
ಶಾಂತಿ ಸಭೆ ಭಾವೈಕ್ಯದಿಂದ ಯುಗಾದಿ ರಂಜಾನ್ ಹಬ್ಬ ಆಚರಿಸಿ : ಸಿಪಿಐ ವೈಎಸ್ ಹನುಮಂತಪ್ಪ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ ಯುಗಾದಿ ಹಾಗೂ ರಂಜಾನ್ ಹಬ್ಬಗಳು ಹಿಂದೂ ಮತ್ತು ಮುಸ್ಲಿಮರು ಪರಸ್ಪರ ಪ್ರೀತಿ ಸೌಹಾರ್ದತೆಯಿಂದ ಆಚರಿಸಬೇಕು ಸಮಾಜದ ಮುಖಂಡರು ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಬಾರದು.
ಸಾಮಾಜಿಕ ಜಾಲ ತಾಣಗಳಲ್ಲಿನ ಫೇಕ್ ಸುದ್ದಿಗಳಿಗೆ ಯಾರು ಕಿವಿ ಕೊಡಬೇಡಿ ಭಾವೈಕ್ಯತೆಯಿಂದ ಹಬ್ಬಗಳನ್ನು ಶಾಂತಿಯುತವಾಗಿ ಆಚರಣೆ ಮಾಡಬೇಕು ಎಂದು ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ವೈ ಎಸ್ ಹನುಮಂತಪ್ಪ ಅವರು ಹೇಳಿದರು.
ಸಿರುಗುಪ್ಪ ನಗರದ ಪೊಲೀಸ್ ಠಾಣೆಯಲ್ಲಿ ಜರುಗಿದ ಯುಗಾದಿ ಮತ್ತು ರಮಜಾನ್ ಹಬ್ಬಗಳ ಶಾಂತಿ ಸಭೆ ಉದ್ದೇಶಿಸಿ ಮಾತನಾಡುತ್ತಾ ಎಲ್ಲರೂ ಶಾಂತಿ ಸೌಹಾರ್ದ ಭಾವೈಕ್ಯತೆದಿಂದ ಆಚರಿಸೋಣ ಎಂದು ಕರೆ ನೀಡಿದರು.
ಡಿವೈಎಸ್ ಪಿ ವೆಂಕಟೇಶ್ ಸಾಹೇಬರು ಹಾಗೂ ತಹಸಿಲ್ದಾರ್ ಸಾಹೇಬರು ಶಂಸೆ ಆಲಂ ಅವರು ಈ ಶಾಂತಿ ಸಭೆಯಲ್ಲಿ ಆಗಮಿಸಬೇಕಾಗಿತ್ತು ಅವರ ಅನು ಉಪಸ್ಥಿತಿಯಲ್ಲಿ ಸಭೆ ನಡೆದಿದ್ದು ತಮ್ಮೆಲ್ಲರಿಗೂ ಹೊಸ ವರ್ಷ ಯುಗಾದಿ ಹಬ್ಬದ ಮತ್ತು ರಂಜಾನ್ ಹಬ್ಬದ ಹಾರ್ದಿಕ ಶುಭಾಶಯ ಕೋರಿದರು.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಿಮ್ಮಣ್ಣ ನಾಯಕ ಅವರು ಸರ್ವರನ್ನು ಸ್ವಾಗತಿಸಿ ಮಾತನಾಡುತ್ತಾ ಲೋಕಸಭಾ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದಂತೆ ಸರ್ವ ಧರ್ಮೀಯರು ಪರಸ್ಪರ ಭಾವೈಕ್ಯತೆಯಿಂದ ಪರಮಧರ್ಮ ಸಹಿಷ್ಣುತೆಯಿಂದ ಯುಗಾದಿ ರಂಜಾನ್ ಹಬ್ಬ ಆಚರಿಸಬೇಕು ಎಲ್ಲರೂ ಶಾಂತಿ ಸಂತೋಷದಿಂದ ರಂಜಾನ್ ಯುಗಾದಿ ಹಬ್ಬವನ್ನು ಆಚರಿಸೋಣ ಎಂದು ವಿನಂತಿಸುತ್ತ ಪೊಲೀಸ್ ಇಲಾಖೆಗೆ ತಾವೆಲ್ಲ ಸಹಕಾರ ನೀಡಬೇಕು ಎಂದರು.
ರಾಷ್ಟ್ರೀಯ ಸಾಕ್ಷರತಾ ಸಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಅವರು ಶಾಂತಿ ಸಭೆಯಲ್ಲಿ ಸರ್ವಧರ್ಮಿಯರಿಗೂ ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರೀತಿಯ ಶುಭಾಶಯಗಳು ಕೋರಿದರು ಪರಸ್ಪರ ಪ್ರೀತಿ ಸಹೋದರತೆಯಿಂದ ನಾವೆಲ್ಲರೂ ಶಾಂತಿಯುತವಾಗಿ ಹಬ್ಬ ಆಚರಿಸೋಣ ಎಂದರು ಮುಖಂಡ ಯೋಗೀಶ್ ಅವರು ಮಾತನಾಡಿ ನಗರದ 27, 28,ನೇ ಮತ್ತು 29,30,ನೇ ವಾರ್ಡ್ ಗಳಲ್ಲಿ ಅನಧಿಕೃತವಾಗಿ ಮಧ್ಯಪಾನ ವ್ಯಾಪಾರ ನಡೆಸುತ್ತಿದ್ದು ಇದರ ಬಗ್ಗೆ ತಾವು ಗಮನ ಹರಿಸಬೇಕು ಎಂದು ವಿನಂತಿಸಿದರು.
ಎ.ರಬ್ಬಾನಿ ಮೋದಿನ ಬಿ ವೆಂಕಟೇಶ್ ಮಾತನಾಡಿ ಸಿರುಗುಪ್ಪ ತಾಲೂಕಿನಲ್ಲಿ ಹಿಂದೂ ಮುಸ್ಲಿಮರು ಸಹೋದರರಾಗಿ ಇದ್ದಾರೆ ಪೊಲೀಸ್ ಸರ ಕಟ್ಟುನಿಟ್ಟಿನ ನಿಯಮಗಳಿಗೆ ಕರ್ತವ್ಯ ಭದ್ಧರಾಗಿ ರಮಜಾನ್ ಮತ್ತು ಯುಗಾದಿ ಹಬ್ಬಗಳನ್ನು ಆಚರಿಸಲಾಗುವುದು ಎಂದರು ಮುಖಂಡರಾದ ಹಾಜಿ ಹಂಡಿ ಹುಸೇನ್ ಬಾಷಾ ಡಾ ಮೊಹಮ್ಮದ್ ಅಲಿ ಅಡ್ವಕೇಟ್ ಅಮೀರ್ ಭಾಷಾ ಮುಲ್ಲಾ ದಾದಾ ಕಲಂದರ್ ಅಜೀಂ ಕೆ.ಅಲಿ ಹಾಜಿ ಬಾಬಾ ಸಾಬ್ ಪೊಲೀಸ್ ಸಿಬ್ಬಂದಿ ವರ್ಗದವರು ಮತ್ತು ಇತರ ಪ್ರಮುಖರು ಇದ್ದರು.