
ಶಾಂತಿ ಸೌಹಾರ್ದ ಪ್ರಗತಿಗೆ ಒಟ್ಟಿಗೆ ಶ್ರಮಿಸಿ : ತಹಶಿಲ್ದಾರ್ ಶಂಶೇ ಆಲಂ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,23- ನಾವೆಲ್ಲ ಉತ್ತಮ ಭವಿಷ್ಯಕ್ಕೆ ಒಂದುಗೂಡಬೇಕು ನಾವೆಲ್ಲರೂ ಒಬ್ಬನೇ ಅಲ್ಲಾಹನ ಸೃಷ್ಟಿಗಳು ಅಲ್ಲಾಹನ ರಸೂಲರ ಜಗದ್ಗುರುಗಳ ಗುರು ಹಿರಿಯರ ಮಹಾತ್ಮರ ಕುಟುಂಬದ ಸದಸ್ಯರು ಮಾನವೀಯ ಮೌಲ್ಯಗಳ ಸಮಾಜದ ನಿರ್ಮಾಣಕ್ಕೆ ಶ್ರಮಿಸಬೇಕು ಧರ್ಮ ಮಾನವೀಯತೆ ಕಲಿಸುತ್ತದೆ ಜಗತ್ತಿನ ಅತ್ಯಂತ ಶಾಂತಿಯ ಧರ್ಮ ಇಸ್ಲಾಂ ಎಂದು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ಅಧ್ಯಕ್ಷರು ತಾಲೂಕ ಕಾರ್ಯನಿರ್ವಾಹಕ ದಂಡಾಧಿಕಾರಿ ತಹಸಿಲ್ದಾರ್ ಶಂಶೇ ಆಲಂ ಅಭಿಪ್ರಾಯಪಟ್ಟರು.
ತಾಲೂಕ ಕಚೇರಿಯ ಸಭಾಂಗಣದಲ್ಲಿ ಸಿರುಗುಪ್ಪ ತಾಲೂಕು ಈದ್ ಮಿಲಾದ್ ಉನ್ ನಬಿ ಕಮಿಟಿಯ ಅಧ್ಯಕ್ಷರು ಪದಾಧಿಕಾರಿಗಳು ತಹಸಿಲ್ದಾರ್ ಶಂಶೇ ಆಲಂ ಅವರನ್ನು ಪರಸ್ಪರ ಭೇಟಿಯಾಗಿ ಹಿರಿಯರ ಹಬ್ಬ ಶುಭ ರಾತ್ರಿ ನೂರಾನಿ ರಾತ್ ಶಬ್ ಎ ಬಾರತ್ ಉನ್ ನಬಿ ಸೊಲ್ಲೆಲ್ಲಾ ಹು ಅಲೈಹಿವ ಸಲ್ಲಂ ಈದ್ ಮುಬಾರಕ್ ಪರಸ್ಪರ ಶುಭಾಶಯ ಕೋರಿದರು ಶಾಂತಿ ಸೌಹಾರ್ದ ಪ್ರಗತಿಗೆ ಒಟ್ಟಿಗೆ ಶ್ರಮ ವಹಿಸಿ ಸೂಫಿ ಸಂತ ಶರಣರ ಗುಣ ಆದರ್ಶ ತತ್ವ ಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡು ಪಾಲಿಸಬೇಕು ಎಂದರು.
ತಾಲೂಕ ಈದ್ ಮಿಲಾದ್ ಕಮಿಟಿಯ ನಗರಸಭಾ ಮಾಜಿ ಸದಸ್ಯ ಹಾಜಿ ಚೌದ್ರಿ ಖಾಜಾ ಸಾಬ್, ಚಾರ್ಮಿನಾರ್ ಡಾಬಾ ಹೋಟೆಲ್ ಹಾಜಿ ಅಬ್ದುಲ್ ಗಫೂರ್ ಸಾಬ್, ಇನಾಯತ್, ಅನ್ಸಾರಿ ಅನ್ಸರ್, ಅನ್ಸಾರಿ ನೂರ್, ಮುಲ್ಲಾ ದಾದಾ ಖಲಂದರ್, ಮುಲ್ಲಾ ಕಲಿಂ, ಶಶಾವಲಿ, ಟೈಲರ್ ಜಿ ಖಾಜಾ, ಕಾಯಿಕಡೆ ಸುಭಾನ್, ಕಾಯಿಕಡೆ ಖಾಜಾ, ಕಣೆಕಲ್ ಗೌಸಿ,ಕೆ ಅಬ್ದುಲ್ ಗನಿ, ಹಂಡಿ ಹುಸೇನ್, ಮೆಕಾನಿಕ್ ಖಾದರ್, ಕರೆಂಟ್ ನೂರ್, ವೈ ಮೊಹಮ್ಮದ್ ಜಿಲಾನ್, ಫ್ರೂಟ್ ಅಬ್ದುಲ್ ರಹೀಮ್, ಫ್ರೂಟ್ ಅಬ್ದುಲ್ ರಸೂಲ್, ಎಸ್ ಕೆ ಖಾದ್ರಿ, ಹನೀಫ್, ಖಸೈ ನಬೀಸ, ಸಪ್ಲಯರ್ ಖಾಜಾ, ಟೈಲರ್ ಶಫಿ, ಶಬ್ಬೀರ್ ತಹಸೀಲ್ದಾರರನ್ನು ಪರಸ್ಪರ ಕೈ ಕುಲಕಿ ಶುಭಾಶಯ ಹಾರೈಸಿದರು.