8gvt2

                                       ಗಂಗಾವತಿ: ಶ್ರೀಜಯತೀರ್ಥರ ಅಷ್ಟೋತ್ತರ ಸಂಪನ್ನ
ಕರುನಾಡ ಬೆಳಗು ಸುದ್ದಿ
ಗಂಗಾವತಿ,ನ೦೮-ತಾಲೂಕಿನ ಆನೆಗೊಂದಿಯ ನವವೃಂದಾವನಗಡ್ಡೆಯಲ್ಲಿ
ಶ್ರೀರಾಘವೇಂದ್ರಸ್ವಾಮಿ ಮಠ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀರಾಯರ ಸಕಲಭಕ್ತರು ನವವೃಂದಾವನದಲ್ಲಿ ಭಾನುವಾರ ಶ್ರೀಜಯತೀರ್ಥರ ಅಷ್ಟೋತ್ತರ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು.

ಸುಪ್ರಭಾತ,ಸಕಲ ಬೃಂದಾವನಗಳಿಗೆ ನಿರ್ಮಾಲ್ಯ ಅಭಿಷೇಕ, ವಿಶೇಷ ಪಂಚಾಮೃತಾಭಿಷೇಕ, ಅಷ್ಟೋತ್ತರ, ಭಜನೆ, ಹೂವಿನ ಅಲಂಕಾರ, ವಸ್ತ್ರ ಅಲಂಕಾರ, ಸಕಲಯತಿಗಳ ಬೃಂದಾವನಕ್ಕೆ ಹಸ್ತೋದಕ, ಮಹಾಮಂಗಳಾರತಿ ಇತ್ಯಾದಿ ಕಾರ್ಯಕ್ರಮಗಳು ಜರುಗಿದವು.

ಪಂಡಿತರಾದ ಶ್ರೀನಿಧಿ ಆಚರ್ಯ ಬೆಂಗಳೂರು ಮಾತನಾಡಿ ಪ್ರತಿ ತಿಂಗಳು ನಡೆಯುವ ಶ್ರೀಜಯತೀರ್ಥರ ಅಷ್ಟೋತ್ತರ ಕಾರ್ಯಕ್ರಮಕ್ಕೆ ಸಕಲರೂ ಭಾಗವಹಿಸಬೇಕೆಂದರು.
ಗಂಗಾವತಿ ರಾಯರ ಮಠದ ವ್ಯವಸ್ಥಾಪಕ ಸಮವೇದ ಗುರುರಾಜ ಆಚಾರ್,ವಿಜಯ ದೇಸಾಯಿ ಗೋತಗಿ, ಹೊಸಪೇಟೆ ಹಳೆ ರಾಯರ ಮಠದ ಪವನ ಆಚಾರ್ಯ, ಮಂತ್ರಾಲಯ ದಾಸ ಸಾಹಿತ್ಯ ಪ್ರೊಜೆಕ್ಟ್ ಪದ್ಮನಾಭ,ಆನೆಗುಂದಿ ರಾಯರು ಮಠದ ವ್ಯವಸ್ಥಾಪಕ ಸುಮಂತ ಕುಲಕರ್ಣಿ ಇಡಪನೂರ, ಅರ್ಚಕರಾದ ನರಸಿಂಹ ಆಚಾರ್,ಶ್ರೀಮಠದ ಶಿಷ್ಯರು,ತಮಿಳುನಾಡಿನ ಭಕ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!