WhatsApp Image 2024-02-28 at 7.10.21 PM

ನಗರಸಭೆಯ 2024-25ರ ರೂ.81ಕೋಟಿಗಳ ಆಯವ್ಯಯ ಮಂಡನೆ

ಕರುನಾಡ ಬೆಳಗು ಸುದ್ದಿ

ವಿಜಯನಗರ,29- ಹೊಸಪೇಟೆ ನಗರಸಭೆಯ 2024-25ರ ಒಟ್ಟಾರೆ ಆಯವ್ಯಯ ಗಾತ್ರ ರೂ.81ಕೋಟಿಗಳಾಗಿದ್ದು, ಸರ್ಕಾದ ಅನುದಾನದ ಮೊತ್ತ ರೂ.43 ಕೋಟಿ 64ಲಕ್ಷಗಳು, ನಗರಸಭೆ ನಿಧಿ ರೂ.29 ಕೋಟಿ 4ಲಕ್ಷಗಳು 24ಸಾವಿರಗಳು ಹಾಗು ಸರ್ಕಾರಕ್ಕೆ ಇತರೆ ಇಲಾಖೆಗಳಿಗೆ ಪಾವತಿಸಬೇಕಾದ ಅಸಾಮನ್ಯ ಆದಾಯ ರೂ9ಕೋಟಿ 7ಲಕ್ಷ 85 ಸಾವಿರಗಳಾಗಿದ್ದು ಉಳಿತಾಯ ಮೊತ್ತ ರೂ.2ಕೋಟಿ 35ಲಕ್ಷ 57 ಸಾವಿರದ ಐದುನೂರು ಆಯವ್ಯಯ ಮಂಡಿಸಿ ಅನುಮೋದನೆ ನೀಡಲು ಕೋರಿ ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್ ಬಜೆಟ್ ಮಂಡಿಸಿದರು.

ಈ ಸಂದರ್ಭದಲ್ಲಿ ಸದಸ್ಯರೊಬ್ಬರು ನಗರದ ಸ್ವಚ್ಛತೆಗಾಗಿ 114 ಜನಪೌರಕಾರ್ಮಿಕರ ಅವಶ್ಯಕತೆ ಇದೆ ಕೂಡಲೆ ಟೆಂಡರ್ ಕರೆದು ಭರ್ತಿ ಮಾಡಲು ಕೋರಿದರು ಇದಕ್ಕೆ ಸಭೆಯು ಸಮ್ಮತಿಸಿತು.

ಮತ್ತೊಬ್ಬ ಸದಸ್ಯ ಖದೀರ್ ಮಾತನಾಡಿ ನಗರದಲ್ಲಿ ಯುವಕರು ಗಾಂಜಾ, ಅಫೀಮು,ಡ್ರಗ್ಸ್, ಮದ್ಯಪಾನಗಳಿಗೆ, ತುತ್ತಾಗಿ ಅತಿ ಕಡಿಮೆ ವಯಸ್ಸಿನಲ್ಲಿ ಸಾವು-ಗಿಡಾಗುತ್ತಿದ್ದಾರೆ ಇದರಿಂದ ಅವರ ಕುಟುಂಬವು ಬೀದಿಗೆ ಬರುತ್ತಿದೆ ಹಾಗಾಗಿ ಇಂತವರ ಮನಃಪರಿವರ್ತನೆಗಾಗಿ ತರಬೇತಿ ನೀಡಲು, ಮತ್ತು ಈ ಕಾರ್ಯಗಳಿಗೆ ಸಂಘ-ಸಂಸ್ಥೆಗಳು ಮುಂದಾದಲ್ಲಿ ಅವರೊಂದಿಗೆ ಜಂಟಿಯಾಗಿ ನಗರಸಭೆಯಿಂದ ಬಿಲ್ಡಿಂಗ್ ಅವಕಾಶ ಮಾಡಿಕೊಟ್ಟು ಅಂತವರಿಗೆ ಸೇವೆ ಒದಗಿಸಿದರೆ ಸಮಾಜಕ್ಕೆ ನಗರಸಭೆಯ ಮೇಲೆ ಪ್ರಸಂಶೆ ವ್ಯರ್ಥವಾಗುತ್ತದೆ ಹಾಳಾಗುತ್ತಿರುವ ಯುವಕರ ಜೀವವನ್ನು ಉಳಿಸಿದಂತಾಗುತ್ತದೆ ಎಂದರು.

ನಗರಸಭೆ ಆದಾಯದ ಮೂಲಗಳ ಬಗ್ಗೆ ಚರ್ಚಿಸಲಾಯಿತು ಸ್ವಂತ ತೆರಿಗೆ. ತೆರಿಗೆ-ಆಸ್ತಿ ತೆರಿಗೆ-ಜಾಹೀರಾತು ತೆರಿಗೆ. ತೆರಿಗೇತರ-ಫೀಜುಗಳು-ನೀರುಸರಬರಾಜು ಶುಲ್ಕ-ಬಳಕೆದಾರ ಶುಲ್ಕಗಳು-ವ್ಯಾಪರ ಪರವಾನಿಗೆ ಶುಲ್ಕಗಳು. ಕೇಂದ್ರ ಹಾಗು ರಾಜ್ಯ ಸರ್ಕಾರದ ಅನುದಾನಗಳು ಹೊರಗಿನ ಆರ್ಥಿಕ ಸಹಾಯ – ಕೆ. ಯು. ಐ. ಡಿ. ಎಫ್. ಸಿ. ಇಂಗಾಲ ನೀಡಿಕೆ:ಘನತ್ಯಾಜ್ಯ ನಿರ್ವಹಣೆ/ಸ್ವಶಕ್ತಿ ಸಾಮರ್ಥ್ಯ. ಸಾರ್ವಜನಿಕ-ಖಾಸಗಿ-ಸಹಭಾಗಿತ್ವ ಇವುಗಳನ್ನು ಸಮರ್ಪಕವಾಗಿ ನಿರ್ವಹಿಸಿದಲ್ಲಿ ನಗರ ಸಭೆಗೆ ಆದಾಯವು ಬರುತ್ತದೆ ಎಂದು ತೀರ್ಮಾನಿಸಿದರು.

ಪತ್ರಕರ್ತರಿಗೆ ಲ್ಯಾಪ್ ಟಾಪ್ ಖರೀದಿಸಿ ವಿತರಿಸುವುದು (ವಿಶೇಷ ಪ್ರಕರಣ:ಮಾನ್ಯ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಷರತ್ತಿಗೊಳಪಟ್ಟು) ಅಂದಾಜು ಮೊತ್ತ ರೂ:15ಲಕ್ಷಗಳ ವೆಚ್ಚ ಅಂದಾಜಿಸಲಾಗಿರುತ್ತದೆ. 6500 ವಸತಿ ರಹಿತರಿಗಾಗಿ ಮತ್ತು ನಿವೇಶನ ರಹಿತರಿಗಾಗಿ ಕೆ.ಎಮ್.ಇ.ಆರ್.ಎಲ್ ಯೋಜನೆ ಅಡಿಯಲ್ಲಿ 150ಕೋಟಿ ಪ್ರಸ್ತಾವನೆ ಸಲ್ಲಿಕೆಗಾಗಿ ಅಗತ್ಯ ಕ್ರಮ ವಹಿಸಲಾಗುವುದು.

ಗ್ರಂಥಾಲಯ/ಸಮುದಾಯ ಭವನ/ಕಛೇರಿ ಕಟ್ಟಡ: ದುರಸ್ತಿ/ನಿರ್ಮಾಣಕ್ಕಾಗಿ ರೂ.60ಲಕ್ಷಗಳು,ಮುಖ್ಯ ರಸ್ತೆಗಳಲ್ಲಿ ಜಾಹೀರಾತು ಫಲಕಗಳು ನಿರ್ಮಾಣಕ್ಕಾಗಿ 20ಲಕ್ಷಗಳು, ರಸ್ತೆಗಳು/ರಸ್ತೆ ಪಕ್ಕದ ಚರಂಡಿಗಳು ದುರಸ್ಥಿ ರೂ:70ಲಕ್ಷಗಳು, ಬೀದಿ ದೀಪಗಳು ಹೊರಗುತ್ತಿಗೆ ನಿರ್ವಹಣೆಗಾಗಿ ರೂ:98ಲಕ್ಷಗಳು, ಮಳೆ ನೀರು ಚರಂಡಿ ದುರಸ್ತಿ/ನಿರ್ಮಾಣಕ್ಕಾಗಿ ರೂ:35ಲಕ್ಷಗಳು, ಶೌಚಾಲಯಗಳು ಹೊರಗುತ್ತಿಗೆ ನಿರ್ವಹಣೆಗಾಗಿ ರೂ:60ಲಕ್ಷಗಳು, ಘನತ್ಯಾಜ್ಯ ನಿರ್ವಹಣೆ ಅಂದಾಜು ರೂ:7ಕೋಟಿ 17ಲಕ್ಷಗಳು, ನೀರು ಸರಬರಾಜು ಮತ್ತು ಒಳಚರಂಡಿ ದುರಸ್ಥಿ/ನಿರ್ವಹಣೆಗಾಗಿ ಅಂದಾಜು 3 ಕೋಟಿ 77ಲಕ್ಷಗಳನ್ನು ವಾರ್ಷಿಕ ವೆಚ್ಚಕ್ಕಾಗಿ ಅಂದಾಜಿಸಲಾಗಿದೆ.

ನಗರಸಭೆ ನಿಧಿಯಲ್ಲಿ 24.10ಪ.ಜಾ/ಪ.ಪಂ ಅಭಿವೃದ್ಧಿಗಾಗಿ ರೂ:41.00ಲಕ್ಷಗಳು, ಶೇ7.25: ಇತರೆ ಹಿಂದುಳಿದ ವರ್ಗಗಳು ಹಾಗು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ರೂ:12.50ಲಕ್ಷಗಳು ಮತ್ತು ಶೇ5:ವಿಕಲಾಂಗರ ಅಭಿವೃದ್ಧಿಗಾಗಿ ರೂ.8.50ಲಕ್ಷಗಳನ್ನು ನಗರಸಭೆ ನಿಧಿಯಲ್ಲಿ ಕಲ್ಯಾಣ ಕಾರ್ಯಕ್ರಮಗಳಿಗೆ ವೆಚ್ಚ ಅಂದಾಜಿಸಲಾಗಿರುತ್ತದೆ.
ಎಲ್ಲಾ 104 ಖಾಯಂ ಪೌ.ಕಾ.ಜಂಬುನಾಥ ಹಳ್ಳಿ 3 ಎಕರೆ ಪ್ರದೇಶದಲ್ಲಿ ಪೌರ ಕಾರ್ಮಿಕ ಗೃಹಗಳ ನಿರ್ಮಾಣಕ್ಕಾಗೆ ಕ್ರಮ ಕೈಗೊಳ್ಳಲಾಗುವುದು. ಎಂದು ಸುಮಾರು 30 ಯೋಜನೆಗಳಿಗೆ ಅನುಮೋದನೆ ಸೂಚಿಸಿದರು.

ಅಧ್ಯಕ್ಷಿಣಿ ಲತಾ, ಪೌರಾಯುಕ್ತ ಎರ್ರಗುಡಿ ಶಿವಕುಮಾರ್ ಇದ್ದರು.

Leave a Reply

Your email address will not be published. Required fields are marked *

error: Content is protected !!