
ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ : ಷ.ಬ್ರ.ಬಸವಲಿಂಗೇಶ್ವರ ಶ್ರೀಗಳು
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ,29- ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೂಡಿಸುವದರ ಜೊತೆಗೆ ನಡೆ ನುಡಿ ಒಳ್ಳೆಯ ಸಂಸ್ಕಾರ ಕಲಿಸಬೇಕು ಮಕ್ಕಳಿಗೆ ಆಸ್ತಿ ಮಾಡುವದಕ್ಕಿಂತ ಮಕ್ಕಳನೇ ಆಸ್ತಿ ಯನ್ನಾಗಿ ಮಾಡಿ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ ಎಂದು ಯಲಬುರ್ಗಾ ಶ್ರೀ ಧರಮುರುಡಿ ಹಿರೇಮಠದ ಷ. ಬ್ರ.ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಗೇದ್ದಗೇರಿ ಗ್ರಾಮದ ವಿದ್ಯಾ ಭಾರತಿ ಶಿಕ್ಷಣ ಸಂಸ್ಥೆ ಮತ್ತು ಎಕ್ಸ ಪೂಟ೯ ಆಂಗ್ಲ ಮಾಧ್ಯಮ ಕೂಂಚಿಗ್ ಕ್ಲಾಸ್ ನಲ್ಲಿ ನೆಡದ ಬೇಸಿಗೆ ಶಿಬಿರ ಮುಕ್ತಾಯ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಇಂದಿನ ಆಧುನಿಕ ಕಂಪ್ಯೂಟರ್ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಎಷ್ಟು ವಿದ್ಯಾಬ್ಯಾಸ ಮಾಡಿದರು ಕಡಿಮೆ ಸ್ಪಧಾ೯ತ್ಮಕ ಯುಗದಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಅತ್ಯಾವಶ್ಯಕವಾಗಿದೆ.
ಪ್ರತಿಯೊಂದು ವಿದ್ಯಾರ್ಥಿಗಳು ವಿದ್ಯಾಬ್ಯಾಸದ ಕಡೇ ಹೆಚ್ಚು ಗಮನಹರಿಸಬೇಕು ನಿಮ್ಮ ಊರಿನ ಮತ್ತು ತಂದೆ ತಾಯಿಗಳು ಗೌರವ ತರುವಂತೆ ಕೆಲಸ ಮಾಡಬೇಕು ಎಂದು ಹೇಳಿದರು ನಂತರ
ಗುಲಬರ್ಗಾ ಜಿಲ್ಲೆಯ ಸೇಡಂ ತಾಲೂಕಿನ ತಾಲೂಕ ಪಂಚಾಯಿತಿ ಇಓ ಹಂಪಣ್ಣ ನಾಯಕ ಮಾತನಾಡಿ ಇಂದಿನ ಮಕ್ಕಳು ನಾಳಿನ ದೇಶದ ಪ್ರಜೆಗಳು ಪ್ರತಿಯೊಂದು ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಕಠಿಣ ಪರಿಶ್ರಮ ದಿಂದ ವಿದ್ಯಾಬ್ಯಾಸದ ಮಾಡಿದರೆ ತಮ್ಮ ಗುರಿ ಸಾಧನೆ ಮಾಡಲು ಯಶಸ್ಸು ಸಿಗುತ್ತದೆ ನಿಮ್ಮ ಬಗ್ಗೆ ಪಾಲಕರ ಕನಸು ಇಟ್ಟು ಕೂಂಡಿರುತ್ತಾರೆ ಆ ಕನಸು ನನಸು ಮಾಡುವದು ಮಕ್ಕಳ ಜವಾಬ್ದಾರಿಯಾಗಿದೆ.
ನೀವು ವಿದ್ಯ ಕಲಿತ ಶಾಲೆಯ. ಶಿಕ್ಷಕರ. ಊರಿನ ಗೌರವ ತರುವಂತ ಒಳ್ಳೆಯ ಪ್ರಜೆಗಳಾಗಬೇಕು ವಿದ್ಯಾರ್ಥಿಗಳು ಶ್ರದ್ಧೆ ಪ್ರಾಮಾಣಿಕತೆಯಿಂದ ಅಭ್ಯಾಸ ಮಾಡಬೇಕು ಈಗಿನಿಂದಲೇ ಗುರಿ ಇಟ್ಟು ನಿರ್ಧರಿಸಿಕೊಂಡು ಗಮನಹರಿಸಿ ತಯಾರಿ ಮಾಡಿಕೊಂಡರೆ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಗೆದಿಗೇರಿ ಗ್ರಾಮದಲ್ಲಿವಿದ್ಯಾ ಭಾರತಿ ಶಿಕ್ಷಣ ಸಂಸ್ಥೆ ಹಾಗೂ ಎಕ್ಸ್ ಪೋರ್ಟ್ ಆಂಗ್ಲ ಮಾಧ್ಯಮ ಶಾಲೆಯ 2024 25 ಸಾಲಿನ ಬೇಸಿಗೆ ತರಬೇತಿ ಶಿಬಿರ ಸಮಾರೋಪ ಸಮಾರಂಭ ಹಾಗೂ ವಿವಿಧ ವಸತಿ ಶಾಲೆಗೆ ಆಯ್ಕೆಯಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟನೆ ನೆರವೇರಿಸಿ ಮಾತನಾಡಿ, ಗಂಡು ಮಕ್ಕಳು ದುಶ್ಚಟಕ್ಕೆ ಬಲಿಯಾಗುತ್ತಾರೆ ಪಾಲಕರು ತಮ್ಮ ಮಕ್ಕಳನ್ನು ದುಶ್ಚಟಕ್ಕೆ ಬಲಿ ಆಗದಂತೆ ಪಾಲಕರು ತಮ್ಮ ಮಕ್ಕಳನ್ನು ಶಿಕ್ಷಣ ಜೊತೆಗೆ ಉಜ್ಜವಲ ಭವಿಷ್ಯ ಕೊಡಿಸಿಬೇಕು ಎಂದು ತಾ.ಪಂ ಇಓ ಹಂಪಣ್ಣ ನಾಯಕ ಹೇಳಿದರು.
ವಿದ್ಯಾ ಭಾರತಿ ಸಂಸ್ಥೆಯ ಕಾರ್ಯದರ್ಶಿ ಗಣೇಶ್ ರಾತೋಡ್ ಮಾತನಾಡಿ ನಮ್ಮ ಶಾಲೆಯಲ್ಲಿ ಕಲಿತ ಮಕ್ಕಳು ಬೇಸಿಗೆ ತರಬೇತಿ ಪಡೆದು ಸಾಕಷ್ಟು ಮಕ್ಕಳು ನವೋದಯ ಸೈನಿಕ ಶಾಲೆ ರಾಣಿ ಚೆನ್ನಮ್ಮ ವಸತಿ ಶಾಲೆ ಮುರಾರ್ಜಿ ಶಾಲೆ ಇನ್ನು ಅನೇಕ ವಸತಿ ಶಾಲೆಗಳಿಗೆ ಆಯ್ಕೆ ಆಗಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಹನುಮಂತ ಅಜ್ಜ ಅಜ್ಜನವರು ಮರದ ದಿವ್ಯ ಸಾನಿಧ್ಯ ವಹಿಸಿದ್ದರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಶರಣಪ್ಪ ಕೊಪ್ಪದ್ ಸಂಸ್ಥೆಯ ಅಧ್ಯಕ್ಷರಾದ ಶಶಿಕಲಾ ಹೆಚ್ ಚವ್ಹಾಣ ಸಂಸ್ಥೆಯ ಉಪಾಧ್ಯಕ್ಷರಾದ ಲಲಿತಾ ರಾಥೋಡ್ ನಾಗರಾಜ್ ನಾಯಕ್ ಅಶೋಕ್ ಕೋಳಿಹಾಳ ಸೀನಪ್ಪ ಚವ್ಹಾಣ ಡಾಕ್ಟರ್ ಸಂಗಪ್ಪ ವಜ್ಜಲ್ ಡಾಕ್ಟರ್ ರಾಜೇಶ್ ಚವ್ಹಾಣ.ಮಂಜುನಾಥ ಮಾಸ್ತಿ ಬಸಪ್ಪ ಬೆದವೆಟ್ಟಿ ಎಸ್ ಕೆ ಪೂಜಾರ್ ಅಚ್ಚಪ್ಪ ನಾಯಕ್ ಕಮಲಾಬಾಯಿ ರಾಥೋಡ್ ಗ್ರಾಮದ ಮುಖಂಡರು ಪಾಲಕರು ಸಮಾಜದ ಹಿರಿಯರ ಇತರರು ಭಾಗವಹಿಸಿದ್ದರು.