
3 ನೇ ವರ್ಷ ವಿಶ್ವ ಕ್ಯಾನ್ಸರ್ ದಿನಾಚರಣೆಯ, ಸಪ್ತಾಹದ ನಿಮಿತ್ತ ಕಾನ್ಸರ್ ಬಗ್ಗೆ ಅರಿವು
ಕರುನಾಡ ಬೆಳಗು ಸುದ್ದಿ
ಕೊಪ್ಪಳ,23- ವಿಶ್ವ ಕ್ಯಾನ್ಸರ್ ಅರಿವು ಮೂಡಿಸುವ ದಿನ ಮತ್ತು ಸಪ್ತಾಹದ ಅಂಗವಾಗಿ ಸಮುದಾಯ ಆರೋಗ್ಯ ಕೇಂದ್ರ ಹಿರೇಸಿಂದೋಗಿಯಲ್ಲಿ ಕಲಬುರಿಗಿಯ ಶ್ರೀ ಸ್ವಾಮೀ ರಾಮಾನಂದ ತೀರ್ಥ ಸಾಮಾಜಿಕ ಆರ್ಥಿಕ ರಾಷ್ಟ್ರ್ರೀಯ ಭಾವೈಕ್ಯತೆ ಮತ್ತು ಸಂಶೋಧನಾ ಸಂಸ್ಥೆ, ಕೊಪ್ಪಳದ ರೇಣುಕಾ ಡೈಜಿನೊಸ್ಟಿಕ್ಸ್ ಅಂಡ್ ಆರ್. ಸಿ ಇವರ ಸಂಯುಕ್ತಾಶ್ರಯದಲ್ಲಿ ಸತತವಾಗಿ ಮೂರನೇ ವರ್ಷ ವಿಶ್ವ ಕ್ಯಾನ್ಸರ್ ದಿನಾಚರಣೆಯ ಹಾಗೂ ಸಪ್ತಾಹದ ನಿಮಿತ್ತ ಕಾನ್ಸರ್ ಬಗ್ಗೆ ಅರಿವು ಮತ್ತು ಸ್ಕ್ರೀನ್ನಿಂಗ್ ಕಾರ್ಯಕ್ರಮ ಜರುಗಿತು.
ಸುಮಾರು 60 ಜನರ ಉಚಿತ ತಪಾಸಣೆ ಮಾಡಲಾಗಿ, ಸುಮಾರು ನಲವತ್ತು ಮಹಿಳೆಯರ ಸರ್ವಿಕಲ್ ಪ್ಯಾಪ್ ಸ್ಮಿಯರ್ ಸ್ಟಡಿ ಮತ್ತು ಸರ್ವಿಕಲ್ ಕ್ಯಾನ್ಸರ್ಗೆ ಕಾರಣವಾದ ಹ್ಯುಮನ ಪಾಪಿಲೋಮಾ ವೈರಸ್ ನ ಟೆಸ್ಟ್ಗಳನ್ನು ಉಚಿತವಾಗಿ ಮಾಡಲಾಯಿತು.
ತಂಬಾಕು ಬಳಕೆ, ಆಹಾರ ಪದ್ಧತಿಯಲ್ಲಿ ಬದಲಾವಣೆ, ಪರಿಸರ ಮಾಲಿನ್ಯ, ಬದಲಾದ ಇಂದಿನ ಜೀವನಶೈಲಿ ಕಾನ್ಸರ್ ರೋಗಕ್ಕೆ ಕಾರಣಗಳೆಂಬ ವಿಷಯ ತಿಳಿಸಲಾಯಿತು.
ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲಾಯಿತು. ಕ್ಯಾನ್ಸರ್ ತಡೆಗಟ್ಟುವ, ಪ್ರಾಥಮಿಕ ಹಂತದಲ್ಲೇ ರೋಗವನ್ನು ಪತ್ತೆ ಹಚ್ಚುವ ಹಾಗೂ ರೋಗವನ್ನು ಪತ್ತೆ ಹಚ್ಚಿ ಚಿಕೆತ್ಸೆ ನೀಡುವ ಕುರಿತು ಪರಿಣಿತರಿಂದ ಅರಿವು ಮೂಡಿಸಲಾಯಿತು.
ಈ ಸಂಧರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ ರಮೇಶ ಮೂಲಿಮನಿ,ಪ್ರಸೂತಿ & ಸ್ತ್ರೀರೋಗ ತಜ್ಞರು ಮಾತನಾಡುತ್ತ ಕ್ಯಾನ್ಸರ್ ನಿಂದ ಉಂಟಾಗುವ ಸಾವುಗಳಲ್ಲಿ ಗರ್ಭಕೊರಳಿನ ಕ್ಯಾನ್ಸರ್ನಿಂದ ಹೆಚ್ಚಿನ ಸಾವುಗಳು ಸಂಭವಿಸುತ್ತಿವೆ. ವಾಸನೆಯಿಂದ ಕೂಡಿದ ಬಿಳಿಮುಟ್ಟು, ರಕ್ತಸ್ರಾವ ಆಗುವದು, ತೂಕ ಕಡಿಮೆ ಆಗುವದು, ಹಸಿವು ಆಗದೆ ಇರುವದು & ಹೊಟ್ಟೆನೋವು ಇಂತಹ ಲಕ್ಷಣಗಳಿದ್ದವರು ತಪಾಸಣೆಗೆ ಒಳಗಾಗುವ ಮೂಲಕ ಪ್ರಾರಂಭಿಕ ಹಂತದಲ್ಲೆ ಚಿಕಿತ್ಸೆ ಪಡೆದರೆ ಸಾವಿನ ಸಂಖ್ಯೆ ತಡೆಯಬಹುದಾಗಿದೆ.
ಹೆಣ್ಣು ಮಕ್ಕಳಲ್ಲಿ ಎದೆಯಲ್ಲಿ ಗಂಟುಗಳಿದ್ದಲ್ಲಿ ಸೂಜಿ ಪರೀಕ್ಷೆ (ಎಫ್ ಏನ ಎ ಸಿ ) / ಮಮ್ಮೊಗ್ರಾಫಿ ಸ್ವ ಪರೀಕ್ಷೆ /ಯು ಎಸ್ ಜೀ /ಬಯಾಪ್ಸಿ ಇತ್ಯಾದಿ ಪರೀಕ್ಷೆ ಮಾಡುವ ಮೂಲಕ ಹಾಗೂ ಗರ್ಭಕೋಶದ ಕ್ಯಾನ್ಸರ್ ನ್ನು ಪ್ಯಾಪಸ್ಮಿಯರ್/ ಅಸಿಟಿಕ್ ಆಸಿಡ್ ಟೆಸ್ಟ್ /ಹೆಚ್ ಪಿ ವಿ ಟೆಸ್ಟ್ /ಬಯಾಪ್ಸಿ ಮೂಲಕ ತಪಾಸಣೆ ಮಾಡಲಾಗುವದು ಎಂದ ಅವರು ಮಕ್ಕಳಿಗೆ ಹೆಚ್ ಪಿ ವಿ ವೈರಸ್ ಬಾರದಂತೆ ಲಸಿಕೆ ಕೊಡಿಸಿದಲ್ಲಿ ಮಕ್ಕಳಲ್ಲಿ ಮುಂದೆ ಬರಬಹುದಾ ದಂತಹ ಗರ್ಭಕೋಶದ ಕ್ಯಾನ್ಸರ್ ತಡೆಯಬಹುದಾಗಿದೆ ಮಕ್ಕಳ ಹುಟ್ಟು ಹಬ್ಬಕ್ಕೆ ಈ ಲಸಿಕೆಯನ್ನು ಗಿಫ್ಟ್ ಆಗಿ ಕೊಡಿಸಬಹುದು ಎಂಬುದಾಗಿ ತಿಳಿಸಿದರು.
ಕಿಮ್ಸನ ಪ್ಯಾಥಾಲಜಿ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಡಾ ಅನಿರುದ್ಧ ವಸಂತ ಕುಷ್ಟಗಿ ಮಾತನಾಡಿ ತಂಬಾಕು ಸೇವನೆ ಮಾಡುವವರಲ್ಲಿ ತುಟಿ, ಬಾಯಿ, ಪುಪ್ಪಸ, ಗಂಟಲು, ಅನ್ನನಾಳಲ್ಲಿ, ಸ್ಥನದ ಕ್ಯಾನ್ಸರ ಆಗುವ ಸಾಧ್ಯತೆಗಳು ಹೆಚ್ಚಾಗುತ್ತವೆ ಆದ್ದರಿಂದ ತಂಬಾಕನ್ನು ತ್ಯಜಿಸಿರಿ ಕ್ಯಾನ್ಸರ್ ತಡೆಯಿರಿ ಹಾಗೂ ಆರೋಗ್ಯವನ್ನು ರಕ್ಷಿಸಿಕೊಳ್ಳೋಣ ಎಂದು ತಿಳಿಸಿದರು.
ಮಾತನಾಡುತ್ತ ಕ್ಯಾನ್ಸರ್ ನಿಂದ ಉಂಟಗುವ ಸಾವುಗಳಲ್ಲಿ ಗರ್ಭಕೊರಳಿನ ಕ್ಯಾನ್ಸರ್ನಿಂದ ಹೆಚ್ಚಿನ ಸಾವುಗಳು ಸಂಭವಿಸುತ್ತಿವೆ. ವಾಸನೆಯಿಂದ ಕೂಡಿದ ಬಿಳಿಮುಟ್ಟು, ಸಂಸಾರ ಮಾಡುವಾಗ ರಕ್ತಸ್ರಾವ ಆಗುವದು, ತೂಕ ಕಡಿಮೆ ಆಗುವದು, ಹಸಿವು ಆಗದೆ ಇರುವದು & ಹೊಟ್ಟೆನೋವು ಇಂತಹ ಲಕ್ಷಣಗಳಿದ್ದವರು ತಪಾಸಣೆಗೆ ಒಳಗಾಗುವ ಮೂಲಕ ಪ್ರಾರಂಭಿಕ ಹಂತದಲ್ಲೆ ಚಿಕಿತ್ಸೆ ಪಡೆದರೆ ಉತ್ಸಾಹದಿಂದ ಬದುಕು ಸಾಗಿಸಬಹುದು ಹಾಗೂ ಹಲವಾರು ಸಂಧರ್ಭಗಳಲ್ಲಿ ಸಂಪೂರ್ಣ ಗುಣಪಡಿಸಲು ಅವಕಾಶವಿರುತ್ತದೆ ಎಂಬುದಾಗಿ ಹೇಳಿದರು.
ಮಕ್ಕಳ ವೈದ್ಯ ಡಾ. ಪ್ರಮೋದ ಪಡಸಾಲಿ ಅವರು ಮಕ್ಕಳಲ್ಲಿ ಕಂಡುಬರುವಂತಹ ಕ್ಯಾನ್ಸರಗಳ ಬಗ್ಗೆ ಮಾಹಿತಿ ನೀಡಿದರು. ದಂತ ವೈದ್ಯರಾದ ಡಾ.ಸವಿತಾ ಅವರು ಬಾಯಿಗೆ ಸಂಬಂಧಿಸಿದ ರೋಗಗಳ ಬಗ್ಗೆ ಮಾಹಿತಿ ನೀಡಿದರು. ಅರವಳಿಕೆ ವೈದ್ಯರ ಡಾ. ಪ್ರತಾಪ ಶೆಟ್ಟಿ , ರೇಣುಕಾ ಡಯಾಗನೋಸ್ಟಿಕ್ಸ್ ಲ್ಯಾಬರೋಟರಿ ಮತ್ತು ಆರ್. ಸಿ. ಕೋಪ್ಪಳದ ಸಿಬ್ಬಂದಿ ವಾಸಿಮ್, ಸುದೀಪ, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದೆ ಸಂಧರ್ಭದಲ್ಲಿ ಆಗಿನ ಹೈದ್ರಾಬಾದ ಕರ್ನಾಟಕ ಈಗಿನ ಕಲ್ಯಾಣ ಕರ್ನಾಟಕ ಭಾರತಕ್ಕೆ ಸೇರ್ಪಡೆಮಾಡುವ ಹೋರಾಟದಲ್ಲಿ ಶ್ರೀ ಸ್ವಾಮಿ ರಾಮಾನಂದ ತೀರ್ಥರ ಕೊಡುಗೆ ಹಾಗೂ ಶ್ರೀ ಸ್ವಾಮೀ ರಾಮಾನಂದ ತೀರ್ಥ ಸಾಮಾಜಿಕ ಆರ್ಥಿಕ ರಾಷ್ಟ್ರ್ರೀಯ ಭಾವೈಕ್ಯತೆ ಮತ್ತು ಸಂಶೋಧನಾ ಸಂಸ್ಥೆ, ಹುಟ್ಟುಹಾಕಿದ ಮಾನ್ಯ ಪಿ ವಿ ನರಸಿಂಹರಾವ್ ಪೂರ್ವ ಪ್ರಧಾನಿ ಹಾಗೂ ಇತ್ತೀಚಿಗೆ ನಮ್ಮ ರಾಷ್ಟ್ರದ ಅತ್ಯುನ್ನತ ಗೌರವ ಭಾರತ ರತ್ನ ಪ್ರಶಸ್ತಿಗೆ ಭಾಜನರಾದ ಇವರನ್ನು ಹಾಗೂ ಆಗಿನ ಸಂಸ್ಥೆಯ ಇನ್ನೋರ್ವ ಪದಾಧಿಕಾರಿ ಕಲ್ಯಾಣ ಕರ್ನಾಟಕದ ಸಾಹಿತ್ಯ ಸಂತ ಶುಭ ಹಾರಯಿಕೆಯ ಕವಿ ಪ್ರೊ.ವಸಂತ ಕುಷ್ಟಗಿಯರನ್ನು ಆದರಗಳೊಂದಿಗೆ ನೆನಪಿಸಿಕೊಳ್ಳಲ್ಲಾಯಿತು.
ಹಿರೇಸಿಂದೋಗಿಯ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಅರೋಗ್ಯ ಸಹಕಾರದ ಲಲಿತ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು ಮತ್ತು ಮಹೇಶ್ ಕೋಟೆ ಅವರು ವಂದನಾರ್ಪಣೆಯನ್ನು ಸಲ್ಲಿಸಿದರು.