11111

        ಶಾಸಕರಿಂದ ನಗರದ ರಸ್ತೆಗಳ ಅಭಿವೃದ್ಧಿ ನಿರ್ಲಕ್ಷ್ಯ : ಸೋಮನಗೌಡ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 28- ನಗರ ಹಾಗೂ  ಕ್ಷೇತ್ರದಲ್ಲಿ ಅನುದಾನವಿಲ್ಲದೆ ಹಾಗೂ ಇಚ್ಛಾ ಶಕ್ತಿ ಇಲ್ಲದೆ ಕ್ಷೇತ್ರಗಳು ಅಭಿವೃದ್ಧಿಯಾಗುತ್ತಿಲ್ಲ, ನಗರದಲ್ಲಿ ಹಲವಾರು  ಅಭಿವೃದ್ಧಿ ಕಾಮಗಾರಿಗಳು ಯಾಗುತ್ತಿಲ್ಲ ಕಾಂಗ್ರೆಸ ಸರ್ಕಾರ ಅಭಿವೃದ್ಧಿಗೆ ಹಣ ನೀಡುತ್ತಿಲ್ಲವೇಂದು ಜೆಡಿಎಸ್ ನಗರ ಘಟಕ ಅಧ್ಯಕ್ಷ ಸೋಮನಗೌಡ ಹೊಗರನಾಳ  ಆರೋಪಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು ರಾಜ್ಯದ ಪ್ರತಿ ಕ್ಷೇತ್ರಕ್ಕೆ ಅನುದಾನವಿಲ್ಲದೆ ಹಾಗೂ ರಾಜ್ಯ ಸರ್ಕಾರಕ್ಕೆ ಅಭಿವೃದ್ಧಿಯ ಇಚ್ಛಾ ಶಕ್ತಿ ಇಲ್ಲದೆ ಕ್ಷೇತ್ರಗಳು ಅಭಿವೃದ್ಧಿಯಾಗುತ್ತಿಲ್ಲ ಎಂದು ಕಾಂಗ್ರೆಸ್ ಪಕ್ಷದ  ಅನೇಕ ಶಾಸಕರು ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.‌

ಕೊಪ್ಪಳ ಜಿಲ್ಲೆಯಲ್ಲಿ ಮರಳು ದಂದೆ, ಕಾರ್ಖಾನೆಗಳಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ.BSPL ಪ್ಯಾಕ್ಟ್ರಿ ರದ್ದು ಮಾಡುವ ಹೋರಾಟದ ಕೊಪ್ಪಳ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಕೊಪ್ಪಳಕ್ಕೆ ಯಾವ ಪ್ಯಾಕ್ಟ್ರಿಗಳು ಬೇಡ ಎಂದು ನೇರವಾಗಿ ಹೇಳಿದ್ರು ಶ್ರೀಗಳ ಮಾತಿಗೆ ಬೆಲೆ ಕೊಡದೇ.. ಗೊಂಡಬಾಳ ಮತ್ತು ಮುದ್ದಾಬಳ್ಳಿ ಗ್ರಾಮಗಳಲ್ಲಿ ಶುಗರ್ ಪ್ಯಾಕ್ಟ್ರಿ ಪ್ರಾರಂಭದ ಹಂತದಲ್ಲಿ ಇದೆ.

ಕೊಪ್ಪಳ ತಾಲ್ಲೂಕು ಮತ್ತು ನಗರದಲ್ಲಿ ರಸ್ತೆಗಳನ್ನು ಅಭಿವೃದ್ಧಿ ಮಾಡಲಿ, ಭಾಗ್ಯನಗರದ ರಸ್ತೆ ಬಗ್ಗೆ ಯಾರು ಹೇಳುತ್ತಿಲ್ಲ, ನಗರದಲ್ಲಿರುವ ಚರಂಡಿಗಳ ಬಗ್ಗೆ ನಗರಸಭೆ ಸದಸ್ಯರು ಗಮನ ಕೊಡುತ್ತಿಲ್ಲ. ಕುಷ್ಟಗಿ ರಸ್ತೆ ಬ್ರಿಡ್ಜ್ ಪೆಟ್ರೋಲ್ ಬಂಕ್ ಹತ್ತಿರ  ರಸ್ತೆ ಸುಮಾರು ದಿನಗಳಿಂದ ರಸ್ತೆ ದುರಸ್ತಿಗೊಂಡಿದೆ ಅದನ್ನು ಇಲ್ಲಿಯವರೆಗೆ ಸರಿಮಾಡುತ್ತಿಲ್ಲ ಕಾಂಗ್ರೆಸ್‌ ಶಾಸಕರು- ಸಂಸದರು ಅಭಿವೃದ್ಧಿಗೆ ಒತ್ತು ನೀಡುವಂತೆ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!