
ಶಾಲೆಯ ಕಟ್ಟಡ ದುರಸ್ತಿಗೆ ಆಗ್ರಹ
ಶಾಸಕ ವಿರುದ್ಧ ಬಹದ್ದೂರ್ ಬಂಡಿ ಗ್ರಮಸ್ಥರು ಪ್ರತಿಭಟನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 22- ಸಮೀಪದ ಬಹದ್ದೂರ ಬಂಡಿ ಗ್ರಾಮದಲ್ಲಿರುವ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ದುರಸ್ತಿ ಮಾಡುವಂತೆ ಆಗ್ರಹಿಸಿ ಶಾಸಕ ರಾಘವೇಂದ್ರ ಹಿಟ್ನಾಳ ಸ್ಥಳಕ್ಕೆ ಆಗಮಿಸ ಬೇಕು ಎಂದು ಆಗ್ರಹಿಸಿ ಪಾಲಕರು ಹಾಗೂ ವಿಧ್ಯಾರ್ಥಿಗಳು ಧರಣಿ ಮಾಡುತ್ತಿದ್ದಾರೆ.
ಗ್ರಾಮದಲ್ಲಿ ಮಂಗಳವಾರ ರಾತ್ರಿ ಪೂರ್ತಿ ಧರಣಿ ನಡೆಸಿದ ಗ್ರಾಮಸ್ಥರು ರಾಜ್ಯ ಸರ್ಕಾರ ಹಾಗೂ ಕೊಪ್ಪಳ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ ವಿರುದ್ಧ ವಿರುದ್ದ ಘೋಷಣೆ ಕುಗಿ ಪ್ರತಿಭಟನೆ ನಡೆಸಿರು.
ಶಾಲಾ ಕಟ್ಟಡ ಹಾಗೂ ಮೇಲ್ ಚಾವಣಿ ಶಿಥಿಲಾವಸ್ಥೆಗೆ ತಲುಪಿದರೂ ದುರಸ್ತಿ ಮಾಡುತ್ತಿಲ್ಲ. ವಿದ್ಯಾರ್ಥಿಗಳು ಜೀವಭಯದಲ್ಲಿ ತರಗತಿಗೆ ಹೋಗಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಗ್ರಾಮಸ್ಥರು ಹಾಗೂ ಪೋಷಕರು ಶಾಲೆಯ ಆವರಣದಲ್ಲಿ ಧರಣಿ ನಡೆಸುತ್ತಿದ್ದಾರೆ.
ಈ ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿ ತನಕ ಇದ್ದು, 321 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇಷ್ಟೊಂದು ಸಂಖ್ಯೆಯ ವಿದ್ಯಾರ್ಥಿಗಳಿಗೆ ಮೂರು ಕೊಠಡಿಗಳಷ್ಟೇ ಇವೆ ಇಲಾಖೆ ಹಾಗೂ ಶಾಸಕರು ನಿರ್ಲಕ್ಷ್ಯ ಇದಕ್ಕೆ ಕಾರಣವೇಂದು ಆರ್ಕೋಶ ವ್ಯಕ್ತಪಡಿಸಿದ್ದಾರೆ.
ಹಿಂದೆಟು; ಗ್ರಮದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿಲ್ಲ ಎಷ್ಟು ಸಾರಿ ಮನವಿ ಮಾಡಿದರು ಇಲಾಖೆ ಕ್ರಮ ಕೈಗೊಂಡಿಲ್ಲಾ ವೇಂದು ಆರೋಪಿಸಿ ಧರಣಿಯಲ್ಲಿ ಮಾಡುತ್ತಿದ್ದಾರೆ.
ಅನುದಾನ ; ಗ್ರಮದ ಶಾಲೆಗೆ ಹೊಸ ಕಟ್ಟಡ ನಿರ್ಮಾಣ ಮಾಡುವಂತೆ ಶಾಸಕ ಹಿಟ್ನಾಳ ಮೂರು ವರ್ಷಗಳ ಹಿಂದೆ ಅನುದಾನ ನೀಡಿದ್ದರು. ಗುತ್ತಿಗೆದಾರ ಅರ್ಧದಷ್ಟು ಮಾತ್ರ ಕಟ್ಟಡ ನಿರ್ಮಿಸಿ ಆರು ತಿಂಗಳಿಂದ ಕೆಲಸ ಸ್ಥಗಿತ ಮಾಡಿದ್ದಾನೆ. ವಿದ್ಯಾರ್ಥಿಗಳು ಜೀವಭಯದ ನಡುವೆ ಶಾಲೆಗೆ ಬರಬೇಕಾಗಿದೆ ಎಂದು ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನೂ ಕೆಲ ಪೋಷಕರು ಕಟ್ಟಡ ದುರಸ್ತಿಯಾಗುವ ತನಕ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ವೇಂದು ಪಟ್ಟು ಹಿಡಿದಿದ್ದಾರೆ.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಯೋಗಾನಂದ ಲೇಬಗೇರಿ, ದಾದಪೀರ್ ಮಂಡಲಗೇರಿ, ಶೇಖರಪ್ಪ ಘಂಟಿ, ಪತ್ರಯ್ಯ ಆರಾಧಿಮಠ ಎಸ್ ಡಿಎಂಸಿ ಅಧ್ಯಕ್ಷ ಮಲ್ಲೇಶ್ ಹಲಗಿ, ಸದಸ್ಯರಾದ ಮಂಜುನಾಥ್ ಕುರಿ,ಮೈಲಪ್ಪ ಕಂಬದಮನಿ, ಬಾಬಾ ಕಿಲ್ಲೆದಾರ, ಬಸವರಾಜ್ ಕಬ್ಬೇರ್, ಗ್ರಾಮಸ್ಥರಾದ ಮಾರುತಿ ಲೇಬಗೇರಿ, ರವಿಕುರಿ ಬಾಬಜಾನ್, ಮಂಜುನಾಥ ಗ್ಯಾನಪ್ಪನವರ್ ಹಾಗೂ ವಿಧ್ಯಾರ್ಥಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.