
ಶಾಸಕರಿಂದ 1.80 ಕೋಟಿ ರೂ ವೆಚ್ಚದ ನೂತನ ಶಾಲಾ ಕಟ್ಟಡಕ್ಕೆ ಅಡಿಗಲ್ಲು
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 4- ಮಕ್ಕಳಿಗೆ ಉತ್ತಮ ಶಿಕ್ಷಣಕ್ಕೆ ವ್ಯವಸ್ಥೆ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ನೂತನ ಕಟ್ಟಡಕ್ಕೆ ಚಾಲನೆ ನೀಡಲಾಗಿದೆ ಮಕ್ಕಳ ಗುಣಮಟ್ಟದ ವಿದ್ಯಾಭ್ಯಾಸ ನಿರ್ಮಿಸುವ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಶಾಸಕ ಬಿ.ಎಂ.ನಾಗರಾಜ ಹೇಳಿದರು.
ತಾಲೂಕಿನ ಕುಡುದರ ಹಾಳು ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀಧರ ಗಡ್ಡ ಗ್ರಾಮದಲ್ಲಿ ಕೆ ಕೆ ಆರ್ ಡಿ ಬಿ ಯೋಜನೆ ಅಡಿಯಲ್ಲಿ 1.80 ಕೋಟಿ ರೂಗಳ ವೆಚ್ಚದಲ್ಲಿ ಶಾಲೆಯ ನೂತನ ಕಟ್ಟಡದ ನಿರ್ಮಾಣ ಕಾಮಗಾರಿಗೆ ಅವರು ಅಡಿಗಲ್ಲು ಕಾರ್ಯ ನೆರವೇರಿಸಿದರು.
ಮಾಜಿ ಶಾಸಕ ಟಿ ಎಂ ಚಂದ್ರಶೇಖರಯ್ಯ ಸ್ವಾಮಿ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಗುರಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ಸೋಮನಗೌಡ ಸಿದ್ದಲಿಂಗ ಸ್ವಾಮಿ ಗಟ್ಟಿ ರಾಮಲಿಂಗಪ್ಪ ಪ್ರೌಢಶಾಲಾ ಮುಖ್ಯ ಗುರು ಬಿ ಎಂ ಸೌದತ್ತಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ದೊಡ್ಡಬಸಪ್ಪ ಪಿಡಿಒ ಲಿಂಗಯ್ಯ ಸ್ವಾಮಿ ಕಾಂಗ್ರೆಸ್ ಮುಖಂಡರಾದ ಬಿಜಿ ಮಂಜುನಾಥ್ ರೆಡ್ಡಿ ಟಿ ಎಂ ಸಿದ್ದಲಿಂಗಯ್ಯ ಸ್ವಾಮಿ ಬಿ ವೆಂಕಟೇಶ್ ರಾವಿಹಾಳ್ ಹುಸೇನ್ ಪೀರ ಗಿರೀಶ್ ಗೌಡ ಸಿರುಗುಪ್ಪ ನಗರಸಭಾ ಸದಸ್ಯರಾದ ಹೆಚ್ ಗಣೇಶ್ ಬಿ ಎಂ ಅಪ್ಪಾಜಿ ನಾಯಕ್ ಮೀರ್ ಹುಸೇನ್ ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರು ಲೋಕೋಪಯೋಗಿ ಇಲಾಖೆಯ ಅಭಿಯಂತರ ಚನ್ನನಗೌಡ ಅನಿಲ್ ಎಸ್ ಡಿ ಎಂ ಸಿ ಸದಸ್ಯರು ಮತ್ತಿತರರು ಇದ್ದರು.