
ವೈಎಂಸಿಎ ವತಿಯಿಂದ ಪುಸ್ತಕ ಹಾಗೂ ಕಂಪಾಸ್ ಬಾಕ್ಸ್ ವಿತರಣೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 13- ಯಂಗ್ ಮೆನ್ಸ್ ಕ್ರಿಶ್ಚಿಯನ್ ಅಸೋಷಿಯೇಷನ್ ಬಳ್ಳಾರಿ ಗ್ರಾಮಾಂತರ ವತಿಯಿಂದ ಶಾಲಾ ಮಕ್ಕಳಿಗೆ ಪುಸ್ತಕಗಳು ಮತ್ತು ಕಂಪಾಸ್ ಬಾಕ್ಸ್ ಗಳನ್ನು ವಿತರಿಸಲಾಯಿತು.
ವೈಎಂಸಿಎ ಬಳ್ಳಾರಿ ಗ್ರಾಮಾಂತರ ವತಿಯಿಂದ, ಬಳ್ಳಾರಿಯಲ್ಲಿರುವ ಲಂಡನ್ ಮಿಷನ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಪುಸ್ತಕಗಳು ಹಾಗೂ ಕಂಪಾಸ್ ಬಾಕ್ಸ್ ಗಳನ್ನು ಯಂಗ್ ಮೆನ್ಸ್ ಕ್ರಿಶ್ಚಿಯನ್ ಅಸೋಷಿಯೇಷನ್ ಬಳ್ಳಾರಿ ಗ್ರಾಮಾಂತರ ಅಧ್ಯಕ್ಷರಾದ ಕಾಂತಿ ನೋಹ ವಿಲ್ಸನ್ ರವರ ಅಧ್ಯಕ್ಷತೆಯಲ್ಲಿ ವಿತರಿಸಲಾಯಿತು. ಸಂಸ್ಥೆಯ ಹಿರಿಯರಾದ ರೇವರೆಂಡ್ ಸ್ಯಾಮುಯಲ್ ಕ್ರಿಸ್ತ ವತ್ಸ ರವರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಶಾಂತಲಾ ಮರೀರಾಜ್ ರವರು ಮಕ್ಕಳಿಗೆ ಪುಸ್ತಕ ಹಾಗೂ ಕಂಪಾಸ್ ಬಾಕ್ಸ್‍ಗಳನ್ನು ವಿತರಿಸಿದರು.
ಈ ವೇಳೆ ಸಂಸ್ಥೆಯ ಅಧ್ಯಕ್ಷರು ಮತ್ತು ಮುಖ್ಯ ಅತಿಥಿಗಳು ಕಾರ್ಯಕ್ರಮವನ್ನು ಉದ್ದೇಶಿಸಿ ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನು ಆಡುತ್ತಾ, ವಿದ್ಯಾಭ್ಯಾಸದ ಕಡೆ ಗಮನ ಹರಿಸಬೇಕು. ತಂದೆ- ತಾಯಿಯರಿಗೆ, ಗುರುಗಳಿಗೆ ಮತ್ತು ಶಾಲೆಗೆ ಒಳ್ಳೆಯ ಹೆಸರು ತರುವಂತಹ ಚಟುವಟಿಕೆಗಳಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳು ಬುದ್ಧಿವಂತರಾಗಬೇಕೆಂದು ಕರೆ ನೀಡಿದರು. ವಿದ್ಯಾರ್ಥಿಗಳಿಗೆ ತಂದೆ- ತಾಯಿಯರಿಗೆ ಮತ್ತು ಗುರುಗಳಿಗೆ ಗೌರವಿಸಬೇಕೆಂದು ಸಲಹೆ ನೀಡಿದರು.
ಈ ಸಂಧರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಮಾರ್ಗರೇಟ್ ಮೋಹನ್, ಕಾರ್ಯದರ್ಶಿ ಯೇಸುಪಾಲ್, ಸದಸ್ಯರಾದ ಪಾಸ್ಟರ್ ಪ್ರಭಾಕರ್,ಡಾ. ಗಜೇಂದ್ರ ವರ್ಮಾ, ಹೆಲೆನ್ ಜ್ಯೋತಿ, ಮಾರ್ತಮ್ಮ, ಮುಖ್ಯೋಪಾಧ್ಯಾಯಿನಿಯರಾದ ಮೇರಿ ಎಫ್ಶಿಬ ಮತ್ತು ಶಾಲೆಯ ಸಿಬ್ಬಂದಿ ಶಿಕ್ಷಕ – ಶಿಕ್ಷಕಿಯರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶಾಂತಲಾ ಮರೀರಾಜ್ ಮತ್ತು ಡಾ. ಗಜೇಂದ್ರ ವರ್ಮಾರವರಿಗೆ, ಶಾಲೆಯ ಮುಖ್ಯೋಪಾಧ್ಯಾಯಿನಿ ಮತ್ತು ಸಿಬ್ಬಂದಿಯವರಿಂದ ಗೌರವದಿಂದ ಸನ್ಮಾನಿಸಲಾಯಿತು.