
ಶಾಸಕ ಜನಾರ್ದನ್ ರೆಡ್ಡಿ ಅವರ ಕುಟಿರಕ್ಕೆ ಬೆಂಕಿ
ಕರುನಾಡ ಬೆಳಗು ಸುದ್ದಿ
ಗಂಗಾವತಿ, ೨೭- ಗಂಗಾವತಿ ವಿಧಾನ ಸಭಾ ಶಾಸಕ ಜನಾರ್ದನ್ ರೆಡ್ಡಿ ಅವರ ಪಂಪಾಸರೋವ ಕಲ್ಯಾಣಿ ಬಳಿನ ಗೆಸ್ಟ್ ಹೌಸ್ ಗೆ (ಗುಡಿಸಲಿಗೆ) ಆಕಸ್ಕಿಕವಾಗಿ ಬೆಂಕಿ ತಗುಲಿ, ಗೆಸ್ಟ್ ಹೌಸ್ ಮೆಲ್ಭಾಗ ಸುಟ್ಟು ಕರಕಲಾಗಿದ ಘಟನೆ ಜರುಗಿದೆ.
ಬುಧವಾರ ಈ ಘಟನೆ ಸಂಭವಿಸಿದ್ದು ಕುಟೀರ ಬೆಂಕಿ ಅವಘಡ ಗಮನಿಸಿದ ಸ್ಥಳೀಯರು ಫೈರ್ ಸ್ಟೇಶನ್ ಗೆ ಕರೆಮಾಡಿ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡುತ್ತಿದೆ ಎನ್ನಲಾಗಿದೆ.
ಪಂಪಾಸರೋವರ ರಾಮಾಯಣ ಸ್ಥಳವಾಗಿದ್ದು, ಇಲ್ಲಿ ಶಬ ರಿ ರಾಮನಿಗಾಗಿ ಉಪಹಾರ ನೀಡಲು ಕಾದಿದ್ದಳು ಎಂಬ ಇತಿಹಾಸದ ಉಲ್ಲೇಖವಿದೆ. ವಿದ್ಯುತ್ ಅವಗಡಕ್ಕೆ ಇನ್ನೂ ಕಾರಣ ತಿಳಿದು ಬಂದಿಲ್ಲ ಪೋಲಿಸರು ಸ್ಥಳಕ್ಕೆ ಬೇಟಿ ನೀಡಿ ರಿಶೀಲಿಸುತ್ತಿದ್ದಾರೆ.