
ವಿಶ್ವ ಪ್ರಸಿದ್ಧ ಹಂಪೆಯ ಸ್ಮಾರಕಗಳನ್ನು
ವೀಕ್ಷಿಸಿದ ಬ್ರಿಗೇ ಡಿಯರ್ ಜೈದೀಪ್ ಮುಖರ್ಜಿ
ಕರುನಾಡ ಬೆಳಗು ಸುದ್ದಿ
ಹಂಪಿ (ವಿಜಯನಗರ), ೨೯- ವಿಶ್ವ ಪ್ರಸಿದ್ಧ ಹಂಪಿಗೆ ಬ್ರಿಗೇಡಿಯರ್ ಜೈದೀಪ್ ಮುಖರ್ಜಿ ಕಮಾಂಡೆಂಟ್ ಮರಾಠ ಲೈಟ್ ಇನ್ಫೆಂಟ್ರಿ ರೆಜಿಮೆಂಟ್ ಬೆಳಗಾವಿ ರವರು ಕುಟುಂಬದ ಸಮೇತ ಹಂಪಿ ವೀಕ್ಷಣೆಗೆ ಬಂದಿದ್ದರು.
ಬೆಳಿಗ್ಗೆ ವೈಕುಂಠ ಅತಿಥಿಗೃಹ ಟಿಬಿ ಡ್ಯಾಮ್ ನಿಂದ ನೇರವಾಗಿ ಶ್ರೀ ಪಂಪ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆಯನ್ನು ಸಲ್ಲಿಸಿ, ನಂತರ ಹಂಪಿಯ ಸ್ಮಾರಕಗಳನ್ನು ವೀಕ್ಷಿಸಿದರು, ಸಾಸುವೆ ಕಾಳು ಗಣಪ, ಉಗ್ರ ನರಸಿಂಹ, ಕಮಲ್ ಮಹಲ್, ಗಜ ಶಾಲೆ, ವಿಜಯ ವಿಠಲ ದೇವಸ್ಥಾನ, ರಾಣಿ ಸ್ನಾನಗೃಹ ವೀಕ್ಷಿಸಿದರು, ಹಂಪಿಯ ಶ್ರೀಮಂತ ಕಲಾ ಸಾಂಸ್ಕೃತಿಕ ಮತ್ತು ಪರಂಪರೆಗೆ ಬರೆಗಾಗಿ, ಹಂಪಿಯನ್ನು ನೋಡುವುದು ಒಂದು ಸೌಭಾಗ್ಯ, ಇಲ್ಲಿನ ಶ್ರೀಮಂತ ಕಲೆಯನ್ನು ಹೊಂದಿರುವ ಸ್ಮಾರಕಗಳನ್ನು ನೋಡಿ ಬಹಳ ಸಂತೋಷವಾಗಿದೆ, ಅದರಲ್ಲೂ ಇತ್ತೀಚಿಗೆ ವಿಶ್ವಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆಯುತ್ತಿರುವುದಕ್ಕೆ ಅತ್ಯಂತ ಹೆಮ್ಮೆ ಆಗುತ್ತಿದೆ, ವಿಶ್ವಕ್ಕೆ ಭಾರತೀಯ ಶ್ರೀಮಂತ ಕಲಾ ಸಾಂಸ್ಕೃತಿಕ ಕೊಡುಗೆಯಲ್ಲಿ ಹಂಪಿಯು ತನ್ನದೇ ಆದ ಕೊಡುಗೆಯನ್ನು ನೀಡಿದೆ ಎಂದು ಬ್ರಿಗೇಡ್ ಮುಖರ್ಜಿ ಅವರು ತಿಳಿಸಿದರು, ಇವರಿಗೆ ವಿರುಪಾಕ್ಷಿ ವಿ ಹಂಪಿ ಗೈಡ್ ಇವರು ಹಂಪಿಯ ಪರಂಪರೆ ಮತ್ತು ಸ್ಮಾರಕಗಳ ಬಗ್ಗೆ ಮಾಹಿತಿನೀಡಿದರು.