
ವಿದ್ಯಾರ್ಥಿಗಳಲ್ಲಿ ಸಂಗೀತದ ಅಭಿರುಚಿ ಬೆಳೆಸಬೇಕು
ಗೌರಮ್ಮ ಕುಂಬಾರ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೦೯- ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯು ಒಂದು ಸುಪ್ತ ಮನಸ್ಸು ಅಡಗಿರುತ್ತದೆ. ಅದು ಹೊರಗಡೆ ಬಂದಾಗ ವಿದ್ಯಾರ್ಥಿಯ ಪ್ರತಿಭೆ ಮುಖ್ಯವಾಹಿನಿಗೆ ಬರಲು ಸಾಧ್ಯ ಇದರಲ್ಲು ವಿದ್ಯಾರ್ಥಿಗಳು ಸಂಗೀತದ ಕಡೆ ಒಲವು ತೋರಿದಲ್ಲಿ ಮುಂದೆ ಅವರಿಗೆ ಒಂದು ಒಳ್ಳೆಯ ಅಡಿಪಾಯ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ವಿದ್ಯಾರ್ಥಿಗಳಲ್ಲಿ ಸಂಗೀತದ ಅಭಿರುಚಿಗೆ ಪ್ರತಿಯೊಬ್ಬರು ಶ್ರಮಿಸಬೇಕಿದೆ ಎಂದು ಹಿರಿಯ ಶಿಕ್ಷಕರಾದ ಶ್ರೀಮತಿ ಗೌರಮ್ಮ ಕುಂಬಾರ ಅಭಿಪ್ರಾಯಪಟ್ಟರು.
ಅವರು ಇಂದು ನಗರದ ಗದಗ ರಸ್ತೆಯಲ್ಲಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಶ್ರೀ ಗುರು ಪುಟ್ಟರಾಜ ಸಾಂಸ್ಕೃತಿಕ ಕಲಾ ಸಂಸ್ಥೆ (ರಿ) ರ‍್ಯಾವಣಕಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸುಗಮ ಸಂಗೀತ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ಹುಟ್ಟು ಕುರುಡರಾದ ಪಂಚಾಕ್ಷರಿ ಗವಾಯಿಗಳು ಸಂಗೀತದಿAದಲೇ ವಿಶ್ವ ವಿಖ್ಯಾತಿಯನ್ನು ಪಡೆದು ಗಾನಯೋಗಿ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದರು. ಇದೇ ಹಾದಿಯಲ್ಲಿ ಅವರ ಶಿಷ್ಯರಾದ ಪಂಡಿತ ಪುಟ್ಟರಾಜ ಗವಾಯಿಗಳು ಹುಟ್ಟು ಕುರುಡರಾದರೂ ಸಂಗೀತದಿAದಲೇ ವಿಶ್ವ ಮನ್ನಣೆ ಪಡೆದು, ಗ್ರಂಥವನ್ನು ರಚಿಸುವಂತಹ ಮಹಾನ್ ಚೇತನರಾಗಿ, ಸಂಗೀತದಲ್ಲಿ ಚೀಜ್‌ನ್ನು ರಚಿಸಿದ್ದರು. ಇದು ಸಂಗೀತಕ್ಕೆ ಇರುವ ಮಹನ್ ಶಕ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಇಂದಿಗೂ ಹಲವಾರು ಅನಾಥ ಮತ್ತು ಅಂಧ ಮಕ್ಕಳಿಗೆ ಸಂಗೀತಾಭ್ಯಾಸ ಕಲಿಸಿಕೊಡುವ ಗದಗನ ವೀರೇಶ್ವರ ಪುಣ್ಯಾಶ್ರಮ ಸೇವೆ ಅವಿಸ್ಮರಣೀಯ ಎಂದು ಶಿಕ್ಷಕಿ ಶ್ರೀಮತಿ ಗೌರಮ್ಮ ಕುಂಬಾರ ಹೇಳಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ವಸತಿ ಶಾಲೆಯ ಪ್ರಾಚಾರ್ಯರಾದ ಮಂಜುನಾಥ ಬೇಳೂರು ನೆರವೇರಿಸಿದರು. ವೇದಿಕೆ ಮೇಲೆ ಸಂಗೀತಗಾರರಾದ ಮಹಾಂತಯ್ಯ ಕೂಟನೂರು, ಸಂಗೀತ ಶಿಕ್ಷಕರಾದ ಯಮನೂರಪ್ಪ ಭಜಂತ್ರಿ ಸೇರಿದಂತೆ ವಸತಿ ಶಾಲೆಯ ಶಿಕ್ಷಕರಾದ ಶ್ರೀಮತಿ ಭಾಗ್ಯಶ್ರೀ, ಶ್ರೀಮತಿ ಮಂಜುಳಾ, ಪುಂಡಲೀಕಪ್ಪ ಮಹೇಶಪ್ಪ, ಶರಣಪ್ಪ, ಸಂತೋಷ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು. ಸಂಗೀತ ಕಲಾವಿದರಾದ ಡಾ.ಚನ್ನಯ್ಯ ವಿ.ಮಠದ ಇವರಿಂದ ವಚನ ಸಂಗೀv ಮತ್ತು ಭಕ್ತಿ ಸಂಗೀತ ಕಾರ್ಯಕ್ರಮ ಜರುಗಿತು. ಇದಕ್ಕೆ ಮಹಾಂತಯ್ಯ ಕೂಟನುರ ಹಾರ್ಮೊನಿಯಂ, ಕಳಕಯ್ಯ ಬಲ್ವಂಚಿಮಠ ತಬಲಾ ಹಾಗೂ ಪುಟ್ಟರಾಜ ಹಿರೇಮಠ ತಾಳಾ ಸಾಥ್ ನೀಡಿದರು.