನ್ನು ನೋಡಲು ನಿಮ್ಮ ದೃಷ್ಟಿ ಮತ್ತು ದೃಷ್ಟಿಕೋನವನ್ನು ನೀವು ವಿಸ್ತರಿಸಬಹುದು.

ಉದ್ಘಾಟನಾ ಸಮಾರಂಭದಲ್ಲಿ ಶಾಲೆಯ ಸಂಸ್ಥಾಪಕರಾದ ಹಾಗೂ ನದೀಮ್ ಬೈ, ಶಕ್ಷಾವಲಿ ,ಫಯಾಜ್ ಅನ್ಸಾರಿ, ವೆಂಕಟೇಶ್, ಹಾಗೂ ಶಾಲೆಯ ಸಿಬ್ಬಂದಿಗಳು ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!