
ವಿಧಾನ ಪರಿಷತ್ ಚುನಾವಣೆಯಲ್ಲಿ ಸಿಪಿಎಂ ಬೆಂಬಲ ಸ್ವತಂತ್ರ ಅಭ್ಯರ್ಥಿ ನಾರಾ ಪ್ರತಾಪ್ ರೆಡ್ಡಿ ಸ್ಪಷ್ಟನೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,31- ಮುಂಬರುವ ಈಶಾನ್ಯ ಪದವೀಧರರ ಮತಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನನಗೆ ಆಮ್ ಆದ್ಮಿ ಪಕ್ಷದ ಜೊತೆಗೆ, ಸಿಪಿಎಂ ಪಕ್ಷವು ಬೆಂಬಲ ನೀಡಲಿದೆ ಎಂದು, ಮಾಜಿ ಬುಡ ಅಧ್ಯಕ್ಷ, ನಾರಾ ಪ್ರತಾಪ್ ರೆಡ್ಡಿ ಸ್ಪಷ್ಟನೆ ನೀಡಿದರು.
ಇಂದು ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಾ, ಈಗಾಗಲೇ ತಮಗೆ ತಿಳಿದಂತೆ ಸ್ವತಂತ್ರ ಅಭ್ಯರ್ಥಿಯಾಗಿ ಎಮ್ ಎಲ್ ಸಿ ಚುನಾವಣೆ ಕಣದಲ್ಲಿ ನಾನಿದ್ದೇನೆ ಎಂದು, ನನಗೆ ಈಗಾಗಲೇ ಆಮ್ ಆದ್ಮಿ ಪಕ್ಷ ಬೆಂಬಲ ನೀಡಿದೆ, ಹಾಗೆ ಸಿಪಿಎಂ ಪಕ್ಷವೂ ಕೂಡ, ಬೆಂಬಲಿಸಲಿದೆ, ಎಂದು ಹೇಳಿದರು. 2018 ರಲ್ಲಿ ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಸ್ಪರ್ಧಿಸಿದ್ದೆ ಸ್ವಲ್ಪ ಅಂತರದಲ್ಲಿ ಸೋಲನ್ನು ಕಂಡಿದ್ದೆ ಎಂದರು.
ತಾನು ಪ್ರವಾಸ ಕೈಗೊಂಡ ಪ್ರತಿ ಜಿಲ್ಲೆಯಲ್ಲಿ ಚುನಾವಣೆಯಲ್ಲಿ ತನಗೆ ಮತ ನೀಡುವದಾಗಿ ಮತದಾರರು ತಿಳಿಸಿದ್ದಾರೆ ಎಂದರು.
ಮೊದಲಿನಿಂದಲೂ ತಾನು ಸಮಾಜಸೇವೆ, ಜೊತೆಗೆ, ಹಲವಾರು ಹೋರಾಟಗಳಲ್ಲಿ ಭಾಗವಹಿಸಿರುವದಾಗಿ ವಿವರಿಸಿದರು.
ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ಹೈದರಾಬಾದ್ ಕರ್ನಾಟಕ ಏರಿಯಕ್ಕೆ ತೀವ್ರ ಅನ್ಯಾಯವಾಗುತ್ತಿದೆ ಎಂದರು.
ಎಸ್ಎಸ್ಎಲ್ ಸಿ ಪರೀಕ್ಷೆಗಳಲ್ಲಿ, ವೆಬ್ ಕ್ಯಾಮ್ ಬಳಕೆ : ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆಯುತ್ತಿದ್ದು, ಅದರಲ್ಲಿ ಪ್ರಧಾನವಾಗಿ ಕಲ್ಯಾಣ ಕರ್ನಾಟಕ ಭಾಗದ7, ಜಿಲ್ಲೆಗಳಲ್ಲಿ ಮಾತ್ರ ವಿಶೇಷವಾಗಿ ಈ ಬಾರಿ ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕ್ಯಾಮೆರಾ ವ್ಯವಸ್ಥೆ ಮಾಡಿರುವುದರಿಂದ, ಪರೀಕ್ಷೆ ಬರಿಯುವ, ವಿದ್ಯಾರ್ಥಿಗಳಿಗೂ ಮತ್ತು ವಿಧಿ ನಿರ್ವಹಣೆಗೆ ಹಾಜರಾದ ಶಿಕ್ಷಕರಿಗೂ ಇದು ತೀವ್ರ ಆತಂಕ ಮತ್ತು ಒತ್ತಡಕ್ಕೆ ಗುರಿ ಮಾಡುತ್ತದೆ ಎಂದರು.
ರಾಜ್ಯದ್ಯಂತ ಪರೀಕ್ಷೆ ಕೇಂದ್ರಗಳಲ್ಲಿ ಸಿಸಿ ಕ್ಯಾಮರಗಳನ್ನು ಮಾತ್ರ ಹಾಕಿ ಇಲ್ಲಿ ಯಾಕೆ ವೆಬ್ ಕ್ಯಾಮೆರಾ ಹಾಕಿದ್ದಾರೆ ಎಂದು ಸಂಬಂಧಿತ ಶಾಖೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ತಮಗೆ ಮೌಖಿಕವಾಗಿ ಆದೇಶ ಇದ್ದಂತೆ ತಿಳಿಸಿದ್ದಾರೆ. ಈ ರೀತಿ ತಾರತಮ್ಯ ಯಾಕಿದೆ ಎಂದು ಕಿಡಿಕಾರಿದರು.
ನಂತರ ಸಿಪಿಎಂ ಪಕ್ಷದ ಮುಖಂಡ ಎಸ್ ವೈ ಗುರು ಶಾಂತ ಪತ್ರಿಕಾಗೋಷ್ಠಿಯನ್ನು ಮುಂದುವರಿಸುತ್ತಾ ಸ್ಥಳೀಯರಿಗೆ ಉದ್ಯೋಗ, ವಿದ್ಯೆ, ಆರೋಗ್ಯ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಸಾಮರ್ಥ್ಯ ಪ್ರತಾಪ್ ರೆಡ್ಡಿ ಅವರು ಹೊಂದಿರುವ ಕಾರಣ, ಸಿಪಿಎಂ ಪಕ್ಷ ಈ ಬಾರಿ ಇವರಿಗೆ ಬೆಂಬಲ ನೀಡಲು ನಿರ್ಧರಿಸಿದೆ, ಜಂಟಿಯಾಗಿ ಪ್ರವಾಸ ಕೈಗೊಂಡು ಮತಯಾಚನೆಗಾಗಿ ಎಲ್ಲಾ ಭಾಗದಲ್ಲಿ ಪ್ರಚಾರ ಮಾಡಲಾಗುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಪಿಎಂ ಪಕ್ಷದ ಮುಖಂಡ ಜೆ ಸತ್ಯ ಬಾಬು ಮತ್ತು ಜನವಾದಿ ಮಹಿಳಾ ಸಂಘದ ಜಿಲ್ಲಾಧ್ಯಕ್ಷರು, ಸಿಪಿಎಂ ನಾಯಕರು ಆದ ಚಂದ್ರಕುಮಾರಿ ಇದ್ದರು.