IMG_20231030_175909

         ಮಕ್ಕಳಿಗೆ ಹೆಚ್ಚಿನ ಕರಾಟೆ ತರಬೇತಿ ಅಗತ್ಯ

                ಶಾಸಕ ಕೆ. ರಾಘವೇಂದ್ರ ಹಿಟ್ನಾಳ

ಕೊಪ್ಪಳ : ಈಗಾಗಲೇ ಕರಾಟೆ ಎನ್ನುವುದು ಕ್ರೀಡೆಗಳಲ್ಲಿ ಅತ್ಯುತ್ತಮ ಕ್ರೀಡೆ ಎನ್ನುವುದು ಸಾಬೀತಾಗಿದೆ. ಮಕ್ಕಳು ಸ್ವರಕ್ಷಣೆಗಾಗಿ ಕರಾಟೆ ತರಬೇತಿಯನ್ನು ಪಡೆಯಬೇಕಿದೆ ಕ್ರೀಡೆಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಮಕ್ಕಳು ವಹಿಸುವಂತೆ ತರಬೇತಿದಾರರು ಮಾಡಬೇಕಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
ಇತ್ತೀಚಿಗೆ ಕೊಪ್ಪಳದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕೊಪ್ಪಳ, ಶಾಲಾ ಶಿಕ್ಷಣ ಇಲಾಖೆ ಕೊಪ್ಪಳ ಸ್ಪಿರಿಟ್ ಕರಾಟೆ ಅಕಾಡೆಮಿ ಕೊಪ್ಪಳ ಸೇವಾ ವಿದ್ಯಾಲಯ ಕಿನ್ನಾಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರೌಢಶಾಲಾ ಹಾಗೂ ಪ್ರಾಥಮಿಕ ಶಾಲಾ ಮಟ್ಟದ 2023 24 ನೇ ಸಾಲಿನ ಜಿಲ್ಲಾಮಟ್ಟದ ಕರಾಟೆ ಕ್ರೀಡಾ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಪ್ರೌಢ ಹಾಗೂ ಪ್ರಾಥಮಿಕ ಶಿಕ್ಷಣದಲ್ಲಿ ಮಕ್ಕಳಿಗೆ ಹೆಚ್ಚಿನ ಮಟ್ಟದಲ್ಲಿ ಕರಾಟೆ ತರಬೇತಿ ನೀಡುವಂತಾಗಬೇಕು ಮಕ್ಕಳಲ್ಲಿ ಸಾಕಷ್ಟು ಪ್ರತಿಬಿರುತ್ತದೆ ಆದರೆ ಅವರಿಗೆ ಅವಕಾಶಗಳು ಸಿಗುವುದಿಲ್ಲ. ಅವಕಾಶಗಳನ್ನು ಕಲ್ಪಿಸುವ ಕೆಲಸ ಸರ್ಕಾರ ಮಾಡುತ್ತಿದೆ. ವಿಶ್ವದಲ್ಲಿ ಜನಸಂಖ್ಯೆಯಲ್ಲಿ ನಾವು ಮೊದಲನೇ ಸ್ಥಾನದಲ್ಲಿದ್ದೇವೆ. ಸೂಕ್ತ ತರಬೇತಿ ಸಿಕ್ಕರೆ ನಮ್ಮ ಮಕ್ಕಳು ಸಹ ಒಲಂಪಿಕ್ಸ್ ನಲ್ಲಿ ಪದಕವನ್ನು ಪಡೆಯುತ್ತಾರೆ. ಮಕ್ಕಳಿಗೆ ಪ್ರೋತ್ಸಾಹಿಸಬೇಕು ಮತ್ತು ಕ್ರೀಡಾ ಮನೋಭಾವನೆಯನ್ನು ಬಳಸಬೇಕು ಹೀಗಾದಾಗ ಗ್ರಾಮೀಣ ಮಟ್ಟದಿಂದ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟಕ್ಕೆ ನಮ್ಮ ಕ್ರೀಡಾಪಟುಗಳು ಬೆಳೆಯುತ್ತಾರೆ ಎಂದು ಹೇಳಿದರು.

ಉದ್ಯಮಿ ಶ್ರೀನಿವಾಸ ಗುಪ್ತಾ ಮಾತನಾಡಿ ಯಾವುದೇ ಆಯುಧಗಳಿಲ್ಲದೇ ತಮ್ಮ ಕೈಕಾಲುಗಳನ್ನು ಆಯುಧಗಳನ್ನಾಗಿಸಿಕೊಂಡು ಸ್ವರಕ್ಷಣೆ ಮಾಡಿಕೊಳ್ಳುವ ಕಲೆ ಕರಾಟೆ‌. ಶಾಲಾ ಶಿಕ್ಷಣದಲ್ಲಿ ಇದಕ್ಕಾಗಿ ಒಂದು ತರಗತಿಯನ್ನೂ ನಡೆಸಲಾಗುತ್ತಿದೆ. ವಿದೇಶಗಳಲ್ಲಿ ೧೧ನೇ ವಯಸ್ಸಿಗೆ ಮಕ್ಕಳು ಮುಂದೇನಾಗಬೇಕು ಎನ್ನುವುದನ್ನು ನಿರ್ಣಯಿಸಲಾಗುತ್ತೆ ಅವರಿಗೆ ತರಬೇತಿ ನೀಡಲಾಗುತ್ತೆ. ನಮ್ಮಲ್ಲೂ ಆ ರೀತಿಯ ತರಬೇತಿ ನೀಡುವಂತಾಗಬೇಕು ಎಂದು ಹೇಳಿದರು.
ವೇದಿಕೆಯ ಮೇಲೆ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ್, ಕೃಷ್ಣ ಗಲಬಿ,ವೆಂಕನಗೌಡ ಹಿರೇಗೌಡ್ರ, ಗಾಳೆಪ್ಪ ಪೂಜಾರ್, ಹೊನ್ನೂರಸಾಬ ಬೈರಾಪೂರ, ರಾಜಾಬಕ್ಷಿ ಎಚ್.ವಿ. ಬಾಷಾ ದಾವಣಗೆರೆ, ಮೌನೇಶ ಬಡಿಗೇರ ಸೇರಿದಂತೆ ತರವೇತುದಾರರು ಹಾಗೂ ಶಿಕ್ಷಕರು ಇದ್ದರು.

ಕ್ರೀಡಾ ಕೂಟದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಟ್ಟದ ೨೫೦ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!