
ಶಾಲಾ ಪಾಠ್ಯ ಪುಸ್ತಕಗಳಲ್ಲಿ ಇಂಡಿಯಾ ಹೆಸರನ್ನು ಭಾರತ ಎಂದು ಬದಲಾಯಿಸಲು ಆಕ್ಷೇಪ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,26- ಶಾಲಾ ಪಠ್ಯ ಪುಸ್ತಕಗಳಲ್ಲಿ ಇಂಡಿಯಾ ಹೆಸರನ್ನು ಭಾರತೆಂದು ಬದಲಾಯಿಸಬೇಕೆಂಬ ಎಂಸಿಆರ್‌ಟಿ ರಜಿಸಿರುವ ಸಮಿತಿಯ ಶಿಫಾರಸ್ಸು ಕೇಂದ್ರ ಸರ್ಕಾರ ಅಜೆಂಡಾಗೆ ಮನೆ ಹಾಕುವಂತಿದೆ ಎಂದು ಎಐಡಿಎಸ್ ಓ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ್ ತೀವ್ರ ಆಕ್ಷೇಪ ವ್ಯಕ್ತ ಮಾಡಿದರು.
ಒಂದೇ ಭಾಷೆಯ ಬಳಿಕೆಯನ್ನು ಹೇರುವ ಮೂಲಕ ಕೇಂದ್ರ ಸರ್ಕಾರವು ಶಿಕ್ಷಣದ ಪ್ರಜಾ ತಾಂತ್ರಿಕ ಮೌಲ್ಯಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿರುವ ಶಿಕ್ಷಣದ ಕೇಂದ್ರೀಕರಣಕ್ಕೆ ಮುಂದಾಗಿದೆ ಎಂದರು. ಶಿಕ್ಷಣದ ವೈಜ್ಞಾನಿಕ ಮತ್ತು ಧರ್ಮ ನಿರಪೇಕ್ಷ ಆಸೆಗಳಿಗೆ ವಿರುದ್ಧವಾಗಿ ಭಾರತೀಯ ಜ್ಞಾನ ವ್ಯವಸ್ಥೆಯನ್ನು ಅಳವಡಿಸುವ ಶಿಫಾರಸ್ಥನೂ ಸಹ ಈ ಸಮಿತಿ ಮಾಡಿದೆ.
ದೇಶದ ಸಂವಿಧಾನದಲ್ಲಿ ಭಾರತ ಮತ್ತು ಇಂಡಿಯಾ ಎಂಬ ಎರಡು ಹೆಸರುಗಳನ್ನು ಸ್ವೀಕರಿಸಲಾಗಿದೆ. ಮಾನಸದಲ್ಲಿ ಎರಡು ಹೆಸರುಗಳು ಬೆರೆತು ಹೋಗಿವೆ. ಪರಿಸ್ಥಿತಿ ಹೀಗಿರುವಾಗ ಇಂತಹ ಶಿಫಾರಸ್ಸುಗಳ ಮೂಲಕ ವಿದ್ಯಾರ್ಥಿಗಳಲ್ಲಿ ಅಂತರಾಷ್ಟ್ರೀಯ ಭಾವನೆಗಳನ್ನು ಕೆರಳಿಸಿ,
ದೇಶದ ಶಿಕ್ಷಣ ವ್ಯವಸ್ಥೆಯನ್ನು ಬಾಧಿಸುವ ವಾಸ್ತವ ಸಮಸ್ಯೆಗಳಿಂದ ಗಮನವನ್ನು ವಿಚಲಿತಗೊಳಿಸಲಾಗುತ್ತದೆ. ದೇಶದ ನವೋದಯ ಚಿಂತಕರು ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗರು ಪ್ರತಿಪಾದಿಸಿದ ನಿಜವಾದ ಶಿಕ್ಷಣದ ಹಂತ ಸತ್ಯವನ್ನು ನಾಶಗೊಳಿಸುವ ಈ ಶಿಫಾರಸ್ಸುಗಳನ್ನು ಜಾರಿಗೊಳಿಸಿದಂತೆ ಏನ್ ಸಿ ಈ ಆರ್ ಟಿ ಯನ್ನು ಎ.ಐ ಡಿ ಎಸ್ ಓ. ಆಗ್ರಹಿಸುತ್ತದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದರು.