WhatsApp Image 2024-02-22 at 4.56.09 PM

ವಿಜ್ಞಾನ ವಸ್ತು ಪ್ರದರ್ಶನ ಮಾದರಿ ಶಾಲೆ : ಸಿಕೆ ಸರ್ ಅಭಿಮತ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 22- ಇಂದಿನ ಸ್ಪಧಾ೯ತ್ಮಕ ಯುಗದಲ್ಲಿ ವಿಜ್ಞಾನ ಮತ್ತು ಇತರ ವಿದ್ಯಾಭ್ಯಾಸದ ಕಡೇ ಮಕ್ಕಳು ಹೆಚ್ಚು ಕಠಿಣ ಪರಿಶ್ರಮ ವಹಿಸುವುದರಿಂದ ಮುಂದೆ ಬರಲು ಸಾಧ್ಯೆ ಹಿರೇವಂಕಲಕುಂಟಾ ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸಿ. ಕೆ ಸರ್ (ಚಂದ್ರಕಾಂತಯ್ಯ ಕಲ್ಯಾಣ ಮಠ ) ಹೇಳಿದರು .

ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಾಳಕೇರಿ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ವನ್ನು ಏರ್ಪಡಿಸಲಾಯಿತು ಉದ್ಘಾಟಕರಾಗಿ ನಿವೃತ್ತ ಉಪ ಪ್ರಾಚಾರ್ಯರಾದ ಚಂದ್ರಕಾಂತಯ್ಯ ಕಲ್ಯಾಣಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪ್ರಾಥಮಿಕ ಹಂತದಲ್ಲಿ ಮಕ್ಕಳು ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಇಟ್ಟುಕೊಂಡು ವಸ್ತುಗಳ,ಮಾದರಿಗಳನ್ನು ತಾವೆ ತಯಾರಿಸಿ ನಿರರ್ಗಳವಾಗಿ ವಿವರಣೆಯನ್ನು ನೀಡಿದ್ದು ನೋಡಿದರೆ ತುಂಬಾ ಶ್ಲಾಘನೀಯ ಮತ್ತು ಮಕ್ಕಳು ಮುಂದಿನ ದಿನಮಾನಗಳಲ್ಲಿ ವಿಜ್ಞಾನಿಗಳಾಗಲಿ ಮತ್ತು ಇನ್ನಿತರ ಸಾಧಕರಾಗಲಿ ಇವರು ಇನ್ನೂ ಹೆಚ್ಚಿನ ರೀತಿಯಲ್ಲಿ ಶ್ರಮ ವಹಿಸಿ ರಾಜ್ಯದಲ್ಲಿ ಮುಂದೆ ಬರಬೇಕು ಇಂದಿನ ಮಕ್ಕಳು ನಾಳಿನ ದೇಶದ ಪ್ರಜೆಗಳು ಎಂದು ಹಾರೈಸಿದರು.

ತಾಳಕೇರಿ ಗ್ರಾಮದಲ್ಲಿ ಎಸ್ ಡಿ ಎಂ ಸಿ ಯವರು ಮತ್ತು ಶಿಕ್ಷಣಪ್ರೇಮಿಗಳು, ಮುಖಂಡರುಗಳು ಸೇರಿ ಶಾಲೆಗೆ ಬಣ್ಣ ಇಲ್ಲದಿರುವುದು ಹಾಗೂ ಶಾಲೆಗೆ ದಾನವಾಗಿ ಊಟದ ತಟ್ಟೆಗಳನ್ನು, ಗ್ಲಾಸ್ ಗಳನ್ನು, ಗ್ರೈಂಡರ, ಇನ್ನಿತರ ಅಭಿಮಾನ ನೋಡಿದರು ಈ ಗ್ರಾಮ ಮತ್ತು ಶಾಲೆ ತಾಲೂಕಿಗೆ ಮಾದರಿಯಾಗಿದೆ ಎಂದರು.

ಎನ್‌ ಪಿ ಎಸ್ ನೌಕರರ ಸಂಘದ ತಾಲೂಕಾ ಅಧ್ಯಕ್ಷರಾದ ಎಸ್ ಎನ್ ಶ್ಯಾಗೋಟಿ, ಜಿಪಿಟಿ ಸಂಘದ ಯಮನೂರಪ್ಪ ಗಧಾರಿ ಮತ್ತು ತಾಳಕೇರಿ ಕ್ಲಸ್ಟರ್‌ ಸಿ ಆರ್ ಪಿ ದೊಡ್ಡನಗೌಡ ಪಾಟೀಲ್‌ ಮಾತನಾಡಿದರು ದೈಹಿಕ ಶಿಕ್ಷಕರಾದ ಭೀಮಪ್ಪ ಚಂದ್ರಗಿರಿ ಇದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರಿ ಮುಖ್ಯೋಪಾಧ್ಯಾಯರಾದ ಶ್ರೀಮತಿ ವಿಶಾಲಾಕ್ಷಿ ಚಂದ್ರಗಿರಿ ವಹಿಸಿದ್ದರು.

ಇದೆ ಸಂದರ್ಭದಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ ತಾಳಕೇರಿ, ಸ ಹಿ ಪ್ರಾ ಶಾಲೆ ಕಲಭಾವಿ ಮತ್ತು ಪರಮಹಂಸ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ಮತ್ತು ಆಯಾ ಶಾಲೆಗಳ ಶಿಕ್ಷಕರುಗಳು ಹಾಜರಿದ್ದರು.

ಎಸ್ ಡಿ ಎಂ ಸಿ ಅಧ್ಯಕ್ಷ ಪ್ರಸನ್ನ ಶೆಟ್ಟರ್, ಉಪಾಧ್ಯಕ್ಷಮಾರುತಿ ನೀರಲೂಟಿ, ಸದಸ್ಯರುಗಳಾದ ನಾಗರಾಜ ತೆಲಗರ, ಶಿವಶರಣಪ್ದ ಬ್ಯಾಳಿ, ಕೊಟ್ರೇಶ ತೆಲಗರ, ಭಾಷಾಸಾಬ ಮುಲ್ಲಾರ, ಶರಣಪ್ಪ ಬ್ಯಾಳಿ ,ಶಿಕ್ಷರುಗಳಾದ ದೇವೇಂದ್ರಪ್ಪ ಜಿರ್ಲಿ, ರಾಮಪ್ಪ ಬನ್ನಿಕೊಪ್ಪ, ಶರಣಪ್ಪ ಏಳುಗುಡ್ಡದ, ಶೇಖರಪ್ಪ ಮುಕ್ಕಣ್ಣವರ, ರೇಖಾ ಎಸ್ ಎಚ್, ಹನಮೇಶ ಹಿರೇಮನಿ, ಗೌರಮ್ಮ ಮಂತ್ರಿ, ಸುಮಾಂಜಲಿ ಸುರಳ, ಮಂಜುಳಾ ಹರಕಂಗಿ, ದೇವಪ್ಪ ವನಜಭಾವಿ, ನಿರುಪಾದಿ ಪೂಜಾರಿ ಮತ್ತು ಆಂಜನೇಯ ಈಳಿಗೇರ, ಧರ್ಮಣ್ಣ ಬಿಂಗಿ, ಪ್ರಭು ನಿಡಶೇಸಿ, ಬಸವರಾಜ ಮತ್ತು ರಮೇಶ ಬೂದಿಹಾಳ, ಮರ್ದಾನಸಬ ನಧಾಪ ಹಾಗೂ ವಿದ್ಯಾರ್ಥಿಗಳು ಗ್ರಾಮದ ಶಿಕ್ಷಣಪ್ರೇಮಿಗಳು, ಮತ್ತು ಇತರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!