
ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 30- ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಯೂತ್ ಫಾರ್ ಸೇವಾ ಮತ್ತು ಸ್ವ-ಗ್ರಾಮ ಫೆಲೋಶಿಪ್ ವತಿಯಿಂದ ಗ್ರಾಮ ಪಂಚಾಯತ್ ಮತ್ತು ಹಿಂದೂ ಸೇವಾ ಪ್ರತಿಷ್ಠಾನದ ನೇತೃತ್ವದಲ್ಲಿ ಸರಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಗ್ ವಿತರಿಸುವ ಕಾರ್ಯಕ್ರಮ ಬುಧವಾರ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಲ್ಲೇಶಪ್ಪ ತೊಂಡಿಹಾಳ ಗ್ರಾಮೀಣ ಭಾಗದಲ್ಲಿ ಮಕ್ಕಳ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕವಾಗಿ ಸೇವೆ ಮಾಡಲಾಗುವುದು.ಪ್ರತಿಯೊಬ್ಬ ಮಕ್ಕಳನ್ನು ಕಡ್ಡಾಯವಾಗಿ ಶಿಕ್ಷಣ ಕೊಡಿಸುವ ಕೆಲಸ ವಾಗಬೇಕಿದೆ. ಶಿಕ್ಷಣದಿಂದ ವಂಚಿತರಾಗಿದೇ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದರು.
ಈ ಸಂಧರ್ಭ ಯೂಥ್ ಫಾರ್ ಸೇವಾದ ಜಗನ್ನಾಥ್, ಹಿಂದೂ ಸೇವಾ ಪ್ರತಿಷ್ಠಾನದ ಭೀಮರ ದೇಶಪಾಂಡೆ ಮುಖಂಡರಾದ ನಾಗಯ್ಯ ಗುರುಮಠ, ರಪಿಸಾಬ್ ದೊಡ್ಮನಿ, ಪ್ರಭು ಬೆಣಕಲ್, ಬಲವಂತ ಪೂಜಾರ್ , ಯಲ್ಲಪ್ಪ ಅಗಸಿಮನಿ, ಬಸವರಾಜ್ ತಳವಾರ್ , ಮಲ್ಲಯ್ಯ ಹಿರೇಮಠ, ಕಲ್ಲೇಶ ಸಂಗಾನಾಳ , ಸಿದ್ದು ಹಿರೇಮಠ , ಸಂಗಪ್ಪ ಹೂಗಾರ , ಕಲ್ಲೇಶ ಕರಮುಡಿ, ಕಲ್ಲೇಶ ಕುದರಿಮನಿ, ಸಂತೋಷ ಕುದರಿಮನಿ, ದೊಡ್ಡಯ್ಯ ಪಟ್ಟಣಶೆಟ್ಟಿ,ಗ್ರಾ.ಪಂ. ಆಡಳಿತದವರು, ಯುವಕರು ವಿವಿಧ ಸಂಘ-ಸAಸ್ಥೆಗಳ ಪದಾಧಿಕಾರಿಗಳು ಎsಸ್ಡಿಎಂಸಿ ಹಾಗೂ ಇನ್ನಿತರರಿದ್ದರು.