
ವೃದ್ಧಾಶ್ರಮದಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ ಧ್ರುವ ಸರ್ಜಾ ಅಭಿಮಾನಿ ಎಂ.ಜಿ ಕನಕ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,7- ಧ್ರುವ ಸರ್ಜಾ ಅವರ ಅಭಿಮಾನಿ, ಸಚಿವ ಬಿ.ನಾಗೇಂದ್ರ ಅವರ ಶಿಷ್ಯ, ಕೆಪಿಸಿಸಿ ಸಾಮಾಜಿಕ ಜಾಲತಾಣ ಘಟಕದ ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಸಮಾಜ ಸೇವಕರಾದ ಎಂ.ಜಿ ಕನಕ ಅವರು ತಮ್ಮ ಹುಟ್ಟು ಹಬ್ಬವನ್ನು ಸಂಗನಕಲ್ ಗ್ರಾಮದಲ್ಲಿರುವ ಆದರ್ಶ ವೃದ್ಧಾಶ್ರಮದಲ್ಲಿ ವೃದ್ಧರಿಗೆ ಹಣ್ಣು ಹಂಪಲು ಮತ್ತು ಅನ್ನದಾನ ಮಾಡುವ ಮೂಲಕ ಆಚರಣೆ ಮಾಡಿಕೊಂಡರು.
ನಗರದ ಅಧಿ ದೇವತೆ ಬಳ್ಳಾರಿ ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಕೆಕ್ ಕಟ್ ಮಾಡಲಾಯಿತು. ನಂತರ ಅವರ ಸ್ನೇಹಿತರು ಎಂ.ಜಿ ಕನಕ ಅವರ ಕುರಿತು ಮಾಡಲಾದ ಹಾಡನ್ನು ನಗರ ಪಾಲಿಕೆ ಸದಸ್ಯ ಪಿ. ಗಾದೆಪ್ಪ ಅವರು ಬಿಡುಗಡೆಗೊಳಿಸಿದರು.
ಎಂ.ಜಿ ಕನಕ ಅವರ ಕೆಲವು ಸಾಮಾಜಿಕ ಕೆಲಸಗಳನ್ನು ಗುರುತಿಸಿದ ಅವರ ಸ್ನೇಹಿತರು ನಗರದ ಹಲವು ಕಡೆ ಕೆಕ್ ಕಟ್ ಮಾಡಿ ಸಂಭ್ರಮಿಸಿದರು.
ನಂತರ ಮಾತನಾಡಿದ ಪಾಲಿಕೆ ಸದಸ್ಯ ಪಿ. ಗಾದಪ್ಪ ಅವರು, ಎಂ.ಜಿ.ಕನಕ ಅವರು ಹಲವಾರು ರೀತಿಯಲ್ಲಿ ಸಾಮಾಜಿಕ ಸೇವೆಗಳನ್ನು ಮಾಡುತ್ತಿದ್ದಾರೆ. ಇವರು ತಮಗೆ ನೀಡಿದ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಾರೆ. ಆದ್ದರಿಂದ ಇವರಿಗೆ ಜನರು ಹೆಚ್ಚು ಪ್ರೀತಿಸುತ್ತಾರೆ ಎಂದ ಅವರು, ನಿಮ್ಮ ಈ ಸಾಮಾಜಿಕ ಕಳಕಳಿ ಹಾಗೂ ಸಮಾಜ ಸೇವೆ ಹೀಗೆ ಮುಂದವರೆಯಲಿ. ನಿಮಗೆ ಬೇಕಾದ ಪ್ರೋತ್ಸಾಹವನ್ನು ನಾವು ನಿಮಗೆ ನೀಡುತ್ತೇವೆ ಎಂದರು.
ಇದೇ ವೇಳೆ ಎಂ. ಜಿ ಕನಕ ಅವರು ಮಾತನಾಡಿ, ಇಂದು ನನ್ನ ಹುಟ್ಟು ಹಬ್ಬ ಆಚರಣೆಗೆ ಬಂದ ನನ್ನ ಎಲ್ಲಾ ಸ್ನೇಹಿತರುಗೂ ನನ್ನ ಕೃತಜ್ಞತೆಯನ್ನು ತಿಳಿಸುತ್ತೇನೆ. ಇಂದಿನ ದಿನಗಳಲ್ಲಿ ಬಡವರಿಗೆ ನಾನು ನನ್ನ ಕೈಲಾಸ ಸಹಾಯ ಮಾಡುತ್ತಿದ್ದೆನೆ ಇದಕ್ಕೆ ಕಾರಣ ಶ್ರೀ ಕನಕ ದುರ್ಗಮ್ಮನ ಆಶಿರ್ವಾದ ಮತ್ತು ನಮ್ಮ ಸ್ನೇಹಿತರ ಪ್ರೋತ್ಸಾಹ ಕಾರಣವಾಗಿದೆ. ಮುಂದಿನ ದಿಗಳಲ್ಲಿಯೂ ನನ್ನ ಕೈಯಲ್ಲಾದ ಸಹಾಯವನ್ನು ಜನರಿಗೆ ಮಾಡುತ್ತೆನೆ ಎಂ.ಜಿ ಕನಕ ಹೇಳಿದರು.
ಈ ಸಂದರ್ಭದಲ್ಲಿ ಉಮಾರ್ ಫಾರೂಕ್, ವೈ.ಅರುಣ್ ಕುಮಾರ್, ಸಿ.ತಿಪ್ಪೇರುದ್ರ, ನಾಗರಾಜ್ ಹುಬ್ಬಳ್ಳಿ, ಯೋಗೇಶ್ ಕುಮಾರ್ ಬಂಡಾರಿ, ಮೋಕ ಪಾಷಾ, ಡಿ.ಕೆ ಗಾದಿ, ಗಂಗಾಧರ ಸೇರಿದಂತೆ ಎಂ.ಜಿ ಕನಕ ಅವರು ಸ್ನೇಹಿತ ಬಳಗದವರು ಹಾಜರಿದ್ದರು.